Advertisement
ಸುದ್ದಿಗಳು

ಸೌಜನ್ಯ ಪ್ರಕರಣ | ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಪಾದಯಾತ್ರೆ | ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ನ್ಯಾಯಕ್ಕಾಗಿ ಪ್ರಾರ್ಥನೆ |

Share
ಸೌಜನ್ಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆಯಾಗಬೇಕು ಎಂದು ಒತ್ತಾಯಿಸಿ ಭಾನುವಾರ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸಹಿತ ನೇತ್ರಾವತಿ ಸ್ನಾಘಟ್ಟದಿಂದ ಧರ್ಮಸ್ಥಳದಲ್ಲಿ ಪ್ರವೇಶದ್ವಾರದ ವರೆಗೆ ಶಿವಪಂಚಾಕ್ಷರಿ ಪಠಣದೊಂದಿಗೆ ಪಾದಯಾತ್ರೆಯಲ್ಲಿ ಬಂದು ಬಳಿಕ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ಬಂದು ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಸೌಜನ್ಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಉಗ್ರ ಶಿಕ್ಷೆ ನೀಡಬೇಕು. ತನ್ಮೂಲಕ ಕೊಲೆಯಾದ ಸೌಜನ್ಯ ಆತ್ಮಕ್ಕೆ ಶಾಂತಿ ದೊರಕುವಂತಾಗಬೇಕು ಎಂದು ಕುಸುಮಾವತಿ ಕಣ್ಣೀರು ಸುರಿಸಿ ಅಣ್ಣಪ್ಪಸ್ವಾಮಿ ಪದತಲದಲ್ಲಿ ಪ್ರಾರ್ಥನೆ ಸಲ್ಲಿಸಿ  ಪ್ರಸಾದ ಸ್ವೀಕರಿಸಿದರು.
ಇದೇ ವೇಳೆ ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಮತ್ತು ಉದಯ ಜೈನ್, ಅಣ್ಣಪ್ಪಸ್ವಾಮಿ ಬೆಟ್ಟದ ತಳದಲ್ಲಿ ಪ್ರಾರ್ಥನೆ ಸಲ್ಲಿಸಿ ಸೌಜನ್ಯ ಕೊಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಆಣೆಪ್ರಮಾಣ ಮಾಡಿದರು. ತಮ್ಮ ಬಗ್ಗೆ ಅಪಪ್ರಚಾರವಾಗುತ್ತಿದೆ ನೈಜ ಆರೋಪಿ ಪತ್ತೆಯಾಗಿ ಉಗ್ರಶಿಕ್ಷೆ ನೀಡಬೇಕು ಎಂದರು.
ಧೀರಜ್ ಕೆಲ್ಲ ಮಾತನಾಡಿ ತಾವು ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ.
ತಾವು ಯಾವುದೇ ರೀತಿಯ ತನಿಖೆಗೆ ಸಿದ್ಧರಿದ್ದೇವೆ. ತಮ್ಮ ಸಂಸಾರದ ಬಗ್ಯೆಯೂ ಮಾಧ್ಯಮದವರು ಕಾಳಜಿ ವಹಿಸಿ ಅಪಪ್ರಚಾರ ಮಾಡಬಾರದು ಎಂದು ಸಲಹೆ ನೀಡಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಂಧ್ರಪ್ರದೇಶದ ಹೊಸ ಪ್ರಯೋಗ : ರೈತನ ತೋಟದಿಂದ ನೇರವಾಗಿ ಮನೆ ಬಾಗಿಲಿಗೆ ಕೃಷಿ ಉತ್ಪನ್ನ

ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…

5 hours ago

ಭಾರತ ಕೃಷಿಯಲ್ಲಿ ಭರ್ಜರಿ ದಾಖಲೆ : ಆಹಾರ ಉತ್ಪಾದನೆ 3765 ಮಿಲಿಯನ್ ಟನ್!

2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…

16 hours ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಮೇ 30ರಂದು ಕಸ್ಟಮರ್ ಸಪೋರ್ಟ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ

ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…

16 hours ago

ಬ್ಲಿಂಕಿಟ್‌ನಲ್ಲಿ ಉದ್ಯೋಗಾವಕಾಶ : ಜೂನ್ 1ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…

16 hours ago

ಬಕ್ರೀದ್‌ಗೂ ಮುನ್ನ ದೇಶದಲ್ಲಿ ಹೊಸ ಚರ್ಚೆ | “ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ” — ಮುಸ್ಲಿಂ ಸಂಘಟನೆಗಳ ಬೇಡಿಕೆ

ಬಕ್ರೀದ್‌ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…

22 hours ago

ಹವಾಮಾನ ಬದಲಾವಣೆ ಈಗ ಭವಿಷ್ಯದ ಸಮಸ್ಯೆಯಲ್ಲ- ಸ್ಥಳೀಯ ಮಟ್ಟದಲ್ಲೇ ಆರಂಭವಾಗುತ್ತಿದೆ ಕ್ರಿಯಾ ಯೋಜನೆ

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ…

1 day ago