ದುಬೈಯಂತಹ ಮರುಭೂಮಿ(Desert) ನಾಡಿನಲ್ಲಿ ಮಳೆ(Rain) ಅನ್ನೋದೇ ಅಪರೂಪ. ಎತ್ತ ನೋಡಿದರು ಮರಳುಗಾಡು. ಅದು ಬಿಟ್ಟರೆ ಸಮುದ್ರ(Ocean). ಮರಗಳೇ(Tree) ಇಲ್ಲದ ನಾಡಲ್ಲಿ ಮಳೆ ಅನ್ನೋದು ವಿರಳ. ಆದರೆ ಈಗ ದುಬೈಯಲ್ಲಿ (Dubai Rain) ಎತ್ತ ನೋಡಿದರೂ ಜಲರಾಶಿ. ಐಷಾರಾಮಿ ನಗರ ದುಬೈನಲ್ಲಿರುವ ಮಾಲ್, ವಿಮಾನ ನಿಲ್ದಾಣಗಳು (Airport) ಸಂಪೂರ್ಣ ಜಲಾವೃತವಾಗಿದೆ. ಭಾರೀ ಗುಡುಗು ಸಹಿತ ಅಬ್ಬರಿಸಿದ ಮಳೆರಾಯನ(Heavy Rain) ಪ್ರತಾಪಕ್ಕೆ UAE ಯ ಕೆಲವು ಭಾಗಗಳಲ್ಲಿ ಪ್ರವಾಹ (Flood) ಸೃಷ್ಟಿಯಾಗಿದೆ. ಪ್ರಮುಖ ರಸ್ತೆಮಾರ್ಗಗಳು, ವಿಮಾನ ನಿಲ್ದಾಣಗಳು, ಮೆಟ್ರೋ ಮಾರ್ಗಗಳು ಸಂಪೂರ್ಣ ಜಲಮಯವಾಗಿದೆ. ಸುದ್ದಿ ಸಂಸ್ಥೆಗಳ ವರದಿ ಪ್ರಕಾರ, ಮಂಗಳವಾರ ಯುಎಇಗೆ ಅಪ್ಪಳಿಸಿದ ಚಂಡಮಾರುತಗಳು ದುಬೈನಲ್ಲಿ ಒಂದೂವರೆ ವರ್ಷಗಳ ನಂತರ ಭಾರೀ ಮಳೆಯಾಗಿದೆ. ದುಬೈ ನಗರಕ್ಕಿಂತ ಯುಎಇಯ ಪೂರ್ವ ಕರಾವಳಿಯಲ್ಲಿರುವ ಎಮಿರೇಟ್ ಫುಜೈರಾದಲ್ಲಿ ಹೆಚ್ಚು ಮಳೆಯಾಗಿದೆ. ಮಂಗಳವಾರ 145 ಮಿಲಿಮೀಟರ್‌ಗಳಷ್ಟು (5.7 ಇಂಚುಗಳು) ಮಳೆ ಬಿದ್ದಿದೆ.
75 ವರ್ಷಗಳಲ್ಲೇ ಹೆಚ್ಚು ಮಳೆ: ಪ್ರವಾಹದ ಆರ್ಭಟಕ್ಕೆ ಉತ್ತರದ ಎಮಿರೇಟ್ ರಾಸ್ ಅಲ್-ಖೈಮಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಪ್ರವಾಹದ ನೀರಲ್ಲಿ ವಾಹನ ಸಿಲುಕಿ 70 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಶಾಪಿಂಗ್ ಕೇಂದ್ರಗಳಲ್ಲಿ ಒಂದಾದ ಮಾಲ್ ಆಫ್ ಎಮಿರೇಟ್ಸ್‌ನಲ್ಲಿ ಪ್ರವಾಹ ನೀರು ತುಂಬಿಕೊಂಡಿದೆ. ಮಾಲ್ ನಲ್ಲಿರುವ ಶಾಪ್ ಗಳ ಸೀಲಿಂಗ್ ನಲ್ಲಿ ನಿರಂತರ ಮಳೆಯಿಂದ ನೀರು ಹರಿದಿದೆ. 75 ವರ್ಷಗಳ ನಂತರ ಹೆಚ್ಚು ಮಳೆಯಾಗಿದೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಶಾರ್ಜಾ ಸಿಟಿ ಜಲಾವೃತ: ನಿರಂತರ ಮಳೆಯಿಂದಾಗಿ ಶಾರ್ಜಾ ಸಿಟಿ ಸೆಂಟರ್ ಮತ್ತು ದೇರಾ ಸಿಟಿ ಸೆಂಟರ್ ಕೂಡ ಸಂಪೂರ್ಣ ಜಲಾವೃತವಾಗಿದ್ದು, ಜನರು ಪ್ರವಾಹದ ನೀರಲ್ಲಿ ಸಿಲುಕಿದ್ದಾರೆ. ವಿಮಾನ ನಿಲ್ದಾಣಗಳಲ್ಲೂ ನೀರು ನಿಂತಿದ್ದು, ವಿಮಾನಗಳ ಹಾರಾಟದಲ್ಲೂ ತೊಂದರೆಯಾಗಿದೆ. ಟ್ಯಾಕ್ಸಿ ವೇನಲ್ಲೂ ಅತಿ ಹೆಚ್ಚು ನೀರು ತುಂಬಿಕೊಂಡು ಪ್ರವಾಹದ ಮೂಲಕ ಟರ್ಮಿನಲ್‌ಗಳನ್ನು ತಲುಪಲು ಪ್ರಯಾಣಿಕರು ಹೆಣಗಾಡಿದ್ದಾರೆ. ಕೆಲವು ರಸ್ತೆಗಳು ಪ್ರವಾಹ ನೀರಿನಿಂದ ಕಣ್ಮರೆಯಾಗಿದ್ದು, ವಾಹನ ಸವಾರರು ತಮ್ಮ ವಾಹನಗಳನ್ನು ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಅಧಿಕಾರಿಗಳು ನೀರನ್ನು ಪಂಪ್ ಮಾಡಲು ರಸ್ತೆಗಳು ಮತ್ತು ಹೆದ್ದಾರಿಗಳಿಗೆ ಟ್ಯಾಂಕರ್ ಲಾರಿಗಳನ್ನು ಕಳುಹಿಸಿದ್ದಾರೆ. ಕೆಲ ಮನೆಗಳಿಗೂ ನೀರು ನುಗ್ಗಿದೆ.
24 ಗಂಟೆಗಳ ಅವಧಿಯಲ್ಲಿ 142 ಮಿಲಿಮೀಟರ್ ಮಳೆ: ದುಬೈನಲ್ಲಿ 24 ಗಂಟೆಗಳ ಅವಧಿಯಲ್ಲಿ 142 ಮಿಲಿಮೀಟರ್‌ಗಿಂತಲೂ ಹೆಚ್ಚು ಮಳೆಯಾಗಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಹಿತಿಯ ಪ್ರಕಾರ ಎಮಿರೇಟ್ ಸರಾಸರಿ ವರ್ಷದಲ್ಲಿ 94.7 ಮಿಲಿಮೀಟರ್ ಮಳೆಯಾಗಿದೆ. ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ತುದಿಯಲ್ಲಿ ಮಿಂಚಿನ ಸ್ಪರ್ಶ ತಾಗಿದೆ. UAEನಲ್ಲಿ ಸಾಮಾನ್ಯವಾಗಿ ಹೆಚ್ಚು ಮಳೆಯಾಗುವುದಿಲ್ಲ. ಮಳೆಗಾಲದಲ್ಲಿ ಮಾತ್ರ ಕೊಂಚ ಮಳೆಯಾಗುತ್ತಿತ್ತು. ಮಳೆ ಸರಿಯಾಗದ ಕಾರಣ ಅಲ್ಲಿನ ಒಳಚರಂಡಿ ವ್ಯವಸ್ಥೆಗಳು ಸಹ ಸರಿಯಾಗಿಲ್ಲ. ಈಗ ಸಂಭವಿಸಿರುವ ದಿಢೀರ್ ಪ್ರವಾಹದಿಂದ ಮನೆ, ರಸ್ತೆಗಳು, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲಾ ಕಡೆ ಮಳೆ ನೀರು ತುಂಬಿದೆ. ಬಹ್ರೇನ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲೂ ಮಳೆಯಾಗಿದೆ.
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…