ಕೃಷಿ ಯಂತ್ರಗಳ ಸುಧಾರಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರು ಮಾಡಿದ್ದ ಬೆಳ್ಳಾರೆ ಸತ್ಯನಾರಾಯಣ ಕೋಡಿಬೈಲು ಪುತ್ತೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸೋಮವಾರ ಬೆಳಗ್ಗೆ ಮಾಣಿ ಮೈಸೂರು ಹೆದ್ದಾರಿಯ ಪುತ್ತೂರು ಬೈಪಾಸ್ ತೆಂಕಿಲದಲ್ಲಿ ಸ್ಕೂಟರ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಸತ್ಯನಾರಾಯಣ ಕೋಡಿಬೈಲು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸತ್ಯನಾರಾಯಣ ಕೋಡಿಬೈಲು ಅವರು ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಲಾರಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಕೋಡಿಬೈಲು ಎಗ್ರೋ ಏಜೆನ್ಸಿಯ ಮೂಲಕ ದ ಕ ಜಿಲ್ಲೆ ಮಾತ್ರವಲ್ಲ ವಿವಿದೆಡೆ ಹೆಸರುವಾಸಿಯಾಗಿದ್ದ ಸತ್ಯನಾರಾಯಣ ಅವರು ಸ್ವತಃ ಕೃಷಿಕರಾಗಿ ಕೃಷಿ ಉಪಕರಣಗಳ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದ್ದರು. ಅಡಿಕೆ ಔಷಧಿ ಸಿಂಪಡಣೆಗೆ ಯಂತ್ರ, ಮರ ಏರುವ ಯಂತ್ರ ಸೇರಿದಂತೆ ವಿವಿಧ ಯಂತ್ರಗಳ ಸುಧಾರಣೆಯಲ್ಲಿ ಕೃಷಿಕೃಾಗಿಯೂ ಆಸಕ್ತಿಯಿಂದ ಮುನ್ನಡೆಸುತ್ತಿದ್ದರು. ವಿವಿಧ ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ಸತ್ಯನಾರಾಯಣ ಕೋಡಿಬೈಲು ಮುಂಚೂಣಿಯಲ್ಲಿದ್ದರು.
55 ವರ್ಷಗಳ ಸತ್ಯನಾರಾಯಣ ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…