Advertisement
Opinion

ನಕಲಿ ತುಪ್ಪದ ಅಸಲಿ ಸತ್ಯ | ನಕಲಿ ತುಪ್ಪವನ್ನು ತಿಂದು ಅನಾರೋಗ್ಯಕ್ಕೀಡಾಗಬೇಡಿ…|

Share

ಸಾವಿರಾರು ವರ್ಷಗಳಿಂದ ಮನುಷ್ಯನಿಗೆ ನೂರಾರು ಪ್ರಯೋಜನಗಳನ್ನು ಕೊಟ್ಟು, ಹತ್ತಾರು ಆಪಾದನೆಗಳನ್ನು ಇಂದಿಗೂ ತನ್ನ ಮೇಲೆ ಹೊತ್ತಿರುವ ಜೀವದ್ರವವೇ ತುಪ್ಪ(Ghee). ಹಿಂದೆ ನಮ್ಮ ಪೂರ್ವಜರೆಲ್ಲರೂ ತುಪ್ಪವನ್ನು ಪ್ರತಿ ನಿತ್ಯ ಸೇವಿಸುತ್ತಾ ನೂರು ವರ್ಷಕ್ಕಿಂತ ಹೆಚ್ಚು ಕಾಲ ಆರೋಗ್ಯ(Health)ಪೂರ್ಣ ಜೀವನವನ್ನು ನಡೆಸುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿಂದು ಅಮೃತವಾಗಿದ್ದ ತುಪ್ಪ ಕಲಬೆರಕೆಯಾಗಿ, ಮಾಂಸಾಹಾರವಾಗಿ ಮತ್ತು ಮಿಶ್ರ ತಳಿಗಳ ಫಲವಾಗಿ ತನ್ನ ಸತ್ವವನ್ನು ಕಳೆದುಕೊಂಡು ವಿಷವಾಗಿ ಪರಿಣಮಿಸಿದೆ. ಹೀಗಾಗಿ ಸಾಕಷ್ಟು ವೈದ್ಯರು ಇಂದಿನ ದಿನಗಳಲ್ಲಿ ತುಪ್ಪವನ್ನು ಸೇವಿಸಬೇಡಿ, ನಕಲಿ ತುಪ್ಪವನ್ನು ತಿಂದು ಅನಾರೋಗ್ಯಕ್ಕೀಡಾಗಬೇಡಿ ಎಂಬುದಾಗಿ ಸಲಹೆ ನೀಡುತ್ತಿರುವುದು ಸಾಮಾನ್ಯವಾದುದಾಗಿದೆ.

Advertisement
Advertisement

ಇಷ್ಟಕ್ಕೆ ನಿಲ್ಲದ ಇದರ ಅವಾಂತರ ಒಂದು ಹೆಜ್ಜೆ ಮುಂದಕ್ಕೆ ಹೋಗಿ ದೇವರಿಗೆ ಹಚ್ಚುವ ದೀಪದಿಂದ ಹಿಡಿದು ಹೋಮ ಹವನಕ್ಕೂ ಇದೇ ನಕಲಿ ತುಪ್ಪವನ್ನು ಬಳಸುವಂತಾಗಿರುವುದು ಅಪಾಯದ ಸಂಕೇತವಾಗಿದೆ. ಇದರಿಂದ ಗೋವುಗಳ ಹತ್ಯೆ ಹೆಚ್ಚಾಗುವುದಷ್ಟೇ ಅಲ್ಲದೆ ಪರಿಸರ ಕೂಡ ಮಾಲಿನ್ಯವಾಗುತ್ತಿದೆ. ಹೋಮ ಹವನಗಳಲ್ಲಿ ಯಥೇಚ್ಛವಾಗಿ ಇದನ್ನು ಬಳಸುತ್ತಿರುವುದರಿಂದ ಹಲವು ವಿಷಕಾರಿ ಅನಿಲಗಳು ಉತ್ಪತ್ತಿಯಾಗಿ ವಾತಾವರಣದಲ್ಲಿ ಸೇರಿಕೊಂಡು ಸುತ್ತಮುತ್ತಲಿದ್ದವರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತಿದೆ. ಹೀಗೆ ಇದರ ಹೊಗೆಯನ್ನು ಕುಡಿದು ಅನಾರೋಗ್ಯಕ್ಕಿಡಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಹಜವಾಗಿ ಸಾಂಪ್ರದಾಯಿಕ ವಿಧಾನದಲ್ಲಿ ತುಪ್ಪವೆಂಬುದು, ಹಾಲು, ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ, ಆನಂತರ ಬೆಣ್ಣೆಯನ್ನು ಕಾಯಿಸುವುದರಿಂದ ದೊರೆಯುತ್ತದೆ. ಹೀಗೆ ಸಂಸ್ಕಾರಯುತವಾಗಿ ದೊರೆಯುವ ತುಪ್ಪವು ಅಮೃತ ಸಮಾನವಾದುದಾಗಿದ್ದು ದೇಹಕ್ಕೂ ಮತ್ತು ದೇವರಿಗೂ ಶ್ರೇಷ್ಠವಾದುದಾಗಿದೆ.

Advertisement

ವಿಪರ್ಯಾಸವೆಂದರೆ ಇಂದು ಈ ರೀತಿಯ ತುಪ್ಪ ತಯಾರಿಕೆ ಅತಿ ವಿರಳವೆಂದೇ ಹೇಳಲಾಗಿದೆ. ಇದನ್ನು ಬಿಟ್ಟು ಪಾಕೆಟ್ ಹಾಲನ್ನು ಕಾಯಿಸಿದಾಗ ಮೇಲೆ ನಿಲ್ಲುವ ಕೆನೆಯನ್ನು ತೆಗೆದು ಪುನಃ ಕಾಯಿಸುವುದರಿಂದ ತುಪ್ಪ ಎಂದು ಕರೆಯಲಾಗುವ ವಸ್ತುವನ್ನು ಬಹುತೇಕ ಕಡೆಗಳಲ್ಲಿ ತೆಗೆಯಲಾಗುತ್ತಿದೆ. ಇದು ತುಪ್ಪವಾಗಿರದೆ ಕೇವಲ ಕೊಬ್ಬಾಗಿರಲು ಮಾತ್ರ ಸಾಧ್ಯ ಎಂಬುದು ಇಂದಿನ ಆಯುರ್ವೇದ ಪಂಡಿತರ ಅಭಿಪ್ರಾಯವಾಗಿದೆ. ಹೀಗಾಗಿ ಇಂದು ಶುದ್ಧ ತುಪ್ಪದ ವಿಚಾರದಲ್ಲಿ ತುಪ್ಪ ಮಾಡುವ ವಿಧಾನವೇ ಪ್ರಧಾನ ಎಂಬುದಂತು ಬಹು ಸ್ಪಷ್ಟ. ಇದರೊಂದಿಗೆ ತುಪ್ಪ ತಯಾರಿಕೆಯಲ್ಲಿ ಬಳಸುವ ಹಾಲು ಕೂಡ ಯಾವ ಪ್ರಾಣಿಯದ್ದು ಎಂಬುದು ಅತಿ ಪ್ರಮುಖವಾದುದು. ಹೀಗಾಗಿ ಪ್ರತಿಯೊಬ್ಬರ ಆಯ್ಕೆ ಭಾರತೀಯ ಗೋವುಗಳ ಹಾಲಾಗಿದ್ದರೆ ಒಳಿತು. ಇಲ್ಲದಿದ್ದಲ್ಲಿ ತುಪ್ಪ ತನ್ನ ಪ್ರಭಾವವನ್ನು ತೋರಲು ಸಾಧ್ಯವೇ ಇಲ್ಲ.

ವಿಪರ್ಯಾಸವೆಂದರೆ ನಾವುಗಳಿಂದು ಇಂತಹ ಸಂಸ್ಕಾರವಿಲ್ಲದ ತುಪ್ಪವನ್ನಷ್ಟೇ ಅಲ್ಲದೆ ಹಾಲೇ ಇಲ್ಲದೆ ತಯಾರಾದ ತುಪ್ಪವನ್ನು ಅಂಗಡಿಯಲ್ಲಿ ಕಡಿಮೆ ಬೆಲೆಗೆ ಕೇಳಿ ಪಡೆಯುವುದರೊಂದಿಗೆ ನಕಲಿ ತುಪ್ಪದ ಮಾರುಕಟ್ಟೆಯನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದೇವೆ.

Advertisement

ಸತ್ಯದ ಅರಿವಾದ ಮೇಲೂ ಇಷ್ಟಕ್ಕೆ ನಿಲ್ಲದ ನಮ್ಮ ಸಮರ್ಥನೆ ಬೇಡರ ಕಣ್ಣಪ್ಪನಿಂದ ಮಾಂಸವನ್ನೇ ಸ್ವೀಕರಿಸಿದ್ದ ಭಗವಂತ ಈ ತುಪ್ಪವನ್ನು ಸ್ವೀಕರಿಸಿದೇ ಇರುತ್ತಾನೆಯೇ ಎಂದು ಹೇಳುವಲ್ಲಿಗೆ ಬಂದು ನಿಂತಿದೆ. ನಿಮಗೆ ತಿಳಿದಿರಲಿ, ನೀವು ಉತ್ತೇಜಿಸುತ್ತಿರುವ ಈ ನಕಲಿ ತುಪ್ಪ ಮುಕ್ಕೋಟಿ ದೇವರುಗಳ ನೆಲೆಸಿರುವ ಗೋವಿನ ಮಾಂಸದ ಕೊಬ್ಬಿನದ್ದು ಮತ್ತು ಹೆಚ್ಚಾಗಿ ಹತ್ಯೆಯಾಗುತ್ತಿರುವ ಹಂದಿಯದ್ದಾಗಿದೆ. ಇಂತಹ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುವವೇ? ಇಂತಹ ತುಪ್ಪದಿಂದ ಹೋಮ ಹವನ ಮಾಡಿದರೆ ನಿಮಗೆ ಮತ್ತು ಜಗತ್ತಿಗೆ ಒಳಿತಾಗುವುದೇ?

ತುಪ್ಪವನ್ನು ವಿಶೇಷವಾಗಿ ಸ್ವಾಮಿ ಅಯ್ಯಪ್ಪನ ಭಕ್ತರು ಇರುಮುಡಿಯಲ್ಲಿ ಬಳಸುವುದನ್ನು ನಾವು ಕಂಡಿದ್ದೇವೆ. ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತಿ ಕಡಿಮೆ ಬೆಲೆಯ ಮಾಂಸಾಹಾರದ ಇಂತಹ ನಕಲಿ ತುಪ್ಪವನ್ನೇ ತಂದು ಬಳಸುತ್ತಿರುವುದು ಮಾತ್ರ ದುರ್ದೈವ. ಇನ್ನು ಕೆಲವರು ಕೆಜಿಗೆ ಸುಮಾರು ಐನೂರು ರೂಪಾಯಿಗೂ ಹೆಚ್ಚಿ ಗೆ ಬೆಲೆ ಇರುವ ನಂದಿನಿ ತುಪ್ಪವನ್ನು ಬಳಸುತ್ತಿರುವುದು ಕೊಂಚ ಸಮಾಧಾನಕರವಾದುದಾಗಿದೆ. ಇಂದಿಗೂ ಬಹಳಷ್ಟು ಜನರಿಗೆ ತುಪ್ಪದ ಅಸಲಿ ಮತ್ತು ನಕಲಿಯತೆಯ ಕುರಿತಂತೆ ವಾಸ್ತವಾಂಶವೇ ತಿಳಿದಿಲ್ಲ. ಹೀಗಾಗಿ ಪ್ರತಿ ವರ್ಷ ಸ್ವಾಮಿ ಅಯ್ಯಪ್ಪನ ಇರುಮುಡಿಯ ಸಲುವಾಗಿ ದೇಶಾದಾದ್ಯಂತ ಲಕ್ಷಾಂತರ ಕೆಜಿ ಈ ನಕಲಿ ತುಪ್ಪ ಮಾರಾಟವಾಗುತ್ತಿದೆ. ವಿಶೇಷವಾಗಿ ನವೆಂಬರ್‌ನಿಂದ ಜನವರಿವರೆಗೆ ಇದರ ವ್ಯಾಪಾರ ಬಲು ಜೋರಾಗಿರುತ್ತದೆ. ಹೀಗೆ ನಕಲಿ ತುಪ್ಪಕ್ಕಾಗಿ ಹತ್ಯೆಯಾಗುತ್ತಿರುವ ಮೂಕ ಜೀವಿಗಳ ರೋದನೆ ಅಯ್ಯಪ್ಪನಿಗೆ ಮುಟ್ಟದೇ ಇರುತ್ತದೆಯೇ? ಇನ್ನು ನಿಮ್ಮ ಇಷ್ಟಾರ್ಥಗಳನ್ನು ಆ ಭಗವಂತ ನೆರವೇರಿಸುವನೇ?

Advertisement

ನಮಗೆ ತಿಳಿಯದೆ ದೇವರಿಗೆ ಅರ್ಪಿಸುತ್ತಿರುವ ಇಂತಹ ನಕಲಿ ತುಪ್ಪ ಹೇಗೆ ತಯಾರಾಗುತ್ತಿದೆ ಎಂಬುದು ನೀವು ತಿಳಿಯಬೇಕಿದೆ. ಸಾಮಾನ್ಯವಾಗಿ ಸಂಸ್ಕಾರಯುತ ಒಂದು ಲೀಟರ್ ತುಪ್ಪ ತಯಾರಾಗಬೇಕಾದರೆ ಸುಮಾರು 30 ರಿಂದ 35 ಲೀಟರ್ ಹಾಲು ಬೇಕಾಗುತ್ತದೆ. ಪ್ರತಿ ಲೀಟರ್ ಹಾಲಿಗೆ ಇಂದು ಮಾರುಕಟ್ಟೆಯಲ್ಲಿ ಸುಮಾರು ಐವತ್ತು ರೂಪಾಯಿಯಂತೆ ಅಂದಾಜಿಸಿ, ಬೇಕಾದ ಪ್ಯಾಕಿಂಗ್, ಜಾಹಿರಾತು, ನೌಕರರ ಸಂಬಳ ಇತ್ಯಾದಿಯನ್ನು ಸೇರಿಸಿದ್ದಲ್ಲಿ ಪ್ರತಿ ಕೆಜಿ ತುಪ್ಪ ತಯಾರಿಕೆಗೆ ಕನಿಷ್ಠ ಎಂದರೂ ಒಂದೂವರೆಯಿಂದ ಎರಡೂ ಸಾವಿರ ರೂಪಾಯಿಯ ಕನಿಷ್ಠ ವೆಚ್ಚ ತಗಲುತ್ತದೆ. ವಾಸ್ತವಾಂಶ ಹೀಗಿರುವಾಗ ಕೆಜಿಗೆ ರೂ. 100 ರಿಂದ 150 ರೂಪಾಯಿಗೆ ಸಿಗುತ್ತಿರುವ ತುಪ್ಪದ ಅಸಲಿಯತ್ತನ್ನು ನೀವೇ ಅಂದಾಜಿಸಬಹುದಾಗಿದೆ. ಒಂದು ಕೆಜಿ ಅಸಲಿ ತುಪ್ಪದ ಬೆಲೆಗೆ ಸುಮಾರು 20 ಕೆಜಿಗೂ ಅಧಿಕ ನಕಲಿ ತುಪ್ಪ ಕಾಳಸಂತೆಯಲ್ಲಿ ರಾಜಾರೋಷವಾಗಿ ದೊರೆಯುತ್ತಿರುವಾಗ ಇದರ ಹಿಂದಿರುವ ಕಾಣದ ಕೈಗಳ ಬೇರು ಎಷ್ಟು ಆಳಕ್ಕೆ ಹೋಗಿರಬಹುದು ಎಂಬುದನ್ನು ನೀವು ಯೋಚಿಸಬೇಕಿದೆ.

ಹೀಗೆ ಅತಿ ಕಡಿಮೆ ಬೆಲೆಗೆ ಎಲ್ಲೆಂದರಲ್ಲಿ ದೊರೆಯುತ್ತಿರುವ ಈ ನಕಲಿ ತುಪ್ಪ ಬೇರೇನೂ ಆಗದೆ ದನದ ಕೊಬ್ಬೇ ಆಗಿರುವುದು ಅತಿ ಸ್ಪಷ್ಟವಾಗಿದೆ. ಹೀಗಾಗಿ ಇದನ್ನು ಇಷ್ಟು ಕಡಿಮೆ ಬೆಲೆಗೆ ಮಾರಲು ಸಾಧ್ಯವಾಗುತ್ತಿದೆ. ಪ್ರತಿ ನಿತ್ಯ ಕಸಾಯಿಖಾನೆಗಳಲ್ಲಿ ಅಮಾನುಷ ಸಾವನ್ನು ಕಾಣುತ್ತಿರುವ ಗೋವುಗಳ ತ್ಯಾಜ್ಯದ ಒಂದು ಭಾಗವೇ ಈ ನಕಲಿ ತುಪ್ಪ ಎಂಬುದು ನಿಮಗೆ ಸ್ಪಷ್ಟತೆ ಇರಲಿ. ಈ ದನದ ಕೊಬ್ಬಿನೊಂದಿಗೆ ಒಂದಷ್ಟು ಎಲುಬು ಪುಡಿ ಮತ್ತು ವನಸ್ಪತಿಯನ್ನು ಸೇರಿಸಿದಲ್ಲಿ ಈ ನಕಲಿ ತುಪ್ಪ ಸಿದ್ಧವಾಗುತ್ತದೆ. ಇನ್ನು ಸುವಾಸನೆಗೆ ಇದಕ್ಕೊಂದಿಷ್ಟು ಎಸೆನ್ಸ್ ಹಾಕಿದರೆ ಮುಗಿಯಿತು. ಹೀಗೆ ತಯಾರಾದ ತುಪ್ಪ ಮತ್ತು ಪ್ರತಿ ನಿತ್ಯ ತಾಜಾ ಹುಲ್ಲನ್ನು ತಿಂದು ಹಸು ನೀಡುವ ಹಾಲಿನಿಂದ ತಯಾರಿಸಿದ ಸಂಸ್ಕಾರಯುತ ಅಸಲಿ ತುಪ್ಪಕ್ಕೂ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಈ ಎರಡು ತುಪ್ಪದ ಮೆಲ್ಟಿಂಗ್ ಪಾಯಿಂಟ್ ಕೂಡ ಬಹುತೇಕ ಒಂದೇ ಆಗಿರುತ್ತದೆ. ಹೀಗಾಗಿ ಸೂಕ್ಷ್ಮವಾಗಿ ಗಮನಿಸಿದಲ್ಲಿ ಮಾತ್ರ ವ್ಯತ್ಯಾಸವನ್ನು ಕೇವಲ ಅಂದಾಜಿಸಬಹುದಾಗಿದೆ. ಇದನ್ನು ಹೊರತುಪಡಿಸಿ ಈ ನಕಲಿ ತುಪ್ಪದ ಅಸಲಿಯತ್ತನ್ನು ಪ್ರಯೋಗಾಲಯದಲ್ಲೇ ಪರೀಕ್ಷಿಸಬೇಕಾಗಿದೆ. ಅಲ್ಲಿಯೂ ಸಹ ಒಮ್ಮೊಮ್ಮೆ ಎರಡರಲ್ಲೂ ಸಾಮ್ಯತೆ ಕಂಡುಬಂದರೆ ಅಚ್ಚರಿಪಡಬೇಕಿಲ್ಲ.

Advertisement

ಹೀಗೆ ತಯಾರಾಗುವ ನಕಲಿ ತುಪ್ಪ ತಯಾರಿಕಾ ಅಡ್ಡಗಳ ಮೇಲೆ ಆಗಾಗ ಕೆಲ ಪ್ರಾಮಾಣಿಕ ಅಧಿಕಾರಿಗಳು ದಾಳಿ ಮಾಡಿ ಇದರ ಅಸಲಿಯತ್ತನ್ನು ಬಹಿರಂಗಪಡಿಸುತ್ತಿರುತ್ತಾರೆ. ಆಗ ಪತ್ರಿಕಾ ಮತ್ತು ಟಿವಿ ಮಾದ್ಯಮಗಳು ಈ ಕುರಿತಂತೆ ಒಂದಷ್ಟು ಮಾಹಿತಿಯನ್ನು ಪ್ರಕಟಿಸಿ ಸುಮ್ಮನಾಗುತ್ತವೆ. ನಾವುಗಳು ಸಹ ಒಂದೆರಡು ದಿನ ಎಚ್ಚರಿಕೆ ವಹಿಸಿ ನಂತರ ಸುಮ್ಮನಾಗುತ್ತೇವೆ. ಇಂತಹ ಸಂದರ್ಭದಲ್ಲಿ ಒಂದೆರಡು ದಿನ ಇವುಗಳ ತಯಾರಿಕೆಗೆ ಕೊಂಚ ತಡೆಯಾಗಿ ನಂತರ ಯಥಾಸ್ಥಿತಿ ಮುಂದುವರೆದುಕೊಂಡು ಹೋಗುತ್ತದೆ. ಹೀಗಾಗಿ ಕೋಟ್ಯಾಂತರ ವಹಿವಾಟಿನ ಈ ಉದ್ದಿಮೆಗೆ ಜನ ಜಾಗೃತಿಯೊಂದೇ ತಡೆಯೊಡ್ಡಬಹುದಾಗಿದೆ. ಇಂತಹ ತೀರಾ ಕಳಪೆ ಪದಾರ್ಥವನ್ನು ದೇವರಿಗೆ ಅರ್ಪಿಸಬೇಕೆ ಎಂಬುದನ್ನು ಜನರೇ ಅರಿಯಬೇಕಿದೆ.

ದೇವರಿಗಿಟ್ಟ ಇಂತಹ ತುಪ್ಪವನ್ನು ಕೊನೆಯಲ್ಲಿ ಸೇವಿಸುವವರು ನಾವೇ ಆಗಿರುವುದರಿಂದ ಇದಕ್ಕೆ ಸಮರ್ಥನೆ ಬೆಂಬಲ ಬೇಡ. ಇನ್ನು ಮುಂದಾದರೂ ಸಾಂಪ್ರದಾಯಿಕವಾಗಿ ತಯಾರಾದ ಅಸಲಿ ದೇಶಿ ಗೋವಿನ ತುಪ್ಪವನ್ನೇ ದಿನ ನಿತ್ಯ ಬಳಕೆಯಲ್ಲೂ ಮತ್ತು ದೈವಿಕ ಕಾರ್ಯಗಳಲ್ಲೂ ಬಳಸೋಣ. ನಂಬಿಕೆ ಇರುವ ರೈತರ ಮನೆ ಇಲ್ಲವೇ ಗೋಶಾಲೆಯಿಂದ ತಯಾರಾದ ದೇಸಿ ಗೋವಿನ ತುಪ್ಪವನ್ನೇ ಬಳಸೋಣ. ರೈತರು, ಪಶುಪಾಲಕರು ಮತ್ತು ಗೋಶಾಲೆಗಳನ್ನು ಸ್ವಾವಲಂಬಿಯಾಗಿಸಲು ನೆರವಾಗೋಣ. ಪರೋಕ್ಷವಾಗಿ ಗೋಹತ್ಯೆಯಲ್ಲಿ ಭಾಗಿಯಾಗುವುದನ್ನು ನಿಲ್ಲಿಸೋಣ. ನಶಿಸಿ ಹೋಗುತ್ತಿರುವ ಗೋಸಂತತಿಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೂ ಉಳಿಸಿಹೋಗೋಣ.

Advertisement
ಬರಹ :
ಕೆ.ಎನ್. ಶೈಲೇಶ್ ಹೊಳ್ಳ
Ghee, which was nectar, has become adulterated, carnivorous and the fruit of mixed breeds, losing its essence and becoming poison. So doctors are advising not to consume ghee, not to get sick by eating fake ghee. It is a sign of danger that the same fake ghee is being used in everything from lamps to deities to homa havana. Due to its use, many toxic gases are produced and accumulate in the atmosphere causing serious health effects to the people around.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

14 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

14 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

14 hours ago

ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…

15 hours ago

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು | ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ..?

ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…

18 hours ago

Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |

ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…

18 hours ago