ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಮುಸ್ಲಿಂ ಮುಖಂಡ ಡಾ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.ಈ ಸಂದರ್ಭ ಧಾರ್ಮಿಕ ಸೌಹಾದರ್ತೆಯ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭ ಹಿರಿಯ ಆರ್‌ಎಸ್‌ಎಸ್ ಪ್ರಮುಖರಾದ ಕೃಷ್ಣ ಗೋಪಾಲ್, ಇಂದ್ರೇಶ್ ಕುಮಾರ್, ರಾಮ್‌ಲಾಲ್ ಮತ್ತು ಕರಿಶ್ ಕುಮಾರ್ ಕೂಡ ಭಾಗವಹಿಸಿದ್ದರು. ಮಾಹಿತಿ ಪ್ರಕಾರ ಸಭೆಯಲ್ಲಿ ಹಿಜಾಬ್ ವಿವಾದ, ಜ್ಞಾನವಾಪಿ ಮತ್ತು ಧರ್ಮಗಳ ನಡುವೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಸೇರಿದಂತೆ ಇತರ ವಿಷಯಗಳನ್ನು ಚರ್ಚಿಸಲಾಗಿದೆ.
ಈ ಸಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್,” ರಾಷ್ಟ್ರೀಯ ಸ್ವಯಂ ಸೇಚಕ ಸಂಘದ ಸರಸಂಘ ಚಾಲಕರು ಈ ದೇಶದ ಎಲ್ಲಾ ವರ್ಗದ ಜನರನ್ನೂ ಭೇಟಿಯಾಗುತ್ತಾರೆ. ದೇಶದ ಹಿತದೃಷ್ಟಿಯಿಂದ ಇದು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಹಿಜಾಬ್ ವಿವಾದ ಹಾಗೂ ಜ್ಞಾನವಾಪಿ ವಿಚಾರದಲ್ಲೂ ವಿವಾದ ಭುಗಿಲೆದ್ದ ನಂತರ, ಆರೆಸ್ಸೆಸ್ ಮುಖ್ಯಸ್ಥರು ಮುಸ್ಲಿಂ ಮುಖಂಡರು ಮತ್ತು ಶಿಕ್ಷಣ ತಜ್ಞರನ್ನು ಭೇಟಿ ಮಾಡಿದರು. ಇದೀಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ ಇತ್ತೀಚಿನ ವಿವಾದಗಳು ಮತ್ತು ದೇಶದಲ್ಲಿ ಧಾರ್ಮಿಕ ಒಳಗೊಳ್ಳುವಿಕೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ಇದೇ ವೇಳೆ ಗೋಹತ್ಯೆ ಕುರಿತು ಮುಸ್ಲಿಂ ಮುಖಂಡ ಅಭಿಪ್ರಾಯ, ಜಿಹಾದ್ ನಂತಹ ಪದ ಬಳಕೆ ಹಾಗೂ ಅವುಗಳ ಉದ್ದೇಶಗಳ ಬಗ್ಗೆಯೂ ಅಭಿಪ್ರಾಯ ಕೋರಿದರು ಎಂದು ಮೂಲಗಳು ವರದಿ ಮಾಡಿವೆ.
ಮುಸ್ಲಿಂ ಮುಖಂಡರು, ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಕುರಿತು ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಸಭೆ ನಡೆಸುವಂತೆ ಕೋರಿದ ಮುಸ್ಲಿಂ ನಿಯೋಗ, ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ಹೆಚ್ಚುತ್ತಿರುವ ಭಯದ ಪ್ರಜ್ಞೆಯನ್ನು ಆರೆಸ್ಸೆಸ್ ಮುಖ್ಯಸ್ಥರಿಗೆ ತಿಳಿಸಿದರು. 75 ನಿಮಿಷಗಳ ಸಂವಾದದಲ್ಲಿ, ದೇಶದಲ್ಲಿ ಸಹೋದರತ್ವವನ್ನು ಬೆಳೆಸುವ ಮತ್ತು ಧಾರ್ಮಿಕ ಒಳಗೊಳ್ಳುವಿಕೆಯ ವಿಷಯವನ್ನು ಉತ್ತೇಜಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಮೂಲ ತಿಳಿಸಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…