Advertisement
MIRROR FOCUS

ರಬ್ಬರ್‌ ದರ 13 ವರ್ಷಗಳಲ್ಲಿ ದಾಖಲೆ ಮಟ್ಟಕ್ಕೆ..! ಆದರೆ ಯಾಕೆ ಬೆಳೆಗಾರರು ಇನ್ನೂ ಚಿಂತೆಯಲ್ಲಿ..?

Share

ದೇಶದ ರಬ್ಬರ್‌ ಮಾರುಕಟ್ಟೆಯಲ್ಲಿ ಉತ್ತಮ ಚಟುವಟಿಕೆ ಕಂಡುಬಂದಿದ್ದು, ನೈಸರ್ಗಿಕ ರಬ್ಬರ್‌ ದರವು ದಾಖಲೆಯ ಮಟ್ಟ ತಲುಪಿದೆ. ಕಳೆದ ಒಂದು ತಿಂಗಳಲ್ಲಿ 20% ಕ್ಕೂ ಹೆಚ್ಚು ಏರಿಕೆಯಾಗಿ ಪ್ರತಿ ಕೆ.ಜಿ.ಗೆ ₹250 ರ ಗಡಿ ದಾಟಿರುವುದು ಬೆಳೆಗಾರರು ಹಾಗೂ ಕೈಗಾರಿಕಾ ವಲಯದ ಗಮನ ಸೆಳೆದಿದೆ. ಸದ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಮಟ್ಟಕ್ಕೆ ರಬ್ಬರ್‌ ಧಾರಣೆ ಏರಿಕೆಯಾಗಿದೆ.

ದೇಶದ ಹಲವು ಭಾಗಗಳಲ್ಲಿ ನೈಸರ್ಗಿಕ ರಬ್ಬರ್‌ ದರವು ದಾಖಲೆಯ ಮಟ್ಟ ತಲುಪಿದ್ದು, ಕಳೆದ ಒಂದು ತಿಂಗಳಲ್ಲಿ 20% ಕ್ಕೂ ಹೆಚ್ಚು ಏರಿಕೆಯಾಗಿದೆ. ರಬ್ಬರ್‌ ಬೆಲೆ ಪ್ರತಿ ಕೆ.ಜಿ.ಗೆ ₹250 ರ ಗಡಿ ದಾಟಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಸರಬರಾಜಿನ ಅಸ್ಥಿರತೆ ಹಾಗೂ ಸಿಂಥೆಟಿಕ್‌ ರಬ್ಬರ್‌ ಕೊರತೆಯಿಂದ ನೈಸರ್ಗಿಕ ರಬ್ಬರ್‌ಗೆ ಬೇಡಿಕೆ ಹೆಚ್ಚಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.

ರಬ್ಬರ್‌ ಮಾರುಕಟ್ಟೆಯು ರಬ್ಬರ್‌ ಬೋರ್ಡ್‌ ಧಾರಣೆಯ ಪ್ರಕಾರ 2005 ರಲ್ಲಿ ₹55-60 ಇದ್ದರೆ 2010 ರಲ್ಲಿ₹160-180 ಏರಿಕೆಯಾಗಿತ್ತು, 2012 ರಲ್ಲಿ ₹190-210 ಏರಿಕೆ ಕಂಡಿತ್ತು. 2015 ರಲ್ಲಿ ₹120-130 ಕ್ಕೆ ಕುಸಿತ ಕಂಡಿತ್ತು. 2020 ರಲ್ಲಿ ₹115-135 ರಲ್ಲಿ ಸ್ಥಿರವಾಗಿತ್ತು. ಇದಾದ ಬಳಿಕ ಕೋವಿಡ್‌ ಕಾರಣದಿಂದ ರಬ್ಬರ್‌ ಧಾರಣೆ ಮತ್ತೆ ಏರಿಕೆ ಕಂಡಿತ್ತು. 2021 ರಲ್ಲಿ ₹170-180 ಏರಿಕೆಯಾಗಿ ಸ್ಥಿರ ಧಾರಣೆ ಇತ್ತು. 2023 ರಲ್ಲಿ ₹155-170 ಹಾಗೂ ಈ ವರ್ಷ ಅಂದರೆ 2025-26 ರಲ್ಲಿ ₹200-260 ಧಾರಣೆಗೆ ತಲಪಿದೆ. ಹೀಗಾಗಿ ಕಳೆದ 10-15 ವರ್ಷಗಳಲ್ಲಿ ಗರಿಷ್ಟ ಧಾರಣೆಯಾಗಿದೆ. ಅಂದರೆ 2011-12ರಲ್ಲಿ ರಬ್ಬರ್‌ ಧಾರಣೆ ಐತಿಹಾಸಿಕ ಗರಿಷ್ಠ ತಲುಪಿದ್ದವು. 2014 ರಿಂದ 2020 ರವರೆಗೆ ಇಳಿಕೆ ಹಾಗೂ ಸಣ್ಣ ಪ್ರಮಾಣದ ಏರಿಕೆ ಇತ್ತು. 2024-26 ರಲ್ಲಿ  ಏರಿಕೆ ಕಂಡುಬರುತ್ತಿದೆ.

ಇದೀಗ  ರಬ್ಬರ್‌ ಮಾರುಕಟ್ಟೆ ಉತ್ತಮವಾಗಿದೆ. ಕಳೆದ 13 ವರ್ಷಗಳಲ್ಲಿ ರಬ್ಬರ್‌ ಬೆಲೆ ಕುಸಿತವಾಗಿತ್ತು. ನಷ್ಟದಲ್ಲೇ ಟ್ಯಾಪಿಂಗ್‌ ಮಾಡುತ್ತಿದ್ದರೆ, ಈಗ ಧಾರಣೆ ಏರಿಕೆ ಕಂಡಿದೆ. ಆದರೆ ರಬ್ಬರ್‌ ನಮ್ಮದು ಮಾರಾಟವೂ ಅದಾಗಲೇ ಆಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಬಿಸಿಲಿನ ಕಾರಣದಿಂದ ಟ್ಯಾಪಿಂಗ್‌ಗೂ ರಜೆ ಇತ್ತು. ಈಗ ಧಾರಣೆ ಏರಿದೆ, ರಬ್ಬರ್‌ ಇಲ್ಲ. ಈ ಮಾರುಕಟ್ಟೆ ಯಾವಾಗ ತಿರುಗುತ್ತದೆ ಎನ್ನುವ ಆತಂಕ ಇದೆ
ಎಂದು ರಬ್ಬರ್‌ ಬೆಳೆಗಾರ ಗೋವಿಂದ ಪ್ರಕಾಶ್‌ ಹೇಳುತ್ತಾರೆ.

ಆದರೆ, ಬೆಲೆ ಏರಿಕೆಯಿಂದ ರೈತರು ಸಂಪೂರ್ಣ ಸಂತೋಷದಲ್ಲಿಲ್ಲ. ಮುಂದಿನ ದಿನಗಳಲ್ಲಿ ದರದಲ್ಲಿ ಅಸ್ಥಿರತೆ ಉಂಟಾಗುವ ಭೀತಿ ಬೆಳೆಗಾರರಲ್ಲಿ ಇದೆ. ವಿಶೇಷವಾಗಿ ದಕ್ಷಿಣ ಪೂರ್ವ ಏಷ್ಯಾದ ದೇಶಗಳಲ್ಲಿ ಉತ್ಪಾದನೆ ಹೆಚ್ಚಾದರೆ ದರ ಕುಸಿತವಾಗುವ ಸಾಧ್ಯತೆಯನ್ನೂ ತಜ್ಞರು ಸೂಚಿಸಿದ್ದಾರೆ. ಇದರ ಜೊತೆಗೆ ಹವಾಮಾನ ಬದಲಾವಣೆ, ಕಾರ್ಮಿಕ ವೇತನ ಇದೆಲ್ಲವೂ ರಬ್ಬರ್‌ ಧಾರಣೆ ಮೇಲೆ ಪರಿಣಾಮ ಬೀರುತ್ತದೆ. ಇದುವರೆಗೂ ಆದ ನಷ್ಟವು ಭರ್ತಿಯಾಗಬಹುದೇ ಎಂಬುದೂ ರಬ್ಬರ್‌ ಬೆಳೆಗಾರರ ನಿರೀಕ್ಷೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತದಲ್ಲಿ ಟೈರ್‌ ಹಾಗೂ ವಾಹನೋದ್ಯಮಕ್ಕೆ ರಬ್ಬರ್‌ ಪ್ರಮುಖ ಕಚ್ಚಾ ವಸ್ತುವಾಗಿರುವುದರಿಂದ, ರಬ್ಬರ್‌ ದರ ಏರಿಕೆ ವಾಹನ ಹಾಗೂ ಇತರೆ ರಬ್ಬರ್‌ ಉತ್ಪನ್ನಗಳ ಬೆಲೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಸ್ಥಿತಿಯನ್ನು  ಗಮನಿಸುತ್ತಿವೆ ಎಂದು ವರದಿಗಳು ತಿಳಿಸಿವೆ.

Natural rubber prices in India have touched record highs, rising over 20% in the last month due to global crude oil supply disruptions and increased demand for natural rubber. While growers are benefiting from higher prices, concerns remain over future market volatility and possible price corrections.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

14 hours ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

22 hours ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

1 day ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

2 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

2 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

2 days ago