MIRROR FOCUS

ಅಡಿಕೆಗೆ ಇನ್ನೊಂದು ರೋಗ ಚೀನಾದಲ್ಲಿ…! | ರಿಂಗ್‌ ಸ್ಫಾಟ್‌ ಎನ್ನುವ ವೈರಸ್ ಕಾರಣವಂತೆ..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆಗೆ ಎಲೆಚುಕ್ಕಿ ರೋಗ, ಹಳದಿ ಎಲೆರೋಗದ ನಂತರ ಇದೀಗ ಇನ್ನೊಂದು ವೈರಸ್‌ ಬಗ್ಗೆ ಚರ್ಚೆಯಾಗುತ್ತಿದೆ. ಚೀನಾದಲ್ಲಿ 2019 ರಲ್ಲಿ ಬೆಳಕಿಗೆ ಬಂದ ರಿಂಗ್‌ ಸ್ಪಾಟ್‌ ಡಿಸೀಸ್‌ ಇದೀಗ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಹವಾಮಾನ ಬದಲಾವಣೆಯ ಜೊತೆಗೆ ಈ ವೈರಸ್‌ ಕೂಡಾ ಹಬ್ಬುವ ಬಗ್ಗೆ ಚರ್ಚೆ ಇದೆ. ಸದ್ಯ ಭಾರತದ ತ್ರಿಪುರಾದಲ್ಲಿ ಈ ರೋಗ ಕಂಡುಬಂದಿರುವ ಬಗ್ಗೆ ಕೆಲವು ಮಾಧ್ಯಮಗಳು ಉಲ್ಲೇಖಿಸಿವೆ. ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಚರ್ಚಿಸಲಾಗಿದೆ. ಇದೀಗ ಹೊಸದಾದ ಈ ವೈರಸ್‌ ಬಗ್ಗೆ ಅಡಿಕೆ ಬೆಳೆಗಾರರು ಯೋಚಿಸಬೇಕಾದ ಅಗತ್ಯ ಇದೆ.

Advertisement

ರಿಂಗ್‌ ಸ್ಫಾಟ್‌ ವೈರಸ್‌ ಹೆಚ್ಚಾಗಿ ಕಂಡುಬರುವುದು ಪಪ್ಪಾಯಿ ಬೆಳೆಯಲ್ಲಿ. ಸಾಮಾನ್ಯವಾಗಿ ಎಲ್ಲಾ ಕಡೆಯೂ ಈ ವೈರಸ್‌ ಪಪ್ಪಾಯಿ ಬೆಳೆಗೆ ಧಾಳಿ ಮಾಡುತ್ತದೆ. ಇದಕ್ಕೆ ಸೂಕ್ತ ಔಷಧಿಗಳು ಇದ್ದರೂ ಪಪ್ಪಾಯಿ ಕೃಷಿ ಹಲವು ಕಡೆ ನಾಶವಾಗಿರುವ ಉದಾಹರಣೆಗಳು ಹೆಚ್ಚು. ಈ ವೈರಸ್‌ ಹೆಚ್ಚಾಗಿ ಬಾಧಿಸಿದರೆ ನಾಶ ಮಾಡುವುದೇ ಮೊದಲ ಪರಿಹಾರ. ಈಚೆಗೆ ಈ ವೈರಸ್‌ ಇತರ ಕೃಷಿಗಳಲ್ಲೂ ಕಂಡುಬಂದಿದೆ. ಟೊಮೊಟೋದಲ್ಲೂ ಕಂಡುಬಂದಿತ್ತು. 2019 ರಲ್ಲಿ ಚೀನಾದಲ್ಲಿ ಅಡಿಕೆಗೂ ಈ ವೈರಸ್‌ ದಾಳಿ ಮಾಡಿದೆ ಎಂದು ವರದಿ ಹೇಳುತ್ತದೆ. ಅದಾದ ಬಳಿಕ ಭಾರತದಲ್ಲಿ ಅಡಿಕೆ ಬೆಳೆಯುವ ಪ್ರದೇಶವಾದ ತ್ರಿಪುರಾದಲ್ಲೂ ಈ ವೈರಸ್‌ ಕಂಡುಬಂದಿತ್ತು ಎಂದು ಉಲ್ಲೇಖಿಸಲಾಗಿದೆ. ಉಳಿದಂತೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲ.

ಚೀನಾದಲ್ಲಿ ಅಡಿಕೆಗೆ ಕಂಡುಬಂದಿರುವ ಈ ರೋಗದ ಗುಣಲಕ್ಷಣಗಳ ಪ್ರಕಾರ ಎಲೆಚುಕ್ಕಿ ರೋಗವನ್ನೇ ಹೋಲುತ್ತದೆ. ಆದರೆ ಚುಕ್ಕಿಗಳಲ್ಲಿ ವ್ಯತ್ಯಾಸ ಇದೆ ಎಂದು ಹೇಳಲಾಗಿದೆ. ಈಗ ವಿಪರೀತವಾಗಿ ಹವಾಮಾನ ವೈಪರೀತ್ಯ ಕಂಡುಬರುತ್ತಿದೆ. ವಿಪರೀತ ಉಷ್ಣತೆ ಏರಿಕೆ ಹಾಗೂ  ತಕ್ಷಣವೇ ಹವಾಮಾನದಲ್ಲಿ ಬದಲಾವಣೆಯು ಇಂತಹ ವೈರಸ್‌ ಹರಡುವುದಕ್ಕೆ ಹೆಚ್ಚು ಅನುಕೂಲವಾಗಿದೆ. ಈಗಾಗಲೇ ಮಲೆನಾಡು ಭಾಗದಲ್ಲಿಯೇ ಅಡಿಕೆಗೆ ಎಲೆಚುಕ್ಕಿ ರೋಗ ಹೆಚ್ಚಾಗಿ ಬಾಧಿಸಿದರೆ, ಹಳದಿ ಎಲೆರೋಗವೂ ಮಲೆನಾಡು ಭಾಗದಲ್ಲಿಯೇ ಹೆಚ್ಚಾಗಿ ಕಂಡುಬಂದಿದೆ. ಇದೀಗ ಈ ಹೊಸ ವೈರಸ್‌ ರಿಂಗ್‌ ಸ್ಫಾಟ್‌ ಬಗ್ಗೆ ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿ ಆರಂಭವಾಗಿದೆ. ಇದಕ್ಕಾಗಿ ತಕ್ಷಣವೇ ಈ ಬಗ್ಗೆ ರೋಗದ ಗುಣಲಕ್ಷಣಗಳು ಹಾಗೂ ಭಾರತದ ಬೇರೆಲ್ಲಾದರೂ ಈ ವೈರಸ್‌ ಇದೆಯೇ ಎಂಬುದರ ಬಗ್ಗೆ ಬೆಳೆಗಾರರೇ ಮಾಹಿತಿ ಪಡೆದುಕೊಳ್ಳಬೇಕಿದೆ.

ಈ ಹಿಂದೆ ಎಲೆಚುಕ್ಕಿ ರೋಗ ಆರಂಭವಾದ ಬಳಿಕ ಹಲವಾರು ಅಡಿಕೆ ಬೆಳೆಗಾರರು ಕಂಗಾಲಾಗಿದ್ದರು. ಹಲವಾರು ವರ್ಷಗಳ ಹಿಂದೆಯೇ ಎಲೆಚುಕ್ಕಿ ರೋಗ ಇದ್ದರೂ ಕೃಷಿಕರ ತೋಟದ ಮೇಲೆ ಗಂಭೀರ ಪರಿಣಾಮ ಬೀಳಲಿಲ್ಲ. ಹವಾಮಾನ ಬದಲಾವಣೆಯ ಕಾರಣದಿಂದ ಈಚೆಗಿನ ವರ್ಷಗಳಲ್ಲಿ ಎಲ್ಲಾ ರೋಗಗಳೂ ವಿಪರೀತವಾಗಿ ಕಾಡುತ್ತಿವೆ. ಹೀಗಾಗಿ ಸಣ್ಣ ವೈರಸ್‌ ಕೂಡಾ ಕೃಷಿಕರು ತಮ್ಮ ಭವಿಷ್ಯದ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಿದೆ . ಚೀನಾದ ಹೈನಾನ್‌ ಪ್ರದೇಶದ ಪ್ರಮುಖ ಬೆಳೆ ಅಡಿಕೆ. ಅಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಕೊರೋನಾ ವೈರಸ್‌ ಕೂಡಾ ಚೀನಾದ ವುಹಾನ್‌ ಪ್ರದೇಶದಲ್ಲಿ ಮೊದಲು ಕಂಡುಬಂದಿತ್ತು.

Advertisement

Arecanut one of the two most important commercial crops in Hainan, China, has been severely damaged by a variety of pathogens and insects. Here, we report a new disease, tentatively referred to as areca palm necrotic ringspot disease (ANRSD), which is highly epidemic in the main growing regions in Hainan.

Advertisement

(ಚೀನಾದ ವರದಿ)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

3 hours ago

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ

ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…

3 hours ago

ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…

3 hours ago

ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…

3 hours ago

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…

13 hours ago

ಸ್ವಾತಂತ್ರ್ಯಕ್ಕಾಗಿ ಮದುವೆ

ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ.…

13 hours ago