ಸುಳ್ಯನ್ಯೂಸ್.ಕಾಂ ಬದಲಾಗಿ ರೂರಲ್ ಮಿರರ್.ಕಾಂ ಬರುತ್ತಿದೆ.
ಬದಲಾವಣೆ ಎನ್ನುವುದು ಈ ಜಗದ ನಿಯಮ. ನಮ್ಮ ಈ ಬದಲಾವಣೆಯ ಉದ್ದೇಶ ನಿಮಗೆ ಇನ್ನಷ್ಟು ಹತ್ತಿರವಾಗುವುದಕ್ಕೆ ಹಾಗೂ ಗುರಿಯ ಕಡೆಗೆ ಸಾಗುವುದಕ್ಕೆ ಹೆಚ್ಚು ಅನುಕೂಲವಾಗುವುದಕ್ಕೆ. ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹವನ್ನು , ಸಹಕಾರವನ್ನು ಬಯಸುತ್ತಾ.
ಸುಳ್ಯನ್ಯೂಸ್.ಕಾಂ ಸುಳ್ಯವನ್ನು ಕೇಂದ್ರೀಕರಿಸಿ ಜಗದಗದಲಕ್ಕೂ ಕಣ್ಣು ಹಾಯಿಸಿತು. ಆದರೆ ಸುಳ್ಯ ಎನ್ನುವ ಹೆಸರಿನ ಮೂಲಕ ಜಗದಲಕ್ಕೂ ಪ್ರಸಾರವಾದರೂ ನಮ್ಮ ಉದ್ದೇಶ ನಗರ ಹಾಗೂ ಗ್ರಾಮೀಣ ಭಾಗವನ್ನು ಸಂಪರ್ಕಿಸುವ ರಚನಾತ್ಮಕ ಮಾಧ್ಯಮವಾಗಿತ್ತು. ಅದೇ ಉದ್ದೇಶದೊಂದಿಗೆ ಈಗ ಗ್ರಾಮೀಣ ಪ್ರತಿಬಿಂಬವನ್ನು ನಿಮ್ಮೆದುರು ಇಡುತ್ತಿದ್ದೇವೆ.
ಮೂಲಕ ಗ್ರಾಮೀಣ ಹಾಗೂ ನಗರದ ರಚನಾತ್ಮಕ ಸಂಪರ್ಕವಾಗಬೇಕು. ಅದು ವೈಭವೀಕರಿಸದ ಸುದ್ದಿಗಳಿಂದ, ವಿಶೇಷ ವರದಿಗಳಿಂದ, ವೆದರ್ ರಿಪೋರ್ಟ್ ಗಳ ಮೂಲಕ , ವಿಡಿಯೋ ವರದಿಗಳ ಮೂಲಕ, ಅಂಕಣಗಳು ಮೂಲಕ ಹಾಗೂ ಇತರ ಧನಾತ್ಮಕ ವರದಿಗಳಿಂದ. ಉಳಿದಂತೆ ಸುಳ್ಯನ್ಯೂಸ್.ಕಾಂ ಮೂಲಕ ನಿಮ್ಮನ್ನು ತಲುಪುತ್ತಿದ್ದ ಎಲ್ಲಾ ವಿಷಯಗಳೂ ಇಲ್ಲೂ ತಲುಪಲಿದೆ. ಎಂದಿನಂತೆ ನಿಮ್ಮ ಸಹಕಾರವನ್ನು ಬಯಸುತ್ತೇವೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel