Advertisement
Exclusive - Mirror Hunt

ಡ್ರಾಗನ್‌ ಫ್ರುಟ್‌ ಬೆಳೆದು ಮಾರುಕಟ್ಟೆ ಕಂಡುಕೊಂಡ ಕೃಷಿಕ | ಸಣ್ಣ ರೈತರು ಮಾರುಕಟ್ಟೆಗೆ ಚಿಂತಿಸಬೇಕಿಲ್ಲ…!

Share

ಡ್ರಾಗನ್‌ ಫ್ರುಟ್‌ ಈಗ ಕರಾವಳಿ ಜಿಲ್ಲೆಯಲ್ಲಿ ಕೂಡಾ ಆಸಕ್ತಿ ಮೂಡಿಸಿದ ಕೃಷಿ. ಹಣ್ಣಿನ ಕೃಷಿಯಲ್ಲಿ ಡ್ರಾಗನ್‌ ಕೂಡಾ ಮುಂಚೂಣಿಯಲ್ಲಿದೆ. ಹಲವು ಕೃಷಿಕರು ಈಗ ಡ್ರಾಗನ್‌ನತ್ತ ಮುಖ ಮಾಡಿದ್ದಾರೆ. ಆದರೆ ಮಾರುಕಟ್ಟೆ ಸಮಸ್ಯೆ ಪ್ರತೀ ಬಾರಿಯೂ ಕೃಷಿಕರನ್ನು ಕಂಗೆಡಿಸುತ್ತದೆ. ಸಣ್ಣ ರೈತರಿಗೆ ಮಾರುಕಟ್ಟೆ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತದೆ. ಇಂತಹದ್ದರಲ್ಲಿ ಧೈರ್ಯವಾಗಿ ಡ್ರಾಗನ್‌ ಫ್ರುಟ್‌ ಕೃಷಿ ಮಾಡಿ ಸ್ವತ: ಮಾರುಕಟ್ಟೆಯನ್ನೂ ಕಂಡುಕೊಂಡು ಮಾರಾಟವನ್ನೂ ಮಾಡುವ ಸಣ್ಣ ಕೃಷಿಕರೊಬ್ಬರು ಮಾದರಿಯಾಗಿದ್ದಾರೆ.………ಮುಂದೆ ಓದಿ……..

Advertisement
Advertisement
Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪದ ಕೃಷಿಕ ಸುಬ್ರಹ್ಮಣ್ಯ ಭಟ್.‌ ಅಡಿಕೆ ಜೊತೆಗೆ ಇತರ ಕೃಷಿಯನ್ನೂ ಮಾಡುತ್ತಿರುವ ಮಧ್ಯಮ ವರ್ಗದ ಕೃಷಿಕ. ಕಳೆದ ಎರಡು ವರ್ಷದಿಂದ ಡ್ರಾಗನ್‌ ಫ್ರುಟ್‌ ಕೃಷಿಯಲ್ಲಿ ತೊಡಗಿಸಿಕೊಂಡವರು. ಇವರ ಪುತ್ರ ಪ್ರಮೋದ ಅವರು ಓದಿನ ಬಳಿಕ ನಗರದಲ್ಲಿ ಉದ್ಯೋಗದಲ್ಲಿದ್ದರು. ಎರಡು ವರ್ಷದ ಹಿಂದೆ ಕೃಷಿಯೇ ಉದ್ಯೋಗ ಮಾಡಲು ಬಂದಾಗ ಅಡಿಕೆಯ ಜೊತೆಗೆ ಪರ್ಯಾಯವಾದ ಕೃಷಿಯೂ ಅಗತ್ಯ ಇದೆ ಎಂದು ಮನಗಂಡವರು. ಹೀಗಾಗಿ ಡ್ರಾಗನ್‌ ಕೃಷಿಯತ್ತ ಮುಖ ಮಾಡಿದರು. ಹಾಗೆಂದು ಹೆಚ್ಚು ಬಂಡವಾಳ ಹಾಕಿ ದೊಡ್ಡ ಕೃಷಿ ಮಾಡುವ ಮನಸ್ಸು ಮಾಡದೆ  ಸಣ್ಣ ಪ್ರಮಾಣದಲ್ಲಿ ಡ್ರಾಗನ್‌ ಕೃಷಿ ಮಾಡಿದರು. ಸುಬ್ರಹ್ಮಣ್ಯ ಭಟ್‌ ಅವರೂ ಪುತ್ರನ ಕೃಷಿ ಕಾರ್ಯಕ್ಕೆ ಸಾತ್‌ ನೀಡಿದರು. ವರ್ಷದಲ್ಲಿಯೇ ಡ್ರಾಗನ್‌ ಹಣ್ಣು ಬೆಳೆ ಕೈಗೆ ಬಂದಿತು.

Advertisement

ಡ್ರಾಗನ್‌ ಫ್ರುಟ್

ಡ್ರಾಗನ್‌ ಹಣ್ಣು ಬೆಳೆ ಬಂದಾಗ ಸಹಜವಾಗಿಯೇ ಮಾರುಕಟ್ಟೆ ಸಮಸ್ಯೆ ಎದುರಾಯಿತು. ಸಣ್ಣ ಪ್ರಮಾಣದ ಬೆಳೆ, ಮಧ್ಯಮ ವರ್ಗದ ಕೃಷಿಕ. ದೊಡ್ಡ ಪ್ರಮಾಣದಲ್ಲಿ ಯಾವುದೇ ಕೃಷಿ ಮಾಡಿದರೆ ಮಾರುಕಟ್ಟೆ, ಮಾರಾಟಗಾರರರು ಮನೆಗೇ ಬಂದು, ತೋಟಕ್ಕೇ ಬಂದು ಖರೀದಿ ಮಾಡುತ್ತಾರೆ. ಸಣ್ಣ ಪ್ರಮಾಣದಲ್ಲಿ ಬೆಳೆದ ಯಾವ ಕೃಷಿ, ಯಾವ ಹಣ್ಣುಗಳೂ ಕೂಡಾ ಕೃಷಿಕ ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಅರ್ಧ ರೇಟು..!. ಸುಬ್ರಹ್ಮಣ್ಯ ಭಟ್‌ ಹಾಗೂ ಪ್ರಮೋದರಿಗೂ ಅದೇ ಸಮಸ್ಯೆ ಕಾಡಿತು. ಯಾವುದೇ ಹಣ್ಣಾದರೂ ಅವುಗಳ ಉಳಿಯುವ ಅವಧಿ ಕಡಿಮೆ. ಅದಕ್ಕೂ ಮುನ್ನ ಮಾರುಕಟ್ಟೆ ಸೇರಬೇಕು, ಮಾರಾಟವಾಗಬೇಕು. ಸವಾಲನ್ನು ಸ್ವೀಕರಿಸಿದ ತಂದೆ ಹಾಗೂ ಮಗ ತಾವೇ ಮಾರಾಟ ಮಾಡಲು ಮುಂದಾದರು. ಆರಂಭದಲ್ಲಿ ಸ್ನೇಹಿತರಿಗೆ ಡ್ರಾಗನ್‌ ಫ್ರುಟ್‌ ಬೆಳೆ ಇರುವ ಬಗ್ಗೆ ಮಾಹಿತಿ ನೀಡಿದರು. ಅವರೆಲ್ಲಾ ಖರೀದಿ ಮಾಡಿದರು. ಅದಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದಾಗ ಖರೀದಿ ಮಾಡಿದರು. ಕಳೆದ ವರ್ಷದ ಫಸಲು ಅಷ್ಟರಲ್ಲಿ ಮುಗಿಯಿತು, ಮಾರುಕಟ್ಟೆಯ ಹಿಡಿತ ಕಂಡುಕೊಂಡರು.

Advertisement
ಡ್ರಾಗನ್‌ ಹೂವು

ಈ ಬಾರಿ ಡ್ರಾಗನ್‌ ಹಣ್ಣು ಆರಂಭವಾದಾಗ ಸುಬ್ರಹ್ಮಣ್ಯ ಭಟ್‌ ಅವರು ಕಳೆದ ವರ್ಷದಂತೆಯೇ ಸ್ನೇಹಿತ ವಲಯಕ್ಕೆ ಮಾಹಿತಿ ನೀಡಿದರು. ಕೆಲವರು ವಾರಕ್ಕೊಮ್ಮೆ ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಸುಬ್ರಹ್ಮಣ್ಯ ಭಟ್ಟರ ಪುತ್ರ ಕೃಷಿಕ ಪ್ರಮೋದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ಕೂಟರ್‌ ಮೂಲಕ ತೆರಳಿ ಅಲ್ಲಿ ತಾವು ಬೆಳೆದ ಡ್ರಾಗನ್‌ ಮಾರಾಟಕ್ಕೆ ನಿಂತರು. ಮಧ್ಯಾಹ್ನದ ಒಳಗೆ ಎಲ್ಲವೂ ಖಾಲಿಯಾಗಿ ಮನೆಗೆ ತಲಪಿದರು. ಉತ್ತಮ ಮಾರುಕಟ್ಟೆಯನ್ನು ಪಡೆದುಕೊಂಡರು.‌ ಇಂಜಿನಿಯರಿಂಗ್‌ ಓದಿ ಉದ್ಯೋಗದಲ್ಲಿದ್ದ ಪ್ರಮೋದ್‌ ಅವರು ಕೃಷಿಗೆ ಬಂದು ಡ್ರಾಗನ್‌ ಹಣ್ಣು ಬೆಳೆಸಿ ತಾವೇ ಸುಬ್ರಹ್ಮಣ್ಯದ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಇದೂ ಕೂಡಾ ಮಾದರಿ ಪ್ರಯತ್ನವಾಗಿದೆ.

ಡ್ರಾಗನ್‌ ಫ್ರುಟ್‌ ಸರಿಯಾಗಿ 20 ದಿನಗಳಿಗೊಮ್ಮೆ ಕಟಾವು ಮಾಡುತ್ತಾರೆ. ಒಮ್ಮೆ ಕಟಾವು ಮಾಡುವಾಗ ಸುಮಾರು 1.5 ಕ್ವಿಂಟಾಲ್‌ನಿಂದ 2 ಕ್ವಿಂಟಾಲ್‌ವರೆಗೂ ಲಭ್ಯವಾಗುತ್ತದೆ. ಎಲ್ಲವನ್ನೂ ಗಾತ್ರದ ಆಧಾರದಲ್ಲಿ ವಿಭಾಗಿಸಿ ಮಾರಾಟ ಮಾಡುತ್ತಾರೆ. ಪ್ರತೀ ಕೆಜಿಗೆ 150 ರೂಪಾಯಿಯಂತೆ ರೈತನೇ ಮಾರಾಟ ಮಾಡುವುದು ಉತ್ತಮ ವ್ಯವಸ್ಥೆಯೂ ಆಗಿದೆ. ಸಣ್ಣ ರೈತರು ಸ್ವಾವಲಂಬಿಯಾಗಲು, ಮಾರುಕಟ್ಟೆ ಸಮಸ್ಯೆ ತಪ್ಪಿಸಲು ಈ ಕ್ರಮಗಳು ಹೆಚ್ಚು ಪ್ರಯೋಜನವಾಗಿವೆ ಕೂಡಾ. ಖರೀದಿದಾರರು ಕೂಡಾ ಯಾವುದೇ ಪ್ರತಿಕ್ರಿಯೆ ನೀಡದೆ ರೈತನಿಗೆ ಗೌರವ ನೀಡುತ್ತಾರೆ. ಇದೊಂದು ಉತ್ತಮ ಬೆಳವಣಿಗೆಯೂ ಆಗಿದೆ. ಈ ಬಾರಿ ಮೊದಲ ಬೆಳೆ ಮೇ ತಿಂಗಳಲ್ಲಿ ಮಾಡಿದಾಗ 50 ಕೆಜಿಯಷ್ಟು ಹಣ್ಣು ದೊರೆತಿದೆ, ನಂತರ 250 ಕೆಜಿವರೆಗೂ ಲಭ್ಯವಾಗಿದೆ ಎನ್ನುತ್ತಾರೆ ಪ್ರಮೋದ್.

Advertisement
ಡ್ರಾಗನ್‌ ಹಣ್ಣು ಮಾರಾಟದಲ್ಲಿ ಯುವ ಕೃಷಿಕ ಪ್ರಮೋದ್

ಅಡಿಕೆಯ ಜೊತೆಗೆ ಪರ್ಯಾಯವೂ ಅಗತ್ಯ ಎನ್ನುವ ಸುಬ್ರಹ್ಮಣ್ಯ ಭಟ್ಟರು ಡ್ರಾಗನ್‌ ಕೃಷಿ ಲಾಭದಾಯಕವಾಗಿದೆ ಎನ್ನುತ್ತಾರೆ. ವರ್ಷದಲ್ಲಿ ಎರಡು ಬಾರಿ ಡ್ರಾಗನ್‌ ಹಣ್ಣು ತೆಗೆಯಲು ಸಾಧ್ಯವಿದೆ ಎನ್ನುತ್ತಾರೆ ಪ್ರಮೋದ ಅವರು, ಇದಕ್ಕಾಗಿ ಬೆಳಕು ನೀಡಬೇಕು ವಿದೇಶಗಳಲ್ಲಿ, ದೊಡ್ಡ ಪ್ರಮಾಣದ ಕೃಷಿಕರು ಈ ಮಾದರಿಯನ್ನೂ ಮಾಡುತ್ತಾರೆ ಎನ್ನುತ್ತಾರೆ. ಡ್ರಾಗನ್‌ ಕೃಷಿಯಲ್ಲೂ ಸಮಸ್ಯೆಗಳೇ ಇಲ್ಲ ಎಂದಲ್ಲ, ಸಮಸ್ಯೆಗಳೂ ಇದೆ. ಬಿಸಿಲು-ಮಳೆ ಇದೆರಡೂ ಸಮಸ್ಯೆಯಾಗುತ್ತದೆ. ಸಮಸ್ಯೆ ಇಲ್ಲದ ಕೃಷಿ, ಸಮಸ್ಯೆ ಇಲ್ಲದ ಉದ್ಯೋಗ ಯಾವುದಿದೆ, ಸವಾಲುಗಳನ್ನು ಎದುರಿಸಬೇಕಿದೆ. ನಗರದಿಂದ ಕೃಷಿಗೆ ಬಂದಾಗ ಕಡಿಮೆ ವೆಚ್ಚದಲ್ಲಿ , ಕಡಿಮೆ ಸ್ಥಳದಲ್ಲಿ ಮಾಡಬಹುದಾದ ಕೃಷಿ ಯಾವುದು ಎಂಬುದರ ಹಿಂದೆ ಬಿದ್ದಾಗ ಡ್ರಾಗನ್‌ ಕೃಷಿ ಕಾಣಿಸಿತು, ಮುಂದಿನ ಎರಡು ತಿಂಗಳಿನಿಂದ ಡ್ರಾಗನ್‌ ಗಿಡವನ್ನೂ ಕೂಡಾ ಮಾರಾಟ ಮಾಡುವ ಯೋಜನೆ ಇದೆ ಎಂದು ಹೇಳುತ್ತಾರೆ. ಪ್ರಮೋದ್‌ ಅವರ ಸಂಪರ್ಕ : 8660135970 ………ಮುಂದೆ ಓದಿ……..

Advertisement

ಡ್ರಾಗನ್‌ ಹಣ್ಣಿನ ಮೌಲ್ಯವರ್ಧನೆ ಬಗ್ಗೆಯೂ ಒಂದೇ ವರ್ಷದಲ್ಲಿ ಪ್ರಯತ್ನ ಮಾಡಿರುವ ಸುಬ್ರಹ್ಮಣ್ಯ ಭಟ್ಟರು ಡ್ರಾಗನ್‌ ಹಣ್ಣಿನ ಜಾಮ್‌ ತಯಾರಿಸಿದ್ದಾರೆ. ಆದರೆ ಇನ್ನೂ ಅದರ ಸುಧಾರಣೆ ಬೇಕಿದೆ. ಉತ್ತಮವಾಗಿದೆ, ಇಲ್ಲಿ ಕೆಲವೊಂದು ಬದಲಾವಣೆಗಳು, ರುಚಿಗೆ ಬೇಕಾದ ವ್ಯವಸ್ಥೆಯೂ ಆಗಬೇಕು ಎನ್ನುತ್ತಾರೆ. ಡ್ರಾಗನ್‌ ಹಣ್ಣಿನ ಮೌಲ್ಯವರ್ಧನೆಗೂ ಪ್ರಯತ್ನವೂ ಉತ್ತಮವಾದ ಹೆಜ್ಜೆಯಾಗಿದೆ.

ಸಾಮಾನ್ಯವಾಗಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಇರುತ್ತದೆ. ಹೀಗಾಗಿ ಈ ವಾತಾವರಣದಲ್ಲಿ ಡ್ರಾಗನ್‌ ಕೃಷಿ ಬೆಳೆಯಬಲ್ಲುದೇ ಹಾಗೂ ಉತ್ತಮ ಇಳುವರಿ ನೀಡಬಹುದೇ ಎನ್ನುವ ಸಂದೇಹ ಹಲವು ಕೃಷಿಕರಿಗೆ ಇತ್ತು. ಇದೀಗ ಈ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಬಳ್ಪದಂತಹ ಪ್ರದೇಶದಲ್ಲಿ ಅಂದರೆ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕೂಡಾ ಡ್ರಾಗನ್‌ ಫ್ರುಟ್‌ ಕೃಷಿ ಯಶಸ್ವಿಯಾಗಿ ಬೆಳೆದಿದೆ. ಭಾರೀ ಮಳೆಗೆ ಡ್ರಾಗನ್‌ ಹೂವಿನ ಮೇಲೆ ಪರಿಣಾಮ ಬೀರುತ್ತದೆ, ಪರಾಗಸ್ಫರ್ಶಕ್ಕೆ ಸಮಸ್ಯೆಯಾಗುತ್ತದೆ, ಭಾರೀ ಮಳೆ ಕೊಳೆ ರೋಗಕ್ಕೂ ಕಾರಣವಾಗುತ್ತದೆ. ಹಾಗಿದ್ದರೂ ಇಳುವರಿ ಮೇಲೆ ಪರಿಣಾಮ ಬೀರಿಲ್ಲ. ಹೆಚ್ಚುವರಿ ಆದಾಯದ ಮೇಲೆ ಸ್ವಲ್ಪ ಹೊಡೆತ ಬೀಳಬಹುದು.

Advertisement

A young agriculturist Pramod has emerged as an exemplary figure within the agricultural community by successfully cultivating dragon fruit and independently identifying and establishing his own market for the produce. Through a combination of diligence, innovation, and entrepreneurial spirit, he has not only mastered the complexities of dragon fruit cultivation but also navigated the challenges of market dynamics to secure profitable sales channels. His achievements have garnered significant attention, making him a source of inspiration for other farmers seeking to adopt modern and sustainable agricultural practices.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

9 hours ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

18 hours ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

22 hours ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

22 hours ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

1 day ago

ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ಕಾಡ್ಗಿಚ್ಚು | 25 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಪ್ರವಾಸಿಗರು ಸೇರಿದಂತೆ ಜನರು ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಹಾಗೂ ಅರಣ್ಯ ಪ್ರದೇಶಕ್ಕೆ ತೆರಳಿ…

2 days ago