#ಕೃಷಿಉಳಿಸಿ #ಕಾಡಾನೆದಾಳಿ | ಕಾಡಾನೆ ಓಡಿಸಲು ಲಾಟೀನು ಪ್ರಯೋಗ ಮಾಡಿದರು…!

March 18, 2022
1:14 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಈಗಾಗಲೇ ಕೊಲ್ಲಮೊಗ್ರ , ಹರಿಹರ ಪ್ರದೇಶದಲ್ಲಿ ಕೃಷಿಕರ ಮೇಲೂ ದಾಳಿ ಆರಂಭಿಸಿದೆ. ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳೂ ಅನಿವಾರ್ಯ. ಇಲಾಖೆಗಳು ತಮ್ಮದೇ ಪ್ರಯತ್ನ ಮಾಡುತ್ತಿವೆ. ಈ ನಡುವೆ ಆನೆ ಓಡಿಸಲು ಕೃಷಿಕರಿಂದ  ಏನೇನು ಪ್ರಯತ್ನಗಳಾಗಿವೆ ಎಂದು ರೂರಲ್‌ ಮಿರರ್‌.com ಪರಿಚಯಿಸುತ್ತಾ ಮುಂದೇನು ಮಾಡಬಹುದು ಎಂಬುದರ ಬಗ್ಗೆ ವಿವರವಾದ ಅಧ್ಯಯನ ವರದಿ ಮಾಡುತ್ತಿದೆ. ಕೃಷಿಕರೂ ತಮ್ಮ ಅಭಿಪ್ರಾಯ ತಿಳಿಸಬಹುದು.

Advertisement
Advertisement

ಸುಮಾರು 15-20 ವರ್ಷಗಳಿಂದಲೇ ಕಾಡಾನೆ ಕಾಟ ಸುಳ್ಯ ತಾಲೂಕಿನ ಕೊಲ್ಲಮೊಗ್ರ, ಹರಿಹರ ಪ್ರದೇಶದಲ್ಲಿ ಇದೆ. ಆರಂಭದಲ್ಲಿ ಕೃಷಿಗೆ ಸಣ್ಣ ಪ್ರಮಾಣದಲ್ಲಿ ಹಾನಿ ಮಾಡುತ್ತಿದ್ದ ಕಾಡಾನೆಗಳ ಹಿಂಡು ಕ್ರಮೇಣವಾಗಿ ಅಡಿಕೆ, ಬಾಳೆ , ತೆಂಗು ನಾಶ ಮಾಡಿತು. ಒಮ್ಮೆ ಕೃಷಿ ಹಾನಿಗೊಳಗಾದರೆ ಮತ್ತೆ ಕೃಷಿ ಮರುಸೃಷ್ಟಿಗೆ ದಶಕಗಳೇ ಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಬದುಕಿನ ಅತೀ ಮುಖ್ಯ ಕಾಲಘಟ್ಟವು ಕೃಷಿ ಅಭಿವೃದ್ಧಿಗೆ ಬೇಕಾಗುತ್ತದೆ. ಆದರೆ ಈ ಶ್ರಮವೆಲ್ಲಾ ಕಾಡಾನೆಗೆ ಒಂದು ದಿನದಲ್ಲಿ ಹಾಳು ಮಾಡಲು ಸಾಕಾಗುತ್ತದೆ. ಹೀಗಾಗಿ ಕೃಷಿಕನ ಬೆವರ ಶ್ರಮ ಉಳಿಸಲು ಕಾಡಾನೆ ಹಾವಳಿಯಿಂದ ತಪ್ಪಿಸಲು ಹರಿಹರ, ಕೊಲ್ಲಮೊಗ್ರ ಪ್ರದೇಶದಲ್ಲಿ ಆರಂಭದಲ್ಲಿ ರಾತ್ರಿ ಇಡೀ ಜಾಗರಣೆ ಮಾಡಿದವರು ಇದ್ದಾರೆ. ಇನ್ನೂ ಕೆಲವರು ಆರಂಭದಲ್ಲಿ ರಾತ್ರಿ ದೀಪ ಬೆಳಗಿಸಿ ಕೆಲ ಸಮಯ ಪರಿಹಾರ ಕಂಡುಕೊಂಡರು.

ತಮ್ಮ ಕೃಷಿ ಭೂಮಿಯ ಸುತ್ತಲು ಚಿಮಣಿ ದೀಪವನ್ನು ಸಂಜೆಯ ವೇಳೆಗೆ ಉರಿಸಿ ಬರುತ್ತಿದ್ದರು ಕೃಷಿಕರು. ಸಂಜೆಯ ವೇಳೆಗೆ ಕೃಷಿ ಭೂಮಿಯ ಸುತ್ತಲೂ ಇಟ್ಟಿರುವ ದೀಪಗಳನ್ನು ಉರಿಸಿ ಮರುದಿನ ಬೆಳಗಿನವರೆಗೆ ಈ ದೀಪ ಉರಿಯುವಂತೆ ಜಾಗೃತೆ ವಹಿಸುತ್ತಿದ್ದರು. ಆರಂಭದಲ್ಲಿ ಈ ಪ್ರಯೋಗ ಹೊಸದಾಗಿ ಕಂಡಾಗಿ ಕಾಡಾನೆ ತೋಟದ ಕಡೆಗೆ ಲಗ್ಗೆ ಇಡುವುದು  ಕಡಿಮೆ ಮಾಡಿತು. ಕೆಲವರು ಲಾಟೀನು ಇಡುವ ಮೂಲಕವೂ ಇದರಲ್ಲಿ ಸುಧಾರಣೆ ಮಾಡಿಕೊಂಡರು. ಲಾಟೀನು ಇಟ್ಟರೆ ಇಡೀ ರಾತ್ರಿ ಗಾಳಿಯ ರಭಸಕ್ಕೂ ನಂದತೆ ಬೆಳಗಿನವರೆಗೆ ಉರಿಯುತ್ತಿತ್ತು. ಕ್ರಮೇಣ ಈ ಪ್ರಯೋಗವೂ ಕಾಡಾನೆಗೆ ಅಭ್ಯಾಸವಾಗಿ ಮತ್ತೆ ಕೃಷಿ ತೋಟಕ್ಕೆ ಹಾನಿ ಮಾಡಲು ಆರಂಭಿಸಿತು. ಆಗ ಇನ್ನೊಂದು ಪ್ರಯೋಗಕ್ಕೆ ಮುಂದಾದರು. ಅಷ್ಟರಲ್ಲಿ ಅದುವರೆಗೂ ಕೃಷಿ ಭೂಮಿಯೊಳಗೆ ಇಳಿದಿದ್ದ ಬೆವರ ಹನಿ ಒಣಗಿತು.  ಮುಂದೇನು ಪ್ರಯೋಗ ಮಾಡಿದರು…. ? ಇನ್ನೊಂದು ಭಾಗದಲ್ಲಿ ತಿಳಿಸುತ್ತೇವೆ.

ಇಂತಹ ಪ್ರಯೋಗಗಳು ಕೃಷಿಕರು ಮಾಡಿದ್ದಿದ್ದರೆ ನಮಗೇ ಕಳುಹಿಸಿ. ಕೃಷಿಕರ ಇಂತಹ ಎಲ್ಲಾ ಪ್ರಯತ್ನಗಳನ್ನು ದಾಖಲಿಸಿ ಆ ಬಳಿಕ ಮುಂದೇನು ಪರಿಹಾರ ಮಾರ್ಗವಿದೆ ಎಂಬುದರ ಅಧ್ಯಯನ ವರದಿಯನ್ನು ದಾಖಲಿಸಿ ಸಂಬಂಧಿತರ ಮೂಲಕ ಪರಿಹಾರಕ್ಕೆ ಯತ್ನಿಸೋಣ. ನಮ್ಮ ವ್ಯಾಟ್ಸಪ್‌ ಸಂಖ್ಯೆ 9449125447 ಅಥವಾ 9448625390 – ರೂರಲ್‌ ಮಿರರ್

Advertisement

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ಯಾಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪಣ | ಅರಣ್ಯ ಇಲಾಖೆಯಿಂದ ಹಲವು ಕ್ರಮ
April 18, 2025
6:35 AM
by: The Rural Mirror ಸುದ್ದಿಜಾಲ
ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group