Advertisement
ಸುದ್ದಿಗಳು

ಸುಬ್ರಹ್ಮಣ್ಯದಲ್ಲಿ ಅತ್ಯಾಚಾರ ಆರೋಪದ ಶಿಕ್ಷಕನ ವಿರುದ್ಧ ಪ್ರತಿಭಟನೆ ಸಿದ್ಧತೆ | ಪವಿತ್ರ ಕ್ಷೇತ್ರದ ವಿದ್ಯಾಸಂಸ್ಥೆಗೆ ಅತ್ಯಾಚಾರಿ ಶಿಕ್ಷಕ ಬೇಡ – ಬಲಗೊಂಡ ಒತ್ತಾಯ |

Share

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಪದವಿಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್‌ ವಿಭಾಗದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಗುರುರಾಜ್‌ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ತಕ್ಷಣವೇ ಶಿಕ್ಷಣ ಸಂಸ್ಥೆಯಿಂದ ವಜಾ ಮಾಡಬೇಕು ಹಾಗೂ ಅತ್ಯಾಚಾರದ ಆರೋಪ ಇರುವ ಶಿಕ್ಷಕ ಪವಿತ್ರ ಶಿಕ್ಷಣ ಸಂಸ್ಥೆಗೆ ಅಗತ್ಯವಿಲ್ಲ ಎಂದು ಸುಬ್ರಹ್ಮಣ್ಯದ ಜನರು ಹಾಗೂ ಹಿರಿಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಶಿಕ್ಷಕ ಗುರುರಾಜ್‌ ವಿದ್ಯಾರ್ಥಿನಿಯೊಬ್ಬಳನ್ನು ಪ್ರಾಜೆಕ್ಟ್‌ ಕೆಲಸ ಹಾಗೂ ಟ್ಯೂಷನ್‌ ನೆಪದಲ್ಲಿ  ಮನೆಗೆ ಕರೆಯಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಹಾಗೂ ಅತ್ಯಾಚಾರ ಮಾಡಿದ ಬಗ್ಗೆ ವಿದ್ಯಾರ್ಥನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ  ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.  ಗುರುರಾಜ್‌ ವಿಕೃತಕಾಮಿ ಎಂಬುದು ಪೊಲೀಸ್‌ ತನಿಖೆ ವೇಳೆ ಬಯಲಾಗಿತ್ತು. ಹೀಗಾಗಿ ಫೋಕ್ಸೋ ಕಾಯಿದೆಯನ್ವಯ ಅಪ್ತಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ನಡೆಸಿದ ಬಗ್ಗೆ ಕೇಸು ದಾಖಲಾಗಿತ್ತು.

ಪೊಲೀಸ್‌ ತನಿಖೆಯ ವೇಳೆ ಆರೋಪಿ ಶಿಕ್ಷಕ ವಿದ್ಯಾರ್ಥಿನಿಯನ್ನು ಪ್ರಾಜೆಕ್ಟ್‌ ಕೆಲಸ ಹಾಗೂ ಟ್ಯೂಷನ್‌ ನೆಪದಲ್ಲಿ  ಮನೆಗೆ ಕರೆಯಿಸಿ ಪತ್ರ ಬರೆಸುವುದು , ಫೋಟೊ ತೆಗೆಸುವುದು  ಸೇರಿದಂತೆ ಕೆಟ್ಟ ಕೆಲಸಗಳಿಗೆ ಪ್ರೇರೇಪಣೆ ನೀಡುತ್ತಿರುವುದು ಹಾಗೂ ಬ್ಲಾಕ್‌ ಮೇಲ್‌ ಮಾಡಿ ಹಣ ವಸೂಲು ಮಾಡುತ್ತಿರುವ ಸಂಗತಿಯೂ  ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಆರೋಪಿ ಶಿಕ್ಷಕ ಗುರುರಾಜ್‌ ಇದಲ್ಲದೆ ಅನೇಕ ಇತರ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಉದ್ಯೋಗ ಒದಗಿಸಿಕೊಡುವ ಜಾಲ ಸೇರಿದಂತೆ ಇತರ ವ್ಯವಹಾರ ನಡೆಸುತ್ತಿದ್ದುದು ಅಲ್ಲದೆ ತನ್ನ ಸಂಬಳಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಸ್ತಿಯನ್ನೂ ಹೊಂದಿದ್ದ ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಹೀಗಾಗಿ ಇಂತಹ ಶಿಕ್ಷಕ ಪವಿತ್ರ ಕ್ಷೇತ್ರದ ಆಡಳಿತದಲ್ಲಿ ಇರುವ ಕಾಲೇಜಿನಿಂದ ವಜಾ ಮಾಡಬೇಕು ಎಂದು ಹಿರಿಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆ.11  ರಂದು ಕುಕ್ಕೆ ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜು ವಠಾರದಲ್ಲಿ  ಈ ಪ್ರತಿಭಟನೆ ನಡೆಯಲಿದೆ.

ಈಗಾಗಲೇ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜು ಹಿರಿಯ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದು ತಕ್ಷಣವೇ ಈ ಶಿಕ್ಷಕ ಹಾಗೂ ಇಂತಹ ಶಿಕ್ಷಕರನ್ನು  ಪವಿತ್ರ ಕ್ಷೇತ್ರದ ಕಾಲೇಜಿನಲ್ಲಿ  ಇರಿಸಿಕೊಳ್ಳಬಾರದು ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿನಿಯ ಪೋಷಕರು ಶಿಕ್ಷಕ ಎಂಬ ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಧೈರ್ಯದಿಂದ ಶಿಕ್ಷಣದ ಕಾರಣಕ್ಕೆ ಪ್ರಾಜೆಕ್ಟ್‌ ಕೆಲಸ ಹಾಗೂ ಟ್ಯೂಷನ್‌ ಗೆ ಕಳುಹಿಸುತ್ತಿದ್ದರು. ಆದರೆ ಈಗ ಈ ಶಿಕ್ಷಕನ ನಿಜ ಬುದ್ಧಿ ಬಯಲಾಗಿದೆ. ಇಂತಹ ಅತ್ಯಾಚಾರಿ ಶಿಕ್ಷಕನ ಬಗ್ಗೆ ಸಮಗ್ರ ತನಿಖೆಯಾಗಬೇಕು, ಈತನ ಜೊತೆಗಾರರ ಬಗ್ಗೆ ಹಾಗೂ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ ಈ ಪ್ರಕರಣವನ್ನು ಪೊಲೀಸ್‌ ಇಲಾಖೆ ಹಾಗೂ ಇಲಾಖೆಗಳು ಗಂಭೀರವಾಗಿ ಪಡೆಯದೇ ಇದ್ದರೆ ಮಹಿಳಾ ಸಂಘಟನೆಗಳಿಂದಲೂ ಬೀದಿಗಿಳಿದು ಹೋರಾಟ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

7 hours ago

ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?

ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…

14 hours ago

ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!

ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…

15 hours ago

ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…

20 hours ago

ರೈತನ ಹೊಲದಿಂದ ನಿಮ್ಮ ತಟ್ಟೆಯವರೆಗೆ… AI ಬರಲಿದೆ..!

ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…

20 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…

1 day ago