ಪುತ್ತೂರಿನ ಎ. ಪಿ. ಸದಾಶಿವ ಮರಿಕೆ ಅವರು ಸಾವಯವ ಕೃಷಿಕರು(Agriculturist). ಇವರು ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ, ಹಾಗೇ ಮಾಡುತ್ತಲೂ ಇದ್ದಾರೆ. ಈಗ ಕೃಷಿ ಮಾಡುವವರಿಗೆ, ಮುಂದೆ ಮಾಡಲಿರುವವರಿಗೆ ಇವರ ಮಾಹಿತಿ, ಅನುಭವ ಸಾಕಷ್ಟು ಅನುಕೂಲ. ತಮ್ಮ ಕೃಷಿಯ ಅನುಭವಗಳನ್ನು ಬರಹಗಳ ಮೂಲಕ ಅಲ್ಲದೆ ಅನೇಕರಿಗೆ ಸಲಹೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ. ಇಲ್ಲಿ ತಾವು ಕಂಡಿರುವ ತೋಡಿಗೆ ಕಟ್ಟ ಕಟ್ಟಿದ ಬಗ್ಗೆ ಹೇಳಿದ್ದನ್ನು ಕೇಳಿಕೊಂಡು ಪ್ರಭಾವಿತರಾದವರು ಕಟ್ಟ ಕಟ್ಟಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.ಅದರ ವಿವರವನ್ನು ಅವರೇ ಬರೆದಿದ್ದಾರೆ.. ಇಲ್ಲಿದೆ ವಿವರ...
ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಕೆಮ್ಮಿಂಜೆ ಬಯಲು ಎಂಬಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡಿರುವವರು ವಿಜಯಕೃಷ್ಣ ದರ್ಭೆ . ಅವರ ತೋಟದ ಬದಿಯಲ್ಲಿ ಸಣ್ಣದೊಂದು ತೋಡು. ಆ ತೋಡಿನಲ್ಲಿ ಜನವರಿ ಕೊನೆಯವರೆಗೆ ಸಣ್ಣದಾದ ಹರಿವು ಇರುತ್ತದೆಯಂತೆ. ನನ್ನ ತಗಡಿನ ಕಟ್ಟದಿಂದ ಪ್ರೇರಿತರಾಗಿ ಅದಕ್ಕೊಂದು ಕಟ್ಟ ಕಟ್ಟುವ ಯೋಚನೆ ಬಂತಂತೆ. ಕಳೆದ ವರ್ಷ ಆ ಬಗ್ಗೆ ವಿಚಾರ ವಿನಿಮಯ ನಡೆದಿತ್ತು. ಒಂದೇ ಬಾರಿಗೆ ಧುಮುಕಿದರೆ ಹಣ ಪೋಲು ಎಂದಾಗಬಹುದೇ? ಎಂಬ ಭಯದಲ್ಲಿ ಈ ವರ್ಷ ಸರಳ ಕಟ್ಟಕ್ಕೆ ಧುಮುಕಿಯೇ ಬಿಟ್ಟರು.
ಅಲ್ಲೇ ಬದಿಯಲ್ಲಿ ಧಾರಾಳವಾಗಿದ್ದ ಓಟೆ ಬಿದಿರು, ಆಧಾರ ಸ್ತಂಭವಾಗಿ ಮರದ ಗೂಟ, ಗೂಟದ ಭದ್ರತೆಗಾಗಿ ಆಧಾರ ಮೂಂಡು ಇಷ್ಟು ಸಿದ್ಧತೆ ನಡೆಸಿ 17 ಅಡಿ ಅಗಲ, ಮೂರು ಅಡಿ ಎತ್ತರಕ್ಕೆ ಬಿದಿರಿನ ಕಟ್ಟದ ತಯಾರಿಯಾಯಿತು. ನೀರು ನಿಲ್ಲುವುದಕ್ಕಾಗಿ ಎದುರುಬದಿಯಿಂದ ಸಿಲ್ಪಾಲಿನ್ ಶೀಟನ್ನು ಹೊದಿಸಿ ಬಿಟ್ಟರು. ಏರಿ ಬಂದ ನೀರನ್ನು ನೋಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಮುಂದಿನ ವರ್ಷದ ಭದ್ರಕಟ್ಟಕ್ಕಾಗಿ ಮನಸ್ಸಿನ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರಂತೆ. ವಿಜಯ ಕೃಷ್ಣರ ಸ್ಪೂರ್ತಿ ಬೇರೆಯವರಿಗೂ ಕಟ್ಟಕ್ಕೆ ಸ್ಪೂರ್ತಿ ತುಂಬಲಿ.
ಎ. ಪಿ. ಸದಾಶಿವ ಮರಿಕೆ
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…