ನಿನ್ನ ಋಣವ ನಾ ಹೇಗೆ ತೀರಿಸಲಿ?

(ಚಿತ್ರ- ಇಂಟರ್ನೆಟ್ )
Advertisement
Advertisement

ನವ ಮಾಸ ಗರ್ಭದಲಿ ಹೊತ್ತು ಸಹಿಸಲಾರದ ನೋವನುಂಡು ಸಾವಿನ ಜೊತೆ ಹೋರಾಟ ಮಾಡಿ ಜನ್ಮ ನೀಡಿ ನನಗೆ ನೀ ತಾಯಿಯಾದೆ ನಿನ್ನ ಋಣವ ನಾ ಹೇಗೆ ತೀರಿಸಲಿ?

Advertisement

ನಿದ್ದೆಯಿಲ್ಲದ ರಾತ್ರಿಗಳನು ಬೇಸರಿಸದೇ ನೀ ಕಳೆದೆ ನಿನ್ನ ಆರೋಗ್ಯವ ಗಮನಿಸದೆ ನನ್ನ  ನೀ ಜೋಪಾನ ಮಾಡಿದೆ. ನಿನ್ನ ಋಣವ ನಾ ಹೇಗೆ ತೀರಿಸಲಿ? ನೀ ನನ್ನ ಸಾಕಿ ಸಲಹಿದೆ ನನಗೆ ನೀ ವಿದ್ಯೆ ನೀಡಿ ಬೆಳೆಸಿದೆ ನೀ  ನನ್ನ  ಬೆನ್ನೆಲುಬಾಗಿ ಇದ್ದೆ ನನ್ನ ಒಳಿತಿಗಾಗಿ ನೀ ಪ್ರಾರ್ಥಿಸಿದೆ ನಿನ್ನ ಋಣವ ನಾ ಹೇಗೆ ತೀರಿಸಲಿ ?

Advertisement
Advertisement

ನನಗಾಗಿ ನಿನ್ನ ಸುಖವ ತ್ಯಾಗ ಮಾಡಿದೆ ನಿನ್ನ ಕನಸುಗಳ ಮುಚ್ಚಿಟ್ಟು ನೀ- ನನ್ನ ಕನಸುಗಳ ನನಸಾಗಿಸಿದೆ ನಿನ್ನ ಬದುಕನ್ನು ನನಗಾಗಿ ಸವೆಸಿದೆ. ನಿನ್ನ ಋಣವ ನಾ ಹೇಗೆ ತೀರಿಸಲಿ?

ನಿನ್ನ ಮುಪ್ಪಿನಲಿ ನೀ ಮಗುವಿನಂತಾದಾಗ ನಿನಗೆ ನಾನು ತಾಯಿಯಾಗುವೆ ಎಳವೆಯಲ್ಲಿ ನಾನು ಮಾಡಿದ ಹಾಗೆ  ಮುಪ್ಪಿನಲಿ    ನೀನು ಮಾಡಿದರೆ ತಾಯಿಯಂತೆ  ನಿನ್ನಾಟ ಆನಂದಿಸುವೆ. ನೀ ನನಗೆ ತೋರಿದ ಮಮತೆಯದೆಷ್ಟು ನೀ ನನಗೆ ಮಾಡಿದ ಸೇವೆಯದೆಷ್ಟು ಬಾಯ್ತುಂಬ “ಅಮ್ಮಾ” ಎಂದರೆ ಸಂದೀತೇ ನಿನ್ನ ಋಣ ಸ್ವಲ್ಪವಾದರೂ!!!! ನಿನ್ನ ಋಣವ ನಾ ಹೇಗೆ ತೀರಿಸಲಿ?

Advertisement
Advertisement

ಒಂದು ಜನ್ಮದಲಿ ತೀರಿಸಲು ಸಾಧ್ಯವೇ ತಾಯಿಯ ತ್ಯಾಗದ ಋಣವದನು? ನನ್ನ ಗರ್ಭದಲಿ ಮುಂದೆ ನೀ ಹುಟ್ಟಿ ಬಾ ನಿನಗೆ ಜನ್ಮ ನೀಡಿ ನಾ ತಾಯಿಯಾಗುವೆ ಹೀಗೆ ತೀರಿಸುವೆ ನಾ ನಿನ್ನ ಋಣವದನು.

 

ಬರಹ :
ರೇಣುಕಾ ಸುಧೀರ್,                   ಅರಸಿನಮಕ್ಕಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಿನ್ನ ಋಣವ ನಾ ಹೇಗೆ ತೀರಿಸಲಿ?"

Leave a comment

Your email address will not be published.


*