ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯ ಕಾರಣದಿಂದ ಘಾಟಿ ಪ್ರದೇಶಗಳಲ್ಲಿ ಭೂಕುಸಿತಗಳು ಹೆಚ್ಚಾಗಿದೆ. ಈಗಾಗಲೇ ಶಿರಾಡಿ ಘಾಟಿ , ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಉಂಟಾಗಿ ಮಂಗಳೂರು-ಬೆಂಗಳೂರು ವಾಹನ ಸಂಚಾರಕ್ಕೆ ತೊಡಕಾಗಿದೆ. ಇದೀಗ ಸಂಪಾಜೆ-ಮಡಿಕೇರಿ ಹೆದ್ದಾರಿಯ ಕಾಟಕೇರಿ, ಎರಡನೇ ಮೊಣ್ಣಂಗೇರಿ, ಕರ್ತೋಜಿ ಎಂಬಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಹೀಗಾಗಿ ಭಾರೀ ವಾಹನಗಳ ಓಡಾಟ ಸರಾಗವಾಗಿ ನಡೆದರೆ ಇಲ್ಲೂ ರಸ್ತೆ ಕುಸಿತವಾಗುವ ಸಾಧ್ಯತೆ ಇದೆ.
ಶಿರಾಡಿ ಘಾಟ್ ಪ್ರದೇಶದ ದೋಣಿಗಲ್ ಬಳಿ ರಸ್ತೆ ಕುಸಿದು ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಇದೀಗ ತಾತ್ಕಾಲಿಕ ದುರಸ್ತಿ ಕಾರ್ಯ ನಡೆದು ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರವೇ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕಾರು, ಜೀಪ್, ದ್ವಿಚಕ್ರ ವಾಹನಗಳು, ಮಿನಿ ಟೆಂಪೋ, ಸಾರಿಗೆ ಬಸ್ ಗಳಿಗೆ ಮಾತ್ರವೇ ಸದ್ಯ ಅವಕಾಶ ನೀಡಲಾಗಿದೆ.
ಭಾರೀ ಮಳೆಯ ಕಾರಣದಿಂದ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ರಸ್ತೆ ಕುಸಿತಗೊಂಡು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಇಲ್ಲಿ ಕೂಡಾ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರವೇ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಲಘು ವಾಹನ ಮಾತ್ರವೇ ಸದ್ಯ ಓಡಾಟ ನಡೆಸಲು ಸಾಧ್ಯವಿದೆ.
ಸದ್ಯ ಎರಡೂ ಘಾಟಿ ಪ್ರದೇಶದಲ್ಲಿ ಘನ ವಾಹನ ಓಡಾಟಕ್ಕೆ ನಿರ್ಬಂಧವಿದೆ. ಟ್ಯಾಂಕರ್, ರಾಜಹಂಸ, ಐರಾವತ ಕಂಟೇನರ್ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಸಂಪಾಜೆ- ಮಡಿಕೇರಿ ರಸ್ತೆಯ ದೃಶ್ಯ
ಈ ನಡುವೆ ಕೊಡಗು ಪ್ರದೇಶದಲ್ಲಿ ಭಾರೀ ಮಳೆಯ ಕಾರಣದಿಂದ ಸಂಪಾಜೆ-ಮಡಿಕೇರಿ ರಸ್ತೆಯ ಕಾಟಕೇರಿ ಬಳಿ ಹಾಗೂ ಮದೆನಾಡು ಬಳಿಯ ಕರ್ತೋಜಿಯಲ್ಲಿ ಮತ್ತು ಎರಡನೇ ಮೊಣ್ಣಂಗೇರಿಯಲ್ಲಿ ಮುಖ್ಯ ರಸ್ತೆ ಬಿರುಕು ಬಿಟ್ಟಿದೆ. ಶುಕ್ರವಾರ ಶಾಸಕ ಕೆ ಜಿ ಬೋಪಯ್ಯ ಅವರು ಸ್ಥಳ ಪರಿಶೀಲನೆ ನಡೆಸಿದರು. ಸದ್ಯ ಶಿರಾಡಿ ಹಾಗೂ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಘನ ವಾಹನ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಎಲ್ಲಾ ಘನ ವಾಹನಗಳು ಸಂಪಾಜೆ ಮೂಲಕವೇ ಬೆಂಗಳೂರು-ಮಂಗಳೂರು ಕಡೆಗೆ ಓಡಾಟ ನಡೆಸುವುದರಿಂದ ರಸ್ತೆಯಲ್ಲಿ ಇನ್ನಷ್ಟು ಬಿರುಕು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸಂಪಾಜೆ-ಮಡಿಕೇರಿ ರಸ್ತೆ ಮೂಲಕ ಭಾರೀ ವಾಹನ ಸಂಚಾರವನ್ನು ಸದ್ಯ ನಿಷೇಧಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಶಾಸಕ ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…
ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…