ಹೊಸರುಚಿ | ಎಳೆಯ ಹಲಸಿನ ಕಾಯಿ 65 – ಕರಕರಾ, ರುಚಿಕರ ಸ್ನ್ಯಾಕ್ ರೆಸಿಪಿ

February 22, 2026
9:09 AM
ಎಳೆಯ ಹಲಸಿನ ಕಾಯಿ 65 ಮಾಡುವ ಸುಲಭ ವಿಧಾನ ಇಲ್ಲಿದೆ. ಮನೆಯಲ್ಲೇ ಸಿಗುವ ಸಾಮಗ್ರಿಗಳಿಂದ ಕರಕರಾ, ರುಚಿಕರ ಸ್ನ್ಯಾಕ್ ತಯಾರಿಸಿ ಚಹಾ ಅಥವಾ ಕಾಫಿ ಜೊತೆ ಸವಿಯಿರಿ.

ಎಳೆಯ ಹಲಸಿನ ಕಾಯಿ (Raw Jackfruit) ಬಳಸಿ ಮಾಡುವ ಹಲಸಿನ ಕಾಯಿ 65 ಒಂದು ಅತ್ಯಂತ ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್. ಚಹಾ ಅಥವಾ ಕಾಫಿಯ ಜೊತೆ ಸವಿಯಲು ಇದು ಸೂಪರ್. ಹೊರಗೆ ಕರಕರಾ, ಒಳಗೆ ಮೃದುವಾದ ರುಚಿಯುಳ್ಳ ಈ ಪದಾರ್ಥವನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು :

  • ಎಳೆಯ ಹಲಸಿನ ಕಾಯಿ – 65 (ಸಿಪ್ಪೆ ತೆಗೆದು, ತುಂಡುಗಳಾಗಿ ಕಟ್ ಮಾಡಿದದ್ದು)

  • ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಚಮಚ

  • ಕಾರ್ನ್ ಫ್ಲೋರ್ – ¼ ಕಪ್

  • ಅಕ್ಕಿ ಹಿಟ್ಟು – 2 ಚಮಚ

  • ಮೊಸರು – 2 ಚಮಚ

  • ನಿಂಬೆ ರಸ – 1 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – ಕರಿಯಲು

ಮಸಾಲೆ ಪುಡಿಗಳು:

  • ಗರಂ ಮಸಾಲ – 1 ಚಮಚ

  • ಅರಿಶಿನ ಪುಡಿ – ಸ್ವಲ್ಪ

  • ಜೀರಿಗೆ ಪುಡಿ – 1 ಚಮಚ

  • ಕೊತ್ತಂಬರಿ ಪುಡಿ – 2 ಚಮಚ

  • ಮೆಣಸಿನ ಪುಡಿ – 1 ಚಮಚ

ಮಾಡುವ ವಿಧಾನ: ಕಟ್ ಮಾಡಿದ ಎಳೆಯ ಹಲಸಿನ ಕಾಯಿ ತುಂಡುಗಳನ್ನು ಕುಕ್ಕರ್‌ಗೆ ಹಾಕಿ, ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿ 3 ಸೀಟಿ ಕೂಗುವವರೆಗೆ ಬೇಯಿಸಿ.  ನಂತರ ನೀರನ್ನು ಸೋಸಿ, ಹಲಸಿನ ತುಂಡುಗಳನ್ನು ತಣ್ಣಗಾಗಲು ಬಿಡಿ. ಇದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಮೊಸರು, ನಿಂಬೆ ರಸ ಮತ್ತು ಎಲ್ಲಾ ಮಸಾಲೆ ಪುಡಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಾದ ಎಣ್ಣೆಯಲ್ಲಿ ಈ ಮಿಶ್ರಣವನ್ನು ಹಾಕಿ ಕೆಂಪಗೆ ಕರಕರಾಗುವವರೆಗೆ ಕರಿಯಿರಿ. ಎಣ್ಣೆಯಿಂದ ತೆಗೆದು, ಹೆಚ್ಚುವರಿ ಎಣ್ಣೆ ಸೋಸಲು tissue ಮೇಲೆ ಇಡಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಬಿಸಿ ಬಿಸಿಯಾಗಿ ಈರುಳ್ಳಿ ಸ್ಲೈಸ್ ಜೊತೆ ಸವಿಯಬಹುದು, ಟೊಮೇಟೊ ಸಾಸ್ ಅಥವಾ ಮಯೊನೇಸ್ ಜೊತೆ ತಿನ್ನಬಹುದು, ಚಹಾ ಅಥವಾ ಕಾಫಿ ಜೊತೆ ಸವಿಯಲು ಅತ್ಯುತ್ತಮ ಸ್ನ್ಯಾಕ್.

Jackfruit 65 is a crispy and delicious snack made using tender jackfruit pieces, spices, and flour coating. It is deep-fried until golden and served hot with tea or coffee. This easy village-style recipe is healthy, tasty, and perfect for evening snacks.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಅತಿಹೆಚ್ಚು ಮಳೆ ಬೀಳುವ ಬೆಟ್ಟಗಳು ಒಣಗುತ್ತಿವೆಯೇ? – ಮೇಘಾಲಯದ ನೀರಿನ ಸಂಕಷ್ಟದ ಎಚ್ಚರಿಕೆ
March 17, 2026
7:14 AM
by: ದ ರೂರಲ್ ಮಿರರ್.ಕಾಂ
ಗಲ್ಫ್ ಯುದ್ಧದ ಪರಿಣಾಮ | ₹11.8 ಬಿಲಿಯನ್ ಭಾರತೀಯ ಕೃಷಿ ರಫ್ತು ಮಾರುಕಟ್ಟೆ ಅಪಾಯದಲ್ಲಿ
March 17, 2026
6:44 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-03-2026 | ಹವಾಮಾನದಲ್ಲಿ ಏಕಾಏಕಿ ಬದಲಾವಣೆ – ರಾಜ್ಯದ ಹಲವೆಡೆ ಸಂಜೆ ಮಳೆ ಸಾಧ್ಯತೆ
March 16, 2026
3:26 PM
by: ಸಾಯಿಶೇಖರ್ ಕರಿಕಳ
ಎಲ್ಲೆಡೆ ಹೆಚ್ಚಾಗುತ್ತಿರುವ ಬಿಸಿಲ ಬೇಗೆ ; ಪ್ರಾಣಿ-ಪಕ್ಷಿಗಳಿಗೆ ನೀರಿನ ಅಭಾವ
March 16, 2026
7:13 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror