2012ರಲ್ಲಿ ಅತ್ಯಾಚಾರ ನಡೆದು ಕೊಲೆಯಾದ ಕುಮಾರಿ ಸೌಜನ್ಯ ಪ್ರಕರಣವನ್ನು ಸರ್ಕಾರ ಮರುತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸೋಮವಾರ (ಆ.14) ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಪಾದಯಾತ್ರೆ ಹಾಗೂ ಬೃಹತ್ ಪ್ರತಿಭಟನೆ ನಡೆಯಲಿದೆ.
ಪುತ್ತೂರು ಪೇಟೆಯಲ್ಲಿ ಆ.12 ರಂದು ಪುತ್ತಿಲ ಪರಿವಾರದ ವತಿಯಿಂದ ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಪೇಟೆಯ ಅಂಗಡಿ ಮಾಲಕರು ಈ ಜಾಥದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಆ.14 ರಂದು ಬೆಳಿಗ್ಗೆ 9.30 ಕ್ಕೆ ದರ್ಭೆಯಿಂದ ಹೊರಡುವ ಪಾದಯಾತ್ರೆ ಪುತ್ತೂರು ಬಸ್ ನಿಲ್ದಾಣದ ಸಮೀಪ ಪ್ರತಿಭಟನಾ ಸಭೆ ನಡೆಯಲಿದೆ. ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಪುತ್ತೂರಿನ ಅಂಗಡಿ ಮಾಲಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಸೌಜನ್ಯ ಪ್ರಕರಣ ಅತೀ ಶೀಘ್ರವಾಗಿ ಮರುತನಿಖೆ ನಡೆಸಲು ಒತ್ತಾಯಿಸಬೇಕೆಂದು ಪುತ್ತಿಲ ಪರಿವಾರ ಮನವಿ ಮಾಡಿಕೊಂಡಿದೆ.
ಸೌಜನ್ಯಳಿಗೆ ನ್ಯಾಯ ಕೇಳಲು ನಡೆಸುವ ಹೋರಾಟಕ್ಕೂ ಪೊಲೀಸ್ ಇಲಾಖೆ ಅಡ್ಡಿಪಡಿಸುತ್ತಿರುವುದನ್ನು ಮಾಧ್ಯಮದ ಮೂಲಕ ಗಮನಕ್ಕೆ ಬಂದಿದ್ದು , ಇದಕ್ಕೆ ಪುತ್ತಿಲ ಪರಿವಾರ ಖಂಡಿಸಿದೆ.
ಈ ಹೋರಾಟ ಯಾವೂದೇ ರಾಜಕೀಯ ಹೋರಾಟವಲ್ಲ ಮತ್ತು ಸರ್ಕಾರದ ವಿರುದ್ದ ನಡೆಯುವ ಹೋರಾಟವೂ ಅಲ್ಲ. ಅಮಾಯಕ ವಿದ್ಯಾರ್ಥಿನಿ ಸೌಜನ್ಯಳಿಗೆ ನ್ಯಾಯ ಕೇಳಲು ನಡೆಸುವ ಹೋರಾಟಕ್ಕೆ ಅಡ್ಡಿಪಡಿಸುವ ಪೊಲೀಸ್ ಅಧಿಕಾರಿಗಳ ಮನಸ್ಥಿತಿ ಹೇಗಿರಬಹುದು ಎಂದು ಜನಮಾನಸದಲ್ಲಿ ಅನುಮಾನ ಮೂಡಿದೆ. ಈ ಮನಸ್ಥಿತಿಯ ಇಲಾಖಾ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿದೆಯೇ ಅಗತ್ಯವಿದೆಯೇ ಎನ್ನುವುದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ.
ಸೌಜನ್ಯಳಿಗಾದ ಪರಿಸ್ಥಿತಿ ತಮ್ಮ ಮನೆಯ ಮಕ್ಕಳಿಗೆ ಆಗ್ತಿದ್ದರೆ ಯಾವೊಬ್ಬ ಅಧಿಕಾರಿಗಾದರೂ ಹೋರಾಟ ಮಾಡಬಾರದು ಎನ್ನುವ ಮನಸ್ಥಿತಿ ಬರುತ್ತಿತ್ತೇ ..? ಸರ್ಕಾರ ಬರುತ್ತದೆ ಹೋಗುತ್ತದೆ , ಸಾರ್ವಜನಿಕರು ಕಟ್ಟುವ ತೆರಿಗೆ ಹಣದ ಪ್ರತಿಫಲವಾಗಿ ಸಂಬಳ ತೆಗೆದುಕೊಳ್ಳುವ ಇಲಾಖೆಗಳು ಸಾರ್ವಜನಿಕರು ನ್ಯಾಯಕ್ಕಾಗಿ ಹೋರಾಟಗಳಿಗೆ ವಿರೋಧ ವ್ಯಕ್ತಪಡಿಸಿ ಒಂದು ಪಕ್ಷದ ಜೀತದಾಳುಗಳಂತೆ ವರ್ತಿಸುವುದು ತೀವ್ರ ಖಂಡನೀಯ. ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬ ಹೋರಾಟಕ್ಕೆ ಪೊಲೀಸ್ ಇಲಾಖೆಯೂ ಸ್ಪಂದಿಸಬೇಕು. ಆ.14 ರ ಪುತ್ತಿಲ ಪರಿವಾರದ ಹೋರಾಟ ಪೂರ್ವನಿಗದಿಯಂತೆ ನಡೆಯುತ್ತದೆ. ಹೋರಾಟದಲ್ಲಿ ಯಾವೂದೇ ಬದಲಾವಣೆ ಇಲ್ಲ. ದರ್ಬೆಯಿಂದ ಹೊರಟು ಬಸ್ ನಿಲ್ದಾಣದವರೆಗೆ ಜಾಥ ನಡೆಯಲಿದೆ. ಎಲ್ಲರಿಗೂ ಸೌಜನ್ಯಳ ನೈಜ ಕೊಲೆಗಡುಕರು ಸಿಗಬೇಕೆಂಬ ಮನಸ್ಸಿನ ಭಾವನೆ ಇದೆ, ಪುತ್ತೂರಿನ ವ್ಯಾಪಾರಸ್ಥರು ಯಾವತ್ತೂ ನ್ಯಾಯದ ಪರವಾಗಿರುವ ಕಾರಣ ಆ ಹೆಣ್ಣುಮಗಳ ಸಾವಿಗೆ ನ್ಯಾಯ ಸಿಗಲು ತಮ್ಮ ವ್ಯವಹಾರ ಸ್ಥಗಿತಗೊಳಿಸಿ ಈ ಅನ್ಯಾಯದ ವಿರುದ್ದ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎನ್ನುವ ವಿಶ್ವಾಸ ಪುತ್ತೂರಿನ ಮಹಾಜನತೆಗಿದೆ.
ಇತ್ತಿಚೆಗೆ ಪೊಲೀಸ್ ಇಲಾಖೆ ಈಗಾಗಲೇ ನಮ್ಮ ಕಾರ್ಯಕರ್ತರಿಗೆ ಬ್ಯಾನರ್ ವಿಷಯದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪ್ರತಿ ಚುನಾವಣೆಗಳಲ್ಲಿಯೂ 144 ಸೆಕ್ಷನ್ ಇರುವಾಗಲೇ ವಿಜಯೋತ್ಸವಗಳಾದಾಗ ಯಾವೂದೇ ಕೇಸ್ ದಾಖಲಿಸದ ಇಲಾಖೆ ಮೊನ್ನೆಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶಾಂತಿಯುತ ಮೆರವಣಿಗೆ ನಡೆಸಿದಾಗಲೂ ಪುತ್ತಿಲ ಪರಿವಾರದ ಮೇಲೆ ಸ್ವಯಂ ಕೇಸ್ ದಾಖಲಿಸಿದ್ದಾರೆ. ಡಿವೈಎಸ್ಪಿ ಗಾನ ಕುಮಾರಿ ಪುತ್ತೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಏನೇನು ಅನ್ಯಾಯ ಮಾಡಿದ್ದಾರೆ ಎನ್ನುವುದು ಪುತ್ತೂರಿನ ಮಹಾ ಜನತೆಗೆ ಈಗಾಗಲೇ ಗೊತ್ತಿದೆ. 2012ರಲ್ಲಿ ಸೌಜನ್ಯ ಅತ್ಯಾಚಾರವಾಗಿ ಕೊಲೆಯಾದಗ ಪೊಲೀಸ್ ಇಲಾಖೆ ಮಾಡಿದ ಎಡವಟ್ಟು ಲೋಕಕ್ಕೆ ಗೊತ್ತಿದೆ. ಈಗ ಸೌಜನ್ಯ ಹೋರಾಟವನ್ನು ಹತ್ತಿಕ್ಕುವ ಮೂಲಕ ಸೌಜನ್ಯ ಸಾವನ್ನು ಸಮರ್ಥನೆಗೆ ಇಳಿದಿದೆಯೇ ಎನ್ನುವ ಅನುಮಾನ ಸೃಷ್ಟಿಯಾಗಿದೆ. ಈಗ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದ್ದು, ಪುತ್ತೂರಿನ ಪುಣ್ಯ ಭೂಮಿಯಲ್ಲಿ ಯಾವತ್ತೂ ಸತ್ಯ ಗೆದ್ದಿದೆ ಮುಂದೆಯೂ ಸತ್ಯ ಗೆಲ್ಲಲಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…