ಗ್ರಾಮೀಣ ಭಾಗದ ಪ್ರತಿಭೆಗಳು ಅವಕಾಶಗಳಿಂದ ವಂಚಿತರಾಗುವುದು ಹೆಚ್ಚು. ಅಂತಹದ್ದರಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಿ ಮಾದರಿಯಾಗಿದೆ ಪಂಜದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ ಹಾಗೂ ಕೇರಂ ಪಂದ್ಯಾಟವನ್ನು ಏರ್ಪಡಿಸುವ ಮೂಲಕ “ಸಹಕಾರ” ತತ್ತ್ವದ ಜೊತೆಗೆ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡಿದೆ.…..ಮುಂದೆ ಓದಿ….
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸಿಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಿರಿಯ ಬಾಲಕ ಮತ್ತು ಬಾಲಕಿಯರ ಹಾಗೂ ಮುಕ್ತ ರಾಪಿಡ್ ಚೆಸ್ ಪಂದ್ಯಾಟ ಮತ್ತು ಮುಕ್ತ ಡಬಲ್ಸ್ ಕೇರಂ ಪಂದ್ಯಾಟ ಆಯೋಜನೆ ಮಾಡಿದೆ. ಈ ಸಹಕಾರಿ ಸಂಘದ ಸಿಬಂದಿ ವರ್ಗದವರ ಸಹಕಾರ ಹಾಗೂ ಜಂಟಿ ಆಶ್ರಯವೂ ಇದೆ. ಕಳೆದ 6 ವರ್ಷಗಳಿಂದ ಕ್ರೀಡಾಕೂಟವನ್ನು ಏರ್ಪಾಡು ಮಾಡುತ್ತಿದ್ದ ಈ ಸಹಕಾರ ಸಂಘ ಹಾಗೂ ಇದರ ಸಿಬಂದಿಗಳು ಇದುವರೆಗೂ ಶಟಲ್ ಪಂದ್ಯಾಟ ನಡೆಸುತ್ತಿದ್ದರು. ಈ ಬಾರಿ ಮೊದಲ ಬಾರಿಗೆ ಚೆಸ್ ಹಾಗೂ ಕೇರಂ ಪಂದ್ಯಾಟ ಆಯೋಜನೆ ಮಾಡಿದೆ. ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘವೊಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿರುವುದು ಸಣ್ಣ ಕೆಲಸವೇನೆಲ್ಲ. ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭೆಗಳು ಇದ್ದಾರೆ. ಆದರೆ ಅವಕಾಶಗಳು ಲಭಿಸಿದರೆ ಮುಂದೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೂ ಸಾಧನೆ ತೋರಲು ಸಾಧ್ಯವಿದೆ. ಈ ನೆಲೆಯಲ್ಲಿ ಸಹಕಾರಿ ಸಂಘವೊಂದು ಕಳೆದ 6 ವರ್ಷಗಳಿಂದಲೂ ಹಮ್ಮಿಕೊಂಡು ಬರುತ್ತಿರುವ ಕಾರ್ಯವನ್ನು ಮೆಚ್ಚಬೇಕಿದೆ. ಸಹಕಾರಿ ಸಂಘ, ಸಂಘದ ಸದಸ್ಯರು, ಸಿಬಂದಿಗಳು ಹಾಗೂ ಕ್ರೀಡಾಭಿಮಾನಿಗಳಿಂದ ಸಂಗ್ರಹ ಮಾಡುತ್ತಾರೆ.…..ಮುಂದೆ ಓದಿ….
ಹಲವು ಕಡೆ ಆಡಳಿತ ಮಂಡಳಿ ಹಾಗೂ ಸಂಸ್ಥೆಗಳ ಸಿಬಂದಿಗಳ ನಡುವೆ ಅಂತರ ಇರುವುದು ಕಾಣುತ್ತದೆ.ಆದರೆ ಪಂಜದ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಹಾಗೂ ಸಿಬಂದಿಗಳು ಜೊತೆಯಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತಿವೆ. ಅಂದರೆ ಕ್ರೀಡಾ ಕೂಟದ ಆಯೋಜನೆಯ ವೆಚ್ಚಗಳಲ್ಲಿ ಕೂಡಾ ಸಿಬಂದಿಗಳು ಕೂಡಾ ಭಾಗಿಯಾಗುವುದು ವಿಶೇಷ. ಸಿಬಂದಿಗಳಿಗೆ ಯಾವ ಲಾಭವೂ ಇಲ್ಲಿ ಇಲ್ಲದಿದ್ದರೂ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ನೀಡಲು ತಾವು ದುಡಿಯುವ ಸಹಕಾರಿ ಸಂಘದ ಹೆಸರಿನಲ್ಲಿ ಮಾಡುವ ಸೇವೆ ಇನ್ನೊಂದು ಮಾದರಿ ಕಾರ್ಯ.
ಒಂದು ಕಾಲದಲ್ಲಿ ಈ ಸಂಘವು ತೀರಾ ಸಂಕಷ್ಟದ ಸ್ಥಿತಿಯಲ್ಲಿತ್ತು. ಆ ಬಳಿಕ ಜನರನ್ನು ಒಂದಾಗಿಸಿಕೊಂಡು, ಪರಸ್ಪರ ಸಹಕಾರ ಚಿಂತನೆಯಲ್ಲಿ ಮುಂದುವರಿದು, ಎಲ್ಲಾ ರೀತಿಯ ಸೇವೆಯೂ ಸಂಸ್ಥೆಯಲ್ಲಿ ದೊರೆಯುವಂತೆ ಮಾಡಲಾಗಿತ್ತು. ಇದೀಗ ಉತ್ತಮ ಸಹಕಾರಿ ಸಂಘವಾಗಿ ಮುನ್ನಡೆಯುತ್ತಿದೆ.
ಚೆಸ್‌ನಂತಹ ಕ್ರೀಡೆಯಲ್ಲಿ ಗ್ರಾಮೀಣ ಭಾಗದಲ್ಲಿ ಅನೇಕ ಆಟಗಾರರು ಇದ್ದಾರೆ. ಅಂತಹವರಿಗೆ ಅವಕಾಶ ನೀಡಲು ಸಹಕಾರಿ ಸಂಘಗಳು ಹಾಗೂ ಇತರ ಸಂಘಗಗಳು ವೇದಿಕೆ ಸೃಷ್ಟಿ ಮಾಡುವುದು ಉತ್ತಮವಾದ ಕಾರ್ಯವಾಗಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ ರಮೇಶ್ ಕೋಟೆ.
Chess and carrom competitions are organized in rural areas as a model activity under the joint auspices of the Panja Primary Agricultural Cooperative Society and the Staff . This initiative provides an opportunity for showcasing rural talent.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…