ನಿದ್ದೆಯಿಲ್ಲದ ರಾತ್ರಿಗಳನು ಬೇಸರಿಸದೇ ನೀ ಕಳೆದೆ ನಿನ್ನ ಆರೋಗ್ಯವ ಗಮನಿಸದೆ ನನ್ನ ನೀ ಜೋಪಾನ ಮಾಡಿದೆ. ನಿನ್ನ ಋಣವ ನಾ ಹೇಗೆ ತೀರಿಸಲಿ? ನೀ ನನ್ನ ಸಾಕಿ ಸಲಹಿದೆ ನನಗೆ ನೀ ವಿದ್ಯೆ ನೀಡಿ ಬೆಳೆಸಿದೆ ನೀ ನನ್ನ ಬೆನ್ನೆಲುಬಾಗಿ ಇದ್ದೆ ನನ್ನ ಒಳಿತಿಗಾಗಿ ನೀ ಪ್ರಾರ್ಥಿಸಿದೆ ನಿನ್ನ ಋಣವ ನಾ ಹೇಗೆ ತೀರಿಸಲಿ ?
ನನಗಾಗಿ ನಿನ್ನ ಸುಖವ ತ್ಯಾಗ ಮಾಡಿದೆ ನಿನ್ನ ಕನಸುಗಳ ಮುಚ್ಚಿಟ್ಟು ನೀ- ನನ್ನ ಕನಸುಗಳ ನನಸಾಗಿಸಿದೆ ನಿನ್ನ ಬದುಕನ್ನು ನನಗಾಗಿ ಸವೆಸಿದೆ. ನಿನ್ನ ಋಣವ ನಾ ಹೇಗೆ ತೀರಿಸಲಿ?
ನಿನ್ನ ಮುಪ್ಪಿನಲಿ ನೀ ಮಗುವಿನಂತಾದಾಗ ನಿನಗೆ ನಾನು ತಾಯಿಯಾಗುವೆ ಎಳವೆಯಲ್ಲಿ ನಾನು ಮಾಡಿದ ಹಾಗೆ ಮುಪ್ಪಿನಲಿ ನೀನು ಮಾಡಿದರೆ ತಾಯಿಯಂತೆ ನಿನ್ನಾಟ ಆನಂದಿಸುವೆ. ನೀ ನನಗೆ ತೋರಿದ ಮಮತೆಯದೆಷ್ಟು ನೀ ನನಗೆ ಮಾಡಿದ ಸೇವೆಯದೆಷ್ಟು ಬಾಯ್ತುಂಬ “ಅಮ್ಮಾ” ಎಂದರೆ ಸಂದೀತೇ ನಿನ್ನ ಋಣ ಸ್ವಲ್ಪವಾದರೂ!!!! ನಿನ್ನ ಋಣವ ನಾ ಹೇಗೆ ತೀರಿಸಲಿ?
ಒಂದು ಜನ್ಮದಲಿ ತೀರಿಸಲು ಸಾಧ್ಯವೇ ತಾಯಿಯ ತ್ಯಾಗದ ಋಣವದನು? ನನ್ನ ಗರ್ಭದಲಿ ಮುಂದೆ ನೀ ಹುಟ್ಟಿ ಬಾ ನಿನಗೆ ಜನ್ಮ ನೀಡಿ ನಾ ತಾಯಿಯಾಗುವೆ ಹೀಗೆ ತೀರಿಸುವೆ ನಾ ನಿನ್ನ ಋಣವದನು.