ನಾಗರಹೊಳೆ ರಾಷ್ಟ್ರೀಯ ಉದ್ಯಾನವನ(Nagarahole National Park) – ವನ್ಯಜೀವಿಗಳ ರಕ್ಷಣೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ನಿವೃತ್ತ ಅರಣ್ಯಾಧಿಕಾರಿ(Retired Forest Officer) ಕೆ.ಎಂ.ಚಿಣ್ಣಪ್ಪ ನಿಧನರಾದರು. ಕೊಡಗು(Kodagu) ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಾಕೂರು ಗ್ರಾಮದವರಾದ ಚಿಣ್ಣಪ್ಪ ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಾಡಿನ ರಕ್ಷಣೆಯಲ್ಲಿ ಅಂತರರಾಷ್ಟ್ರೀಯ ಮನ್ನಣೆ-ಪ್ರಶಸ್ತಿ ಪಡೆದವರಾಗಿದ್ದರು.
ಮೂವತ್ತು ವರ್ಷಗಳ ದೀರ್ಘ ಅವಧಿಯವರೆಗೆ ಕಾಡಿನೊಳಗೇ ಇದ್ದುಕೊಂಡು ಅದರ ರಕ್ಷಣೆಗಾಗಿ ತನ್ನ ಬದುಕನ್ನೇ ಸವೆಸಿದ್ದರು. ಕುದುರೆಮುಖ ಉಳಿಸಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇವರು ಅಲ್ಲಿನವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸರಕಾರೇತರ ಸಂಸ್ಥೆಯಿಂದ ಹಣಕಾಸಿನ ನೆರವನ್ನು ಒದಗಿಸಿದ್ದರು. ಸೇವೆಯಲ್ಲಿದ್ದಾಗಲೇ”ವೈಲ್ಡ್ ಲೈಫ್ ಫಸ್ಟ್” ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ವಿಧ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಕಾಡ್ಗಿಚ್ಚು ತಡೆ ಕುರಿತು ಜಾಗೃತಿ ಮೂಡಿಸುತ್ತಿದ್ದರು. ಇವರ ಬದುಕಿನ ಕುರಿತು ಲೇಖಕ ಟಿ.ಎಸ್.ಗೋಪಾಲ್ “ಕಾಡಿನೊಳಗೊಂದು ಜೀವ” ಕೃತಿ ರಚಿಸಿ ಪ್ರಕಟಿಸಿದ್ದಾರೆ. ಅದೊಂದು ಅಧ್ಬುತ ಕೃತಿಯಾಗಿದೆ.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…