ಮೇಲ್ಮಣ್ಣು ಉಳಿಸಿಕೊಳ್ಳಿ | ಮೇಲ್ಮಣ್ಣಿರದ ಬರಡು ಭೂಮಿಯಲ್ಲಿ ಬೆಳೆಗಳು ಬೆಳೆಯುವುದೇ ಕಷ್ಟ…!

April 11, 2023
3:27 PM

Advertisement
Advertisement
Advertisement

ಈ ಚಿತ್ರದಲ್ಲಿ ತೋರಿಸಿರುವ ತಡೆಹಿಡಿದ ಮೇಲ್ಮಣ್ಣಿನ ಪ್ರಮಾಣ ಸುಮಾರು ಎಷ್ಟು ಟನ್ನುಗಳಷ್ಟು ಎಂಬುದನ್ನು ಅಂದಾಜು ಮಾಡಬಲ್ಲಿರಾ ? ಪ್ರತಿವರ್ಷ ನಮ್ಮ ಹೊಲಗಳಲ್ಲಿನ ಮೇಲ್ಮಣ್ಣು ಎಷ್ಟು ಪ್ರಮಾಣದಲ್ಲಿ ಸವೆಯುತ್ತಿದೆ – ಎಷ್ಟು ಟನ್ನುಗಳಷ್ಟು ಕೊಚ್ಚಿಕೊಂಡು ಹೋಗುತ್ತಿದೆ ಎಂಬುದರ ಅರಿವು ನಮಗಿದೆಯೇ ?

Advertisement

ಮೇಲ್ಮಣ್ಣಿರದ ಬರಡು ಭೂಮಿಯಲ್ಲಿ ಬೆಳೆಗಳು ಬದುಕುವುದೇ ಕಷ್ಟ. ಬದುಕೇ ಕಷ್ಟವಾಗಿರುವ ಬೆಳೆಗಳು ಹೆಚ್ಚಿನ ಇಳುವರಿಯನ್ನು ಹೇಗೆ ಕೊಡಬಲ್ಲವು ? ಕೊಚ್ಚಿ ಹೋಗುವ ಮೇಲ್ಮಣ್ಣು ಕೊನೆಗೆ ಸೇರುವುದು ಕೆರೆ – ನದಿಗಳಲ್ಲಿ. ಅದನ್ನೇ ನಾವು ಕೆರೆ ಹೂಳು – ಕೆರೆ ಗೋಡು ಮಣ್ಣು ಎನ್ನುತ್ತೇವೆ. ಈ ಕೆರೆಗೋಡು ಮಣ್ಣುಗಳಲ್ಲಿ, ಸಸ್ಯ ಬೆಳವಣಿಗೆಗೆ ಪೂರಕವಾದ ಅಗತ್ಯ ಖನಿಜಾ೦ಶಗಳು ಮತ್ತು ಪೋಷಕಾಂಶಗಳು ಸೇರಿರುತ್ತವೆ.

ಮಣ್ಣಿನ ಸವಕಳಿ ಇಡೀ ಜೀವ ಕುಲಕ್ಕೆ ಅತ್ಯಂತ ಅಪಾಯ ತಂದೊಡ್ಡುವ ದಿನಗಳು ದೂರವಿಲ್ಲ. ಪ್ರತಿಯೊಬ್ಬರೂ ಮಣ್ಣನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕು.

Advertisement

ಮಣ್ಣಿನ ಮೇಲ್ಪದರಲ್ಲಿರುವ 1 ರಿಂದ 2 ಇಂಚು ಮಣ್ಣು ಶ್ರೇಷ್ಠವಾಗಿರುತ್ತದೆ. ಇದು ಅತ್ಯಂತ ಫಲವತ್ತಾಗಿರುತ್ತದೆ. ಮಣ್ಣಿನಲ್ಲಿ 16 ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಆದರೆ ಇಂದು ನಾವು 3 ರಿಂದ 4 ಪೋಷಕಾಂಶಗಳನ್ನು ಮಾತ್ರ ನೀಡುತ್ತಿದ್ದೇವೆ. ಆದ್ದರಿಂದಲೇ ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಸಿ ಅಗತ್ಯಕ್ಕೆ ತಕ್ಕ ಪೋಷಕಾಂಶ ನೀಡಬೇಕು.

ಮಣ್ಣಿನ ಸವಕಳಿ ತಡೆಗಟ್ಟಲು ಸಮರೋಪಾದಿಯ ಕಾರ್ಯಾಚರಣೆ ಅವಶ್ಯಕ. ಭೂಮಿಯ ಮೇಲೆ 1 ಇಂಚು ಮಣ್ಣು ಸೇರಲು 1 ಸಾವಿರ ವರ್ಷಗಳೇ ಬೇಕಾಗುತ್ತದೆ. ಇದು ಕೊಚ್ಚಿಕೊಂಡು ಹೋಗಿದ್ದೇ ಆದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಬರಡು ಭೂಮಿ ನೀಡಬೇಕಾಗುತ್ತದೆ. ಇದರ ಸವಕಳಿ ತಡೆಗಟ್ಟುವ ನಿಟ್ಟಿನಲ್ಲಿ ಜಮೀನಿನಲ್ಲಿ ಬದುಗಳನ್ನು ನಿರ್ಮಿಸುವುದು ಸೇರಿದಂತೆ ಇತರೆ ತಾಂತ್ರಿಕ ಅಂಶಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳಬೇಕು.

Advertisement

ಪ್ರತೀ ವರ್ಷ ಯುಗಾದಿ ಹಬ್ಬದ ನಂತರದ ದಿನಗಳಲ್ಲಿ ಕೆರೆಯಲ್ಲಿನ ಹೂಳು ತೆಗೆದು ಹೊಲಗಳಿಗೆ ಸಾಗಿಸುವ ಸಾಮುದಾಯಿಕ – ಸಾಮೂಹಿಕ ಕೆಲಸ ಹಳ್ಳಿಗಳಲ್ಲಿ ನಡೆಯುತ್ತಿತ್ತು. ಹಳ್ಳಿಯಲ್ಲಿನ ಪ್ರತಿ ಮನೆಯೂ ಈ ಹೂಳು ಸಾಗಿಸುವ ಕೆಲಸದಲ್ಲಿ ತೊಡಗುತ್ತಿತ್ತು.

ಈಗ MGNREGS ಯೋಜನೆ ಮೂಲಕ ಕೆರೆಗಳಲ್ಲಿನ ಹೂಳನ್ನು ನಮ್ಮ ಹೊಲಗಳಿಗೆ ಸಾಗಿಸುವ ಕೆಲಸ ಮಾಡಬಹುದು. ಅಷ್ಟೇ ಅಲ್ಲ, ನಮ್ಮ ಹೊಲಗಳಿಗೆ ಅಗತ್ಯ ಬೇಲಿ ಹಾಕುವಲ್ಲಿ, ಬದುಗಳನ್ನು – ಅಡ್ಡಬಾದುಗಳನ್ನು- ಸಮಪಾತಳಿ ಬದುಗಳನ್ನು ನಿರ್ಮಿಸಲು ಈ ಯೋಜನೆಯಲ್ಲಿ ಅವಕಾಶವಿದೆ.

Advertisement

ಗಿಡ-ಮರಗಳನ್ನು ನೆಡಲು ಗುಂಡಿ ತೊಡುವುದಕ್ಕೆ ಅವಕಾಶವಿದೆ. ಹಾಗೆಯೇ ಗೊಬ್ಬರದ ಗುಂಡಿ ಮಾಡಿಕೊಳ್ಳಲು – ಜಾನುವಾರುಗಳನ್ನಿರಿಸಲು ಅಗತ್ಯವಾದ ಕೊಟ್ಟಿಗೆಗಳನ್ನು ಕಟ್ಟಿಕೊಳ್ಳಲು ಅವಕಾಶವಿದೆ. ಹೊಂಡಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror