ಭಾರತದಲ್ಲಿ ನೈಸರ್ಗಿಕ ರಬ್ಬರ್ ವಲಯವು ಬೆಳೆಯುತ್ತಿದೆ. ದೇಶದಲ್ಲಿ ನೈಸರ್ಗಿಕ ರಬ್ಬರ್‌ನ ದೇಶೀಯ ಬಳಕೆಯು 2022-23ರಲ್ಲಿ 1,350,000 ಟನ್‌ಗಳಿಗೆ ತಲಪಿದೆ. 2021-22ರಲ್ಲಿ 1,238,000 ಟನ್‌ಗಳಿತ್ತು. ಹೀಗಾಗಿ ಶೇ.9 ರಷ್ಟು ರಬ್ಬರ್ ಬಳಕೆ ಹೆಚ್ಚಾಗಿದೆ. ಇದೇ ವೇಳೆ 2022-23ರಲ್ಲಿ ದೇಶದಲ್ಲಿ ನೈಸರ್ಗಿಕ ರಬ್ಬರ್ ಉತ್ಪಾದನೆಯು 839,000 ಟನ್‌ಗಳಾಗಿದ್ದು, ಶೇ 8.3 ಬೆಳವಣಿಗೆಯನ್ನು ದಾಖಲಿಸಿದೆ ಎಂದು ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ. ವಸಂತಗೇಸನ್ ಹೇಳಿದ್ದಾರೆ.
ಅವರು ಕೊಟ್ಟಾಯಂನಲ್ಲಿ ರಬ್ಬರ್ ಮಂಡಳಿಯ 185 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇಶದಲ್ಲಿ ನೈಸರ್ಗಿಕ ರಬ್ಬರ್‌ನ ದೇಶೀಯ ಬಳಕೆಯು ಹೆಚ್ಚಾಗಿರುವುದು ಭಾರತದ ರಬ್ಬರ್ ಪ್ಲಾಟೇಂಶನ್ ಬೆಳೆಯಬೇಕಾದ ಸ್ಥಿತಿಯನ್ನು ಹೇಳುತ್ತದೆ. ಎಲ್ಲಾ ಸವಾಲುಗಳ ಹೊರತಾಗಿಯೂ ದೇಶೀಯ ನೈಸರ್ಗಿಕ ರಬ್ಬರ್ ವಲಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆ ಮತ್ತು ಬಳಕೆಯಲ್ಲಿ ಧನಾತ್ಮಕ ಬೆಳವಣಿಗೆಯನ್ನು ಕಂಡಿದೆ ಎಂದು ಅವರು ಹೇಳಿದರು.
ರಬ್ಬರ್ ಮಂಡಳಿಯ ಪ್ರಯತ್ನಗಳು ರಬ್ಬರ್ ಬೆಳೆಗಾರರಿಗೆ ಹಾಗೂ ರಬ್ಬರ್ ಬೆಳೆಗೆ ಅಗತ್ಯ ಮಾಹಿತಿ ಹಾಗೂ ಕ್ರಮಗಳನ್ನು ಕೈಗೊಂಡಿದೆ. ರಬ್ಬರ್ ಬೆಲೆಯಲ್ಲಿನ ಏರಿಳಿತಗಳು, ಹವಾಮಾನ ಬದಲಾವಣೆ, ಮಾರುಕಟ್ಟೆ ಸಮಸ್ಯೆಗಳು, ಕಾರ್ಮಿಕರ ಕೊರತೆ ಇತ್ಯಾದಿ ಸೇರಿದಂತೆ ಹಲವು ಸವಾಲುಗಳು ರಬ್ಬರ್ ವಲಯದಲ್ಲಿ ಮುಂದುವರಿದಿದೆ. ಪ್ಲಾಂಟೇಶನ್ ಕ್ಷೇತ್ರವನ್ನು ಹೆಚ್ಚು ಸುಸ್ಥಿರ ಮತ್ತು ಲಾಭದಾಯಕವಾಗಿಸಲು ತಳಮಟ್ಟದಲ್ಲಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ, ರಬ್ಬರ್ ಉತ್ಪಾದಕರ ಸಂಘಗಳು(RPS) ರಬ್ಬರ್ ಪ್ಲಾಂಟೇಶನ್ ವಲಯದಲ್ಲಿನ ವಿವಿಧ ಸವಾಲುಗಳನ್ನು ಎದುರಿಸಲು ತಮ್ಮ ಆಡಳಿತ ಮತ್ತು ಚಟುವಟಿಕೆಗಳಲ್ಲಿ ಮತ್ತಷ್ಟು ಸುಧಾರಣೆಯ ಅಗತ್ಯವಿದೆ ಎಂದು ರಬ್ಬರ್ ಮಂಡಳಿಯ ಡಾ. ಧನಾನಿಯಾ ಹೇಳಿದರು.
ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಂ.ವಸಂತಗೇಸನ್ ಅವರು ಭಾರತೀಯ ರಬ್ಬರ್ ವಲಯ ಪ್ರಸ್ತುತ ಸ್ಥಿತಿಯನ್ನು ವಿವರಿಸಿದರು. ಈ ವರ್ಷ ರಬ್ಬರ್ ಉತ್ಪಾದನಾ ಸಾಮರ್ಥ್ಯ 1,482 ಕೆಜಿ/ಹೆಕ್ಟೇರ್‌ಗೆ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ 1,472 ಕೆಜಿ/ಹೆಕ್ಟೇರ್ ಆಗಿತ್ತು. ರಬ್ಬರ್ ಬಳಕೆಯಲ್ಲೂ ಹೆಚ್ಚುವರಿಯಾಗಿದೆ.
2022-23ರಲ್ಲಿ ಆಟೋ ಟೈರ್ ವಲಯವು 4.8% ರಷ್ಟು ಪ್ರಗತಿಯನ್ನು ದಾಖಲಿಸಿದೆ. 2022-23 ರ ಅವಧಿಯಲ್ಲಿ ದೇಶದಲ್ಲಿ 70.3% ರಷ್ಟು ಆಟೋ-ಟೈರ್ ಉತ್ಪಾದನಾ ವಲಯವು ರಬ್ಬರ್ ಬೇಡಿಕೆಯನ್ನು ಹೊಂದಿತ್ತು. 2023-24ಕ್ಕೆ ರಬ್ಬರ್ ಉತ್ಪಾದನೆ ಮತ್ತು ಬಳಕೆಯನ್ನು ಕ್ರಮವಾಗಿ 875,000 ಟನ್‌ಗಳು ಮತ್ತು 1400,000 ಟನ್‌ಗಳು ಎಂದು ಅಂದಾಜಿಸಲಾಗಿದೆ. ಅಂದರೆ ರಬ್ಬರ್ ಬೇಡಿಕೆ ಹೆಚ್ಚಾಗಿದೆ ಎನ್ನುವ ಸೂಚನೆ ಲಭಿಸಿದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…