ಈ ಮೊದಲು ಮತ್ತು ಪ್ರಸಕ್ತದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಒಟ್ಟು 14 ಮಾನದಂಡಗಳಿದ್ದು, ಅದರಂತೆ ಗ್ರಾಹಕರಿಗೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಆದರೆ ಇದುವರೆಗೂ 10 ಲಕ್ಷಕ್ಕಿಂತಲೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳು ಅನರ್ಹವಾಗಿದ್ದು ಯಾವುದೇ ಮಾನದಂಡಗಳನ್ನು ಸರಿಯಾಗಿ ಪಾಲಿಸದೆ ರೇಷನ್ ಕಾರ್ಡಿನ ಎಲ್ಲಾ ಅನುಕೂಲಗಳನ್ನು ಪಡೆಯುತ್ತಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮೀಸಲಾಗಿರುವ ಬಿಪಿಎಲ್ ರೇಷನ್ ಕಾರ್ಡ್ ಈಗ ದುರ್ಬಳಕೆ ಆಗುತ್ತಿದ್ದು, ಇವಳ ಎಕರೆಗಿಂತಲೂ ಮೇಲೆ ಇರುವಂತಹ ರೈತರು ಸಹ ಕಾರ್ಡುಗಳನ್ನು ಹೊಂದಿದ್ದಾರೆ, ಅಲ್ಲದೆ 100 ಸಿಸಿ ಗಿಂತ ಹೆಚ್ಚಿನ ಇಂಧನ ಯುಕ್ತ ವಾಹನಗಳು ಮನೆಯಲ್ಲಿ ಇದ್ದಲ್ಲಿ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ದೊರೆಯುವುದಿಲ್ಲ. ಹೀಗಿದ್ದರೂ ಸಹ ಇಂಥವರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡು ಸರ್ಕಾರದ ಎಲ್ಲಾ ಸವಲತ್ತುಗಳನ್ನು ದೋಚುತ್ತಿದ್ದಾರೆ.
- ಅಂತರ್ಜಾಲ ಮಾಹಿತಿ