ನಮ್ಮ ದೇಶದಲ್ಲಿ ಹುಟ್ಟಿ, ಅನ್ನ ನೀರು ಉಂಡು , ಇಲ್ಲಿನ ಶಾಲೆಗಳಲ್ಲೇ ಕಲಿತು, ದೇಶದ ಋಣದಲ್ಲೇ ಬಿದ್ದುಕೊಂಡಿದ್ದು ಭಾರತಕ್ಕೆ ದ್ರೋಹ ಬಗೆಯುತ್ತಿರುವವರ ಮುಖವಾಡವನ್ನು ಕಿತ್ತೊಗೆಯುವುದು ತಪ್ಪಾಗುತ್ತದೆ. ರಿಪಬ್ಲಿಕ್ ಟಿ.ವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ಬಂಧನದ ಹಿಂದಿನ ಕತೆಯೂ ಇದುವೆ. ಹೊಗಳು ಭಟ್ಟ ಪತ್ರಿಕೋದ್ಯಮಿಗಳಿಂದ ವಿಭಿನ್ನವಾಗಿರುವ ಅರ್ನಬ್ ನಿಜವಾದ ಜರ್ನಲಿಸ್ಟ್.
ಪತ್ರಕರ್ತರು ನಿಜವಾಗಿಯೂ ಮಾಡಬೇಕಾದದ್ದೇನು? ಸುತ್ತಲಿನ ಪ್ರಪಂಚದಲ್ಲಿ ಏನೇನು ನಡೆಯುತ್ತಿದೆ, ನಿಜವಾಗಿಯೂ ಏನಾಗ ಬೇಕು ಎಂಬುದರ ಕೂಲಂಕುಷ ವಿವರ. ಇದು ಸಮಾಜದ ಕೊನೆಯ ವ್ಯಕ್ತಿಯನ್ನು ತಲುಪುವಂತೆ ಮಾಡುವುದು ಪತ್ರಕರ್ತನ ಕರ್ತವ್ಯ. ಸಮಸ್ಯೆಗಳನ್ನು ತೆರೆದಿಡುವುದು, ಪರಿಹಾರದ ನಿಟ್ಟಿನಲ್ಲಿ ಮಾಡಬಹುದಾದ ಕೆಲಸಗಳೇನು ಎಂಬ ಚರ್ಚೆಗಳಿಗೆ ವೇದಿಕೆಯನ್ನು ಒದಗಿಸುವುದು , ಸಂಬಂದ ಪಟ್ಟವರ ಗಮನಕ್ಕೆ ತರುವುದು. ಇದು ಸದ್ಯದ ಕಮಿಲ ಗ್ರಾಮದ ಹೋರಾಟವಾದರೂ ಸರಿ , ರಾಷ್ಟ್ರಮಟ್ಟದ ಸಮಸ್ಯೆಗಳಾದರೂ ಸರಿ ಹೋರಾಟದಲ್ಲಿ ಪತ್ರಕರ್ತನ ಪ್ರಾಮುಖ್ಯತೆ ಎದ್ದು ಕಾಣುತ್ತದೆ. ಸಮಸ್ಯೆಗಳನ್ನು ಎತ್ತಿ ತೋರಿಸಲು ಅವರೇ ಆಗ ಬೇಕಷ್ಟೇ.
ಆದರೆ ಪಟ್ಟಭದ್ರ ಹಿತಾಸಕ್ತಿಗಳು ಇಂತಹ ನಿಜ ಹೋರಾಟಗಾರರ ಬಾಯಿ ಮುಚ್ಚಿಸುವಲ್ಲಿ ವ್ಯವಸ್ಥಿವಾಗಿ ಕೆಲಸ ಮಾಡುತ್ತವೆ. ಅರ್ನಬ್ ಗೋಸ್ವಾಮಿಯ ಬಂಧನದಲ್ಲೂ ಇಂತಹ ವಿಷಯಗಳೇ ಪ್ರಮುಖ ಪಾತ್ರವಹಿಸಿದ್ದು. ಆದರೆ ಇಂದು ಜನರು ಎಚ್ಚೆತ್ತು ಕೊಂಡಿದ್ದಾರೆ. ದೇಶದ ಒಳಿತು ಯಾರ ಕೈಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಕುರ್ಚಿ ರಾಜಕೀಯದಿಂದ,ಜಾತಿ ರಾಜಕಾರಣದಿಂದ , ರಾಜಕಾರಣಿಗಳು ಹೊರಬರಬೇಕಾಗಿದೆ. ಭಾರತವನ್ನು ಒಡೆದು ಆಳಲು ಪ್ರಯತ್ನಿಸುತ್ತಿರುವ ಶತ್ರುಗಳಿಂದ ದೇಶವನ್ನು ಕಾಪಾಡುವುದು ಇಂದಿನ ನಮ್ಮ ಅನಿವಾರ್ಯತೆ. ದೇಶ ಕಟ್ಟುವ ಕೆಲಸಕ್ಕೆ ನಿರತರಾಗಿರುವ ಎಲ್ಲರಿಗೂ ನೈತಿಕ ಬೆಂಬಲದ ಅಗತ್ಯ ಬಹಳವಿದೆ. ಎಲ್ಲರೂ ತಳ ಮಟ್ಟದಿಂದಲೇ ಒಂದಾಗ ಬೇಕಾಗಿದೆ. ಸತ್ಯಮೇವ ಜಯತೇ..
ವಂದೇ ಮಾತರಂ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಅಡಿಕೆಯ ಮೇಲೆ ಕ್ಯಾನ್ಸರ್‌ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…
ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…
ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಯವರ ಆದೇಶದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು…
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…