ಕೋಲ್ಚಾರಿನಿಂದ ಅಜ್ಜಾವರ ತನಕದ ಸುಮಾರು ಐದು ಕಿ.ಮೀ.ಉದ್ದವಿರುವ ಈ ರಸ್ತೆಗೆ ಇನ್ನೂ ಕೂಡಾ ಕಾಯಕಲ್ಪ ಒದಗಿ ಬಂದಿಲ್ಲ. ಈ ರಸ್ತೆಗೆ ಪೈಂಬೆಚ್ಚಾಲು ಪ್ರದೇಶದ ಒಂದಷ್ಟು ಭಾಗದಲ್ಲಿ ಕಾಂಕ್ರೀಟೀಕರಣ ಮಾಡಲಾಗಿದ್ದು ರಸ್ತೆಗೆ ಸೂಕ್ತ ಚರಂಡಿ ವ್ಯವಸ್ತೆ ಇಲ್ಲದ ಕಾರಣ ಮಳೆಗಾಲದಲ್ಲಿ ನೀರು ಹರಿದು ಕಾಂಕ್ರೀಟ್ ರಸ್ತೆಯು ಕೂಡಾ ಹಾಳಾಗಿರುತ್ತದೆ. ಇನ್ನು ಉಳಿದ ಕಡೆ ಇದುವರೆಗೂ ಯಾವುದೇ ರೀತಿಯ ಅಭಿವೃದ್ಧಿ ಕಾಣದ ಮಣ್ಣು ರಸ್ತಯಿದ್ದು ಮಳೆಗಾಲ ಬಂತೆಂದರೆ ಪೂರ್ತಿ ಕೆಸರುಮಯವಾಗಿ ಸಂಚಾರಕ್ಕೆ ಅಯೋಗ್ಯವಾಗಿರುತ್ತದೆ. ಈ ಪ್ರದೇಶದ ಜನರು ತುರ್ತು ಅಗತ್ಯಗಳಿಗಾಗಿ ನಗರವನ್ನು ಸಂಪರ್ಕಿಸಲು ಈ ರಸ್ತೆಯನ್ನು ಬಳಸಬೇಕಾಗಿದ್ದು ಮಳೆಗಾಲದಲ್ಲಿ ತೀರಾ ಸಂಕಷ್ಟ ಅನುಭವಿಸಬೇಕಾಗುತ್ತದೆ. ರಸ್ತೆ ಸಮಸ್ಯೆಯ ಕಾರಣ ಈ ಪ್ರದೇಶಕ್ಕೆ ಸಾರ್ವಜನಿಕ ಬಸ್ಸು ಸಂಚಾರವು ಮಳೆಗಾಲದಲ್ಲಿ ಸಮರ್ಪಕವಾಗಿರದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸಬೇಕಾಗುತ್ತದೆ.
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…