ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕ ಸಂಜೀವ ಮಟಂದೂರು |

September 15, 2021
2:59 PM

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಪುತ್ತೂರು ಶಾಸಕ ಸಂಜೀವ ಮಟಂದೂರು ಅವರು ಸರಕಾರವನ್ನು  ಒತ್ತಾಯಿಸಿದ್ದಾರೆ.

Advertisement
Advertisement

Advertisement
ಸಂಜೀವ ಮಟಂದೂರು, ಶಾಸಕರು
ವಿಧಾನ ಮಂಡಲ ಅಧಿವೇಶನದಲ್ಲಿ  ಬುಧವಾರ ಪ್ರಶ್ನೆ ಸಂಖ್ಯೆ 212 ರಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ರಸ್ತೆಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ನೀಡಿದ ಉತ್ತರ ತೃಪ್ತಿದಾಯಕವಾಗದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ ಸಂಜೀವ ಮಟಂದೂರು ಅವರು, “ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ  ಸುಮಾರು 5000 ಮಿಮೀ ಮಳೆಯಾಗುತ್ತದೆ. ಹೆಚ್ಚಿನ ಮಳೆಯ ಕಾರಣದಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿದೆ. ಪುತ್ತೂರು ತಾಲೂಕು ಒಂದರಲ್ಲಿಯೇ 1900 ಕಿಮೀ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ರಸ್ತೆ ಇದೆ. ಅದರಲ್ಲಿ ಕೇವಲ  36 ಕಿಮೀ ರಸ್ತೆ ಮಾತ್ರಾ ಹಾಳಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಇದಕ್ಕೆ ಸುಮಾರು 301 ಲಕ್ಷ ರೂಪಾಯಿ ಅನುದಾನ ಅವಶ್ಯಕತೆ ಇರುವ ಬಗ್ಗೆ ಉತ್ತರದಲ್ಲಿ  ತಿಳಿಸಲಾಗಿದೆ. ಇದು ಸರಿಯಲ್ಲ, ಇನ್ನಷ್ಟು ರಸ್ತೆಗಳ ದುರಸ್ತಿ ಆಗಬೇಕಿದೆ. ಇಡೀ ರಸ್ತೆಯ ಅಭಿವೃದ್ಧಿಗೆ ಇಷ್ಟೇ ಅನುದಾನ ಸಾಕಾಗುವುದೋ ಎನ್ನುವುದು  ಪ್ರಶ್ನೆ. ಅಷ್ಟು ಮಾತ್ರವಲ್ಲ ಈ ಅನುದಾನಗಳನ್ನು ತಡವಾಗಿ ಬಿಡುಗಡೆ ಮಾಡುವುದರಿಂದ ದುರಸ್ತಿ ಮಾಡಲೂ ಸಾಧ್ಯವಾಗುತ್ತಿಲ್ಲ, ಅಕ್ಟೋಬರ್‌ , ನವೆಂಬರ್‌ ಅವಧಿಗೆ ಅನುದಾನಗಳು ಬಿಡುಗಡೆಯಾಗಬೇಕು ಎಂದು ಸಂಜೀವ ಮಟಂದೂರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ ಎಸ್‌ ಈಶ್ವರಪ್ಪ, ಈ ಬಾರಿ ಮಳೆಯ ಕಾರಣದಿಂದ ರಸ್ತೆ ಹಾಳಾಗಿರುವುದು  ನಿಜ. ದ ಕ ಜಿಲ್ಲೆಯಲ್ಲಿ  ರಸ್ತೆ ಹಾನಿಯಾಗಿದೆ, ಎಷ್ಟು ಸಾಧ್ಯವೋ ಅಷ್ಟು ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅನೇಕ ಕಡೆ ಕಾಮಗಾರಿ ಶುರುವಾಗಿದೆ. ಇನ್ನೂ ಹೆಚ್ಚು ಹಣ ಬಿಡುಗಡೆಗೆ ಸೀಎಂ ಜೊತೆ ಮಾತುಕತೆ ನಡೆಸಲಾಗುತ್ತದೆ. ಈ ವರ್ಷ ಬಾಬ್ತು ಇನ್ನೂ ಅನುದಾನ ಬಿಡುಗಡೆ ಆಗಿಲ್ಲ. ಆದಷ್ಟು ಬೇಗನೆ ಹಣ ಬಿಡುಗಡೆಗೆ ಕ್ರಮ  ಕೈಗೊಳ್ಳಲಾಗುತ್ತದೆ ಎಂದು  ಹೇಳಿದರು.

Advertisement
ಇದೇ ವೇಳೆ ಸಂಜೀವ ಮಟಂದೂರು ಅವರು ತಾಲೂಕು ಪಂಚಾಯತ್‌ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

 

Advertisement

 

 

Advertisement

 

 

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಕ್ಷಯ ತೃತೀಯ : ಅನಂತ ಶುಭವನ್ನು ತರುವ ಹಬ್ಬ : ಚಿನ್ನ ಖರೀದಿಸುವುದೊಂದೆ ಅಕ್ಷಯ ತೃತೀಯ ಅಲ್ಲ
May 10, 2024
1:56 PM
by: The Rural Mirror ಸುದ್ದಿಜಾಲ
ಪಾರಂಪರಿಕ ಬೀಜೋತ್ಸವ : ದಾವಣಗೆರೆಯಲ್ಲಿ ನಡೆಯಲಿದೆ ಸಂಭ್ರಮದ ಬೀಜ ವೈಭವ
May 10, 2024
1:28 PM
by: The Rural Mirror ಸುದ್ದಿಜಾಲ
ಬ್ರೆಜಿಲ್‌ನಲ್ಲಿ ಹೆಚ್ಚಿದ ಪ್ರವಾಹ ತೀವ್ರತೆ : ಸಾವಿನ ಸಂಖ್ಯೆ 78ಕ್ಕೆ ಏರಿಕೆ, 105 ಮಂದಿ ನಾಪತ್ತೆ : 1,15,000ಕ್ಕೂ ಹೆಚ್ಚು ಜನರ ಸ್ಥಳಾಂತರ
May 10, 2024
1:10 PM
by: The Rural Mirror ಸುದ್ದಿಜಾಲ
ಭಾರತೀಯ ಹಿಂದುಗಳಿಗೆ ಶಾಕಿಂಗ್‌ ಸುದ್ದಿ : ಭಾರತದಲ್ಲಿ ಹಿಂದೂಗಳ ಸಂಖ್ಯೆಯಲ್ಲಿ ಇಳಿಕೆ : ಅಲ್ಪ ಸಂಖ್ಯಾತ ಮುಸ್ಲಿಮರ ಸಂಖ್ಯೆಯಲ್ಲಿ ಏರಿಕೆ
May 10, 2024
12:59 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror