ಭಾರೀ ಮಳೆಯ ನಡುವೆ ಅಧಿಕಾರಿಗಳು ಸೇವೆ ನೆರವೇರಿಸಿದರು. ಮಳೆಯ ಕಾರಣದಿಂದ ಕಡಿತಗೊಂಡಿದ್ದ ಸಂಪರ್ಕ ರಸ್ತೆಯನ್ನು ಮರು ನಿರ್ಮಾಣ ಮಾಡುವ ಮೂಲಕ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಮಳೆಯ ಕಾರಣದಿಂದ ಹಲವು ಸಮಸ್ಯೆಗಳಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಮಾಡಬಹುದಾದ ಕಾರ್ಯಗಳಿಗೆ ಇದೊಂದು ಮಾದರಿ.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಭಾರೀ ಮಳೆಗೆ ಡಿಟ್ಟೆ ಡೈಮ್-ಮಿಗ್ಗಿಂಗ್ ರಸ್ತೆಯ ಸಿಯಾಂಗ್ ನದಿಯ ಉಪನದಿಗೆ ಕಟ್ಟಲಾಗಿರುವ 80 ಅಡಿ ಸೇತುವೆಯ ಮೇಲೆ ಮಣ್ಣು, ಕಲ್ಲು ಕುಸಿದ ಕಾರಣದಿಂದ ರಸ್ತೆ ಸಂಪರ್ಕವು ಕಡಿತಗೊಂಡಿತು. ಪರಿಣಾಮವಾಗಿ ಟ್ಯೂಟಿಂಗ್ ಉಪವಿಭಾಗದಂತಹ ಗಡಿ ಪ್ರದೇಶಗಳು ಸಂಪೂರ್ಣವಾಗಿ ಕಡಿತಗೊಂಡವು.
ತಕ್ಷಣವೇ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಸಿಬಂದಿಗಳು 72 ಗಂಟೆಗಳಲ್ಲಿ ಮರುಸಂಪರ್ಕ ಕಲ್ಪಿಸಿದ್ದಾರೆ. ಬಾರ್ಡರ್ ರೋಡ್ಸ್ ಟಾಸ್ಕ್ ಫೋರ್ಸ್ (ಬಿಆರ್‌ಟಿಎಫ್) ಅಧಿಕಾರಿ ಒ ಟಾಕಿ ಮಾತನಾಡಿ, ಭಾರಿ ಮಳೆಯ ನಡುವೆಯೂ, ಬಿಆರ್‌ಒ ಸಿಬ್ಬಂದಿ ರಸ್ತೆ ತಿರುವುವನ್ನು ಪೂರ್ಣಗೊಳಿಸಿ ಎಲ್ಲಾ ರೀತಿಯ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದರು ಎಂದು ಹೇಳಿದ್ದಾರೆ.
(Source : ANI)
ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…
ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…
ಈ ತಿಂಗಳ ಅಂತ್ಯದೊಳಗೆ ಮೀನ ಕಟಕ ಕುಂಭ ಮಿಥುನ ವೃಶ್ಚಿಕ ವೃಷಭ ಈ…
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…