2024-25 ರ ಹೊತ್ತಿಗೆ ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದ 94 ಜಿಲ್ಲೆಗಳಲ್ಲಿ 1.25 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಹೊಸ ರಬ್ಬರ್ ತೋಟಗಳನ್ನು ಸ್ಥಾಪಿಸಲಾಗಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಭಾರತದ ಅತ್ಯಂತ ಮಹತ್ವದ ರಬ್ಬರ್ ತೋಟದ ವಿಸ್ತರಣೆಗಳಲ್ಲಿ ಇದು ಒಂದಾಗಿದೆ. …..ಮುಂದೆ ಓದಿ….
ರಬ್ಬರ್ ಬೋರ್ಡ್ ಆಫ್ ಇಂಡಿಯಾದ ನೇತೃತ್ವದಲ್ಲಿ ಮತ್ತು ಆಟೋಮೋಟಿವ್ ಟೈರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಹಾಗೂ ಪ್ರಮುಖ ಟೈರ್ ತಯಾರಕರುಗಳಾದ ಅಪೊಲೊ, ಸಿಯೇಟ್ ಮೊದಲಾದ ಕಂಪನಿಗಳ ಬೆಂಬಲದೊಂದಿಗೆ, ರಬ್ಬರ್ ಬೆಳೆ ವಿಸ್ತರಣೆ ಮಾಡಲಾಗಿದೆ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ತೋಟಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಟೈರ್ ಉದ್ಯಮವು ನೇರವಾಗಿ ತೋಟದ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವ ಜಾಗತಿಕವಾಗಿ ಮೊದಲ ಪ್ರಯತ್ನ ಇದಾಗಿದೆ.
ಇದುವರೆಗಿನ ಸವಾಲುಗಳ ನಡುವೆ ನಾಲ್ಕು ವರ್ಷಗಳ ಪ್ಲಾಂಟೇಶನ್ ಗುರಿಯಲ್ಲಿ ಸುಮಾರು 90% ರಷ್ಟು ತಲುಪಲಾಗಿದೆ. ರಬ್ಬರ್ ಪ್ರದೇಶಗಳನ್ನು ವಿಸ್ತರಿಸುವುದರ ಜೊತೆಗೆ, ಯೋಜನೆಯು ಸ್ಥಳೀಯ ನರ್ಸರಿಗಳನ್ನು ಬಲಪಡಿಸಿದೆ . ಟೈರ್ ಕಂಪನಿಗಳು ಮತ್ತು ರಬ್ಬರ್ ಬೋರ್ಡ್ ಆಫ್ ಇಂಡಿಯಾ ಸಯಯೋಗದ ಪ್ರಯತ್ನ ಇದಾಗಿದೆ ಎಂದು ಯೋಜನೆಯ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಯೋಜನೆ ನಿರ್ದೇಶಕ ರಾಜೀವ್ ಬುದಿರಾಜ ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ, ಈ ಯೋಜನೆಯು 5.3 ಕೋಟಿ ನಾಟಿ ಸಾಮಗ್ರಿಗಳನ್ನು ವಿತರಿಸಿದೆ. ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಯೋಜನೆ ಪೂರ್ಣಗೊಳ್ಳುವ ವೇಳೆ 2.5 ಲಕ್ಷ ಫಲಾನುಭವಿಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ಉನ್ನತೀಕರಿಸುವ ನಿರೀಕ್ಷೆಯಿದೆ. ರಬ್ಬರ್ ತೋಟಗಳು ಬೆಳೆದಂತೆ, ಮಾದರಿ ಸ್ಮೋಕ್‌ಹೌಸ್‌ಗಳು ಮತ್ತು ರಬ್ಬರ್ ಬೆಳೆಗಾರರಲ್ಲಿ ಸುಧಾರಿತ ಕ್ರಮಗಳನ್ನು ಪ್ರಸಾರ ಮಾಡುವುದು ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗುವುದು ಎಂದು ರಾಜೀವ್ ಬುದಿರಾಜ ಹೇಳಿದರು.
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…
ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ, …
ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…