ಭಾರತೀಯ ರಬ್ಬರ್ ಮಂಡಳಿಯು ನೈಸರ್ಗಿಕ ರಬ್ಬರ್‌ಗಾಗಿ ಎಲೆಕ್ಟ್ರಾನಿಕ್ ಮಾರುಕಟ್ಟೆ ವೇದಿಕೆಯಾದ mRube ಪ್ರಾರಂಭಿಸಿದೆ. ಇ ಟ್ರೇಡಿಂಗ್ ಮೂಲಕ ಮಾರುಕಟ್ಟೆಯನ್ನು ತೆರೆಯುವುದು ಹಾಗೂ ರಬ್ಬರ್ ವ್ಯಾಪಾರ ವ್ಯವಸ್ಥೆಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ. ದೇಶೀಯ ರಬ್ಬರ್ ಪೂರೈಕೆಯ ಕಡೆಗೂ ಇಲ್ಲಿ ಗಮನಹರಿಸಲು ಸಾಧ್ಯವಿದೆ.
ಈ ನಡುವೆ ಭಾರತದಲ್ಲಿ ರಬ್ಬರ್ ಧಾರಣೆ ಕುಸಿತದ ಹಾದಿಯಲ್ಲಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 20 ರೂಪಾಯಿ ಕುಸಿತ ಕಂಡಿದೆ. ಸದ್ಯ 130 ರಿಂದ 140 ರೂಪಾಯಿ ಆಸುಪಾಸಿನಲ್ಲಿದೆ. ಹೀಗಾಗಿ ರಬ್ಬರ್ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಬ್ಬರ್ ಧಾರಣೆ ಕನಿಷ್ಟ 150 ರೂಪಾಯಿ ಧಾರಣೆ ಲಭ್ಯವಾಗಬೇಕು, ಆದರೆ ಈಗ ಪ್ರತೀ ಕೆಜಿ ರಬ್ಬರ್ ಉತ್ಪಾದನಾ ವೆಚ್ಚ 250 ರೂಪಾಯಿ ಇದೆ ಎನ್ನುವುದು ಲೆಕ್ಕಾಚಾರ. ಹೀಗಾಗಿ ಸರ್ಕಾರಗಳು ಗಮನಹರಿಸಬೇಕು ಎನ್ನುವುದು ಬೆಳೆಗಾರರ ಒತ್ತಾಯ.
ದೇಶದಲ್ಲಿ ರಬ್ಬರ್ ಬೆಳೆ ವಿಸ್ತರಣೆಗೆ ಸರ್ಕಾರಗಳು ವಿವಿಧ ಪ್ರಯತ್ನ ಮಾಡಿದೆ. ರಬ್ಬರ್ ಮಂಡಳಿ ಕೂಡಾ ರಬ್ಬರ್ ಧಾರಣೆ ಏರಿಕೆ, ಬೆಳೆ ವಿಸ್ತರಣೆ ಕಡೆಗೆ ಗಮನಹರಿಸಿದೆ. ಆಟೋಮೋಟಿವ್ ಟೈರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ATMA) ಪ್ರತಿನಿಧಿಸುವ ಪ್ರಮುಖ ಟೈರ್ ಕಂಪನಿಗಳಿಂದ 1,000 ಕೋಟಿ ರೂಪಾಯಿಗಳ ಕೊಡುಗೆಯೊಂದಿಗೆ 5 ವರ್ಷಗಳಲ್ಲಿ ಈಶಾನ್ಯ ರಾಜ್ಯದಲ್ಲಿ 2,00,000 ಹೆಕ್ಟೇರ್‌ನಲ್ಲಿ ಹೊಸ ರಬ್ಬರ್ ತೋಟಗಳ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. NEMITRA ಯೋಜನೆಯಡಿಯಲ್ಲಿ, 2021 ರಲ್ಲಿ 3861 ಹೆಕ್ಟೇರ್‌ನಲ್ಲಿ ರಬ್ಬರ್ ಪ್ಲಾಂಟೇಶನ್ ಪೂರ್ಣಗೊಂಡಿದೆ. 2022 ರಲ್ಲಿ, ಈವರೆಗೆ 22,868 ಹೆಕ್ಟೇರ್‌ನಲ್ಲಿ ನಾಟಿ ಪೂರ್ಣಗೊಂಡಿದೆ.
ಮಧ್ಯಮ ಸ್ತರದ ಗಾಳಿಯು ಬಂಗಾಳಕೊಲ್ಲಿಯ ಕಡೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ…
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…