ನೇಪಾಳವು ಕಳೆದ ಕೆಲವು ಸಮಯಗಳಿಂದ ಬೇರೆ ದೇಶಗಳಿಂದ ಅಡಿಕೆ ಸಹಿತ ಕೆಲವು ಕೃಷಿ ವಸ್ತುಗಳ ಆಮದು ಮೇಲೆ ನಿರ್ಬಂಧ ಹಾಕಿತ್ತು. ಇದೀಗ ನೇಪಾಳದ ಕೈಗಾರಿಕಾ ಸಚಿವಾಲಯವು ಅಡಿಕೆ, ಬಟಾಣಿ ಮತ್ತು ಕರಿಮೆಣಸಿನ ಆಮದು ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಲು ನಿರ್ಧರಿಸಿದೆ. ಈ ಹಣಕಾಸು ವರ್ಷಕ್ಕೆ ಕೈಗಾರಿಕಾ ಉದ್ದೇಶಗಳಿಗಾಗಿ ಈ ನಿರ್ಬಂಧಗಳನ್ನು ತೆಗೆದುಹಾಕಲು ಉದ್ದೇಶಿಸಲಾಗಿದೆ.
ಕಳೆದ ಸೋಮವಾರ ರಾಜ್ಯಪತ್ರದಲ್ಲಿ ಮಾಹಿತಿ ಪ್ರಕಟಿಸಿರುವ ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯವು, ಕೈಗಾರಿಕೆ ಉದ್ದೇಶಕ್ಕೆ ಅಗತ್ಯವಾದ ಅಡಿಕೆ, ಕರಿಮೆಣಸು, ಬಟಾಣಿ ಸೇರಿದಂತೆ ಇನ್ನೂ ಕೆಲವು ಕಚ್ಚಾ ಸಾಮಗ್ರಿಗಳನ್ನು ಆಮದು ಮಾಡಲು ಅವಕಾಶ ನೀಡಲಾಗಿದೆ. ಕಳೆದ ಕೆಲವು ಸಮಯಗಳಿಂದ ಆಮದು ನಿರ್ಬಂಧವಿತ್ತು.ಆದರೆ ಈಗ ಯಾವ ವಸ್ತುಗಳನ್ನು , ಯಾವ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು ಎಂಬುದನ್ನು ಸರ್ಕಾರ ಅಧಿಸೂಚನೆಯಲ್ಲಿ ಬಹಿರಂಗಪಡಿಸಿಲ್ಲ.
ಇದರಿಂದ ಕೈಗಾರಿಕಾ ಉದ್ದೇಶದ ಹೆಸರಿನಲ್ಲಿ ಮತ್ತೆ ಕಳ್ಳಸಾಗಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನೇಪಾಳದ ಮಾಧ್ಯಮಗಳು ಎಚ್ಚರಿಸಿದೆ. ಈ ಹಿಂದೆ ನೇಪಾಳಕ್ಕೆ ಮಿತಿಗಿಂತ ಅಧಿಕವಾಗಿ ಅಡಿಕೆ ಆಮದಾಗಿ ಅಲ್ಲಿಂದ ಕಳ್ಳಸಾಗಾಣಿಕೆ ಮೂಲಕ ಭಾರತದ ಮಾರುಕಟ್ಟೆಗೆ ತಲಪುತ್ತಿತ್ತು. ನೇಪಾಳ ಹಾಗೂ ಭಾರತದ ನಡುವೆ ಒಪ್ಪಂದದ ಪ್ರಕಾರ ಮುಕ್ತವಾಗಿ ಭಾರತದೊಳಕ್ಕೆ ಸಾಗಾಟವಾಗುತ್ತದೆ. ಹೀಗಾಗಿ ಬೇರೆ ದೇಶಗಳಿಂದ ಆಮದು ಮಾಡಿರುವ ಅಡಿಕೆಯನ್ನು ನೇಪಾಳದ ಮೂಲಕ ಭಾರತಕ್ಕೆ ಸಾಗಿಸುವ ಕೆಲಸ ಈ ಹಿಂದೆ ನಡೆಯುತ್ತಿತ್ತು. ಇದಕ್ಕಾಗಿ ಅಡಿಕೆ ಆಮದು ನಿಷೇಧವನ್ನು ನೇಪಾಳ ಸರ್ಕಾರ ಮಾಡಿತ್ತು. ನೇಪಾಳದಲ್ಲಿ ಬೆಳೆಯುವ ಅಲ್ಪಸ್ವಲ್ಪ ಅಡಿಕೆಯ ಮೇಲೆ, ಕಾಳುಮೆಣಸು ಮೇಲೆ ಪರಿಣಾಮ ಬೀರಿ, ಅಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಾಗದ ಸ್ಥಿತಿಯಾಗಿತ್ತು. ಅಲ್ಲಿನ ಬಳಕೆಗೆ ನೇಪಾಳದಲ್ಲಿಯೇ ಬೆಳೆಯುವ ಅಡಿಕೆ ಉಪಯೋಗವಾಗುತ್ತಿತ್ತು. ಸರ್ಕಾರಕ್ಕೆ ಯಾವುದೇ ಲಾಭ ಇಲ್ಲದೆಯೇ ಬೇರೆ ದೇಶಗಳಿಂದ ಅಡಿಕೆ ನೇಪಾಳದ ಮೂಲಕ ಭಾರತದ ಮಾರುಕಟ್ಟೆಗೆ ಕಳ್ಳಸಾಗಾಣಿಕೆಯಲ್ಲಿ ನೇಪಾಳದ ಹೆಸರಿನಲ್ಲಿ ಬರುತ್ತಿತ್ತು. ಇದಕ್ಕಾಗಿ ನೇಪಾಳವು ಅಡಿಕೆ ಆಮದು ನಿಷೇಧ ಮಾಡಿತ್ತು. ಇದೀಗ ಅಡಿಕೆ, ಬಟಾಣಿ ಮತ್ತು ಕರಿಮೆಣಸಿನ ಆಮದು ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದೆ. ಹೀಗಾಗಿ ಭಾರತದಲ್ಲಿ ಈಗಲೇ ಎಚ್ಚರವಹಿಸಬೇಕಾದ ಅಗತ್ಯ ಇದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…