ವಿಮೆಗೊಳಪಡದ ಜಾನುವಾರುಗಳು ಮೃತಪಟ್ಟರೆ ಪರಿಹಾರ ಲಭ್ಯ | ಇವರನ್ನು ಸಂಪರ್ಕಿಸಿ

December 18, 2023
3:01 PM

ಪಶುಪಾಲನಾ ಇಲಾಖೆ ಮತ್ತು ಹಾಲು ಪಶು ಉತ್ಪಾದಕರ ಒಕ್ಕೂಟಗಳ ವಿವಿಧ ಯೋಜನೆಗಳಲ್ಲಿ(Animal Husbandry Department and Milk Cattle Producers’ Unions) ವಿಮೆಗೆ ಒಳಪಟ್ಟಿರುವ ರೈತರ ಜಾನುವಾರುಗಳು ಮರಣ(insured farmers’ livestock) ಹೊಂದಿದ್ದಲ್ಲಿ ವಿಮಾ ಮೊತ್ತವು ರೈತರಿಗೆ(Farmers) ಸಲ್ಲಿಕೆಯಾಗಿರುತ್ತದೆ. ಆದರೆ ಯಾವುದೇ ವಿಮಾ(insure) ಯೋಜನೆಗಳಲ್ಲಿ ವಿಮೆಗೆ ಒಳಪಡದ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ ರೈತರಿಗೆ ಯಾವುದೇ ಸಹಾಯಧನ ಅಥವಾ ಪರಿಹಾರ(subsidy or compensation) ದೊರಕುವುದಿಲ್ಲ. ಆದ್ದರಿಂದ 2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿಗೆ(Anugrah Yojana) ಆಕಸ್ಮಿಕ ಮರಣಹೊಂದಿದ ಕುರಿ ಮತ್ತು ಮೇಕೆಗಳಿಗೆ ತಲಾ ಗರಿಷ್ಠ ರೂಪಾಯಿ 5,000 ದಂತೆ ಹಾಗೂ ದನ ಮತ್ತು ಎಮ್ಮೆಗಳಿಗೆ ತಲಾ ಗರಿಷ್ಠ ರೂಪಾಯಿ 10,000 ದಂತೆ ಪರಿಹಾರವನ್ನು ಕರ್ನಾಟಕ ಸರ್ಕಾರವು ಘೋಷಿಸಿರುತ್ತದೆ.

Advertisement
Advertisement
Advertisement

ಜಾನುವಾರು ಮಾಲಿಕರು ಸದ್ರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಮೃತಪಟ್ಟ ಜಾನುವಾರನ್ನು ಪಶು ವೈದ್ಯರಿಗೆ ಹಾಜರುಪಡಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರ ದೃಢೀಕರಣದ ನಂತರವೇ ಈ ಸೌಲಭ್ಯವನ್ನು ಪಡೆಯಬಹುದು. ಈ ಸೌಲಭ್ಯವನ್ನು ರೈತರು ಬಳಸಿಕೊಂಡು ಜಾನುವಾರು ಮರಣದಿಂದಾಗುವ ಆರ್ಥಿಕ ನಷ್ಟ ಕಡಿಮೆ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಪರಿಹಾರ ಪಡೆಯಲು ಸತ್ತ ಜಾನುವಾರಿನ ಮರಣೋತ್ತರ ಪರೀಕ್ಷೆ ಕಡ್ಡಾಯ ಮತ್ತು ಮರಣಕ್ಕೂ ಮುಂಚಿತವಾಗಿ ಜಾನುವಾರಿಗೆ ಕಿವಿ ಓಲೆ ಹಾಕಿರಬೇಕು ಮತ್ತು ಈ ಮಾಹಿತಿ ಇನಾಫ್‌ ತಂತ್ರಾಂಶದಲ್ಲಿ ನಮೂದಾಗಿರಬೇಕು

Advertisement

ಹೆಚ್ಚಿನ ಮಾಹಿತಿಗಾಗಿ: ಡಾ.ನಿತಿನ್ ಪ್ರಭು ಕೆ ಮುಖ್ಯ ಪಶು ವೈದ್ಯಾಧಿಕಾರಿ ಪಶು ಆಸ್ಪತ್ರೆ ಸುಳ್ಯ ಮೊ: 9844995078, ಡಾ. ಸೂರ್ಯನಾರಾಯಣ ಬಿ ಕೆ ಮುಖ್ಯ ಪಶು ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಬೆಳ್ಳಾರೆ ಮೊ:9880092033/9448177566, ಡಾ.ವೆಂಕಟಾಚಲಪತಿ ಜೆ ಎನ್ ಮುಖ್ಯ ಪಶು ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಗುತ್ತಿಗಾರು ಮೊ: 9449778338/ 9482994154,

ಡಾ. ಮೇಘಶ್ರೀ ಸಿ ಎಸ್ ಪಶು ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಕಳಂಜ ಮೊ: 8095350456/ 8618150305,   ಕೆ ಪುಷ್ಪರಾಜ್ ಶೆಟ್ಟಿ ಜಾನುವಾರು ಅಭಿವೃದ್ದಿ ಅಧಿಕಾರಿ ಪಶು ವೈದ್ಯ ಆಸ್ಪತ್ರೆ ಸುಳ್ಯ ಮೊ: 9449639889,  ದೇವರಾಜ ಯು ಬಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಪಶು ಆಸ್ಪತ್ರೆ ಸುಳ್ಯ ಮೊ: 9448152478 ಮತ್ತು  ಪಾಲಾಕ್ಷ . ಬಿ ಎ ಪಶು ವೈದ್ಯಕೀಯ ಪರೀಕ್ಷಕರು ಪಶು ಚಿಕಿತ್ಸಾಲಯ ಅರಂತೋಡು ಮೊ: 9449245074/ 8310727772 ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಶುಸಖಿಯರನ್ನು ಸಂಪರ್ಕಿಸಬಹುದು.

Advertisement

ಪರಿಹಾರ ಪಡೆಯಲು ಬೇಕಾಗುವ ದಾಖಲಾತಿಗಳು
1. ಆಧಾರ್‌ ಕಾರ್ಡು
2. ರೇಷನ್‌ ಕಾರ್ಡು
3. ಬ್ಯಾಂಕ್‌ ಪಾಸ್‌ ಪುಸ್ತಕದ ಪ್ರತಿ
4. ಮರಣೋತ್ತರ ಪರೀಕ್ಷೆಯ ನಂತರ ಸತ್ತ ಜಾನುವಾರಿನೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರು ಮತ್ತು ಜಾನುವಾರು ಮಾಲಿಕ ನಿಂತಿರುವ ಫೋಟೋ
5. ಫಲಾನುಭವಿಯ FRUITS ಸಂಖ್ಯೆ
6. ಪಶುವೈದ್ಯರು ನೀಡಿದ ಮರಣೋತ್ತರ ಪರೀಕ್ಷಾ ವರದಿ
ಇವೆಲ್ಲವುದರ 2 ಪ್ರತಿಗಳನ್ನು ಸಲ್ಲಿಸಬೇಕು.

In case of death of insured farmers’ livestock under various schemes of Animal Husbandry Department and Milk Cattle Producers’ Unions, the sum insured is submitted to the farmers. Farmers do not get any subsidy or compensation in case of accidental death of livestock not covered under any of the insurance schemes. So the Karnataka government has announced a maximum compensation of Rs 5,000 each for accidental death of sheep and goats and Rs 10,000 each for cattle and buffaloes under the Anugrah Yojana in the year 2023-24.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror