ಕ್ರಿಕೆಟ್ ಅಂದ ತಕ್ಷಣ ಅಭಿಮಾನಿಗಳಿಗೆ ಅದೆಲ್ಲಿಲ್ಲದ ಉತ್ಸಾಹ. ಪಂದ್ಯಗಳನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಇಂಡಿಯಾ ಮತ್ತು ಪಾಕಿಸ್ತಾನ ಅಂದ್ರೆ ಕೇಳಬೇಕೇ..? ಸದ್ಯ ಮುಂಬರಲಿರುವ ಏಕದಿನ ವಿಶ್ವಕಪ್ #ODIWorldCup2023ರ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆಯಾಗಿದೆ. ನೂತನ ವೇಳಾಪಟ್ಟಿಯ ಪ್ರಕಾರ 9 ಪಂದ್ಯಗಳ ದಿನಾಂಕಗಳು ಬದಲಾಗಿವೆ. ಇದರಲ್ಲಿ ಟೀಂ ಇಂಡಿಯಾದ 2 ಪಂದ್ಯಗಳು ಸೇರಿವೆ. ಹಾಗಿದ್ದರೆ ಬದಲಾದ ವೇಳಾಪಟ್ಟಿಯ ಪ್ರಕಾರ ಟೀಂ ಇಂಡಿಯಾ ಯಾವ ದಿನ ಯಾವ ತಂಡವನ್ನು ಎದುರಿಸಿದೆ ಎಂಬುದರ ವಿವರವನ್ನು ನೋಡುವುದಾದರೆ..
ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಆಸ್ಟ್ರೇಲಿಯಾ ವಿರುದ್ಧ ಆರಂಭಿಸಲಿದೆ. ಉಭಯ ತಂಡಗಳ ಈ ಪಂದ್ಯ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಡೆಯಲ್ಲಿದೆ. ಭಾರತ ತನ್ನ ಎರಡನೇ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯ ಅಕ್ಟೋಬರ್ 11 ರಂದು ದೆಹಲಿಯಲ್ಲಿ ನಡೆಯಲ್ಲಿದೆ. ಈ ಎರಡು ಪಂದ್ಯಗಳ ಬಳಿಕ ಅಕ್ಟೋಬರ್ 14 ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಹಿಂದೆ ಈ ಪಂದ್ಯವನ್ನು ಅಕ್ಟೋಬರ್ 15 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಭದ್ರತಾ ಸಮಸ್ಯೆಯಿಂದ ಪಂದ್ಯವನ್ನು 1 ದಿನ ಮೊದಲು ಆಯೋಜಿಸಲಾಗುತ್ತಿದೆ. ಭಾರತ ತನ್ನ ನಾಲ್ಕನೇ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 19 ರಂದು ಪುಣೆಯಲ್ಲಿ ನಡೆಯಲ್ಲಿದೆ.
ಅಕ್ಟೋಬರ್ 22 ರಂದು ನಡೆಯಲ್ಲಿರುವ ಐದನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಧರ್ಮಶಾಲಾದಲ್ಲಿ ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 29 ರಂದು ಮತ್ತೊಂದು ಬಲಿಷ್ಠ ತಂಡವಾದ ಇಂಗ್ಲೆಂಡ್ ಎದುರು ತನ್ನ ಆರನೇ ಪಂದ್ಯವನ್ನು ಟೀಂ ಇಂಡಿಯಾ ಲಕ್ನೋದಲ್ಲಿ ಆಡಲಿದೆ.ತನ್ನ 7ನೇ ಪಂದ್ಯದಲ್ಲಿ ರೋಹಿತ್ ಪಡೆ ಶ್ರೀಲಂಕಾ ತಂಡವನ್ನು ಎದುರಿಸುತ್ತಿದ್ದು, ಈ ಪಂದ್ಯ ನವೆಂಬರ್ 2 ರಂದು ಮುಂಬೈನಲ್ಲಿ ನಡೆಯಲ್ಲಿದೆ. ನವೆಂಬರ್ 5 ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ 8ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೆ ಕೋಲ್ಕತ್ತಾ ಆತಿಥ್ಯವಹಿಸಲಿದೆ. ಅಂತಿಮವಾಗಿ ಲೀಗ್ ಹಂತದಲ್ಲಿ ಭಾರತ ನವೆಂಬರ್ 12 ರಂದು ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಈ ಮೊದಲು ಈ ಪಂದ್ಯವನ್ನು ನವೆಂಬರ್ 11 ರಂದು ನಡೆಸಲು ತೀರ್ಮಾನಿಸಲಾಗಿತ್ತು.
Source: Sports News
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…