ಆನಿಯನ್ ರೈಸ್ ( ಈರುಳ್ಳಿ ಅನ್ನ)
ಬೇಕಾಗುವ ಸಾಮಗ್ರಿಗಳು :
ಅಕ್ಕಿ 1.1/2ಲೋಟ.
ಈರುಳ್ಳಿ 2 (ಉದ್ದಕ್ಕೆ ಕಟ್ ಮಾಡಿ.)
ಹಸಿಮೆಣಸು 2 (ಉದ್ದಕ್ಕೆ ಕಟ್ ಮಾಡಿ.)
ಮೆಣಸಿನ ಪುಡಿ 1/4ಚಮಚ.
ಅರಸಿನ ಹುಡಿ 1/4ಚಮಚ.
ಶುಂಠಿ 1ತುಂಡು (ಚಿಕ್ಕ ದಾಗಿ ಕಟ್ ಮಾಡಿ.)
ಕೊತ್ತಂಬರಿ ಸೊಪ್ಪು 2 ಚಮಚ.
ಉಪ್ಪು ರುಚಿಗೆ ತಕ್ಕಷ್ಟು.
ನೀರು.
ಒಗ್ಗರಣೆಗೆ: ಸಾಸಿವೆ, ಎಣ್ಣೆ5 ಚಮಚ ,ಕೆಂಪು ಮೆಣಸು2, ಕರಿಬೇವಿನ ಸೊಪ್ಪು, ಜೀರಿಗೆ 1/4ಚಮಚ ,ಶೇಂಗಾ 3 ಚಮಚ.
ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ 1ಚಮಚ ಎಣ್ಣೆ, ಉಪ್ಪು, ನೀರು ಹಾಕಿ ಬೇಯಿಸಿ.
ಮಾಡುವ ವಿಧಾನ :
ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ,ಶೇಂಗಾ ಕರಿಬೇವಿನ ಸೊಪ್ಪು, ಕೆಂಪು ಮೆಣಸು ಹಾಕಿ ಒಗ್ಗರಣೆ ಸಿಡಿಸಿ.
ಇದಕ್ಕೆ ಕಟ್ ಮಾಡಿದ ಹಸಿಮೆಣಸು, ಈರುಳ್ಳಿ, ಚಿಟಿಕೆ ಉಪ್ಪು,ಅರಸಿನ ಪುಡಿ, ಮೆಣಸಿನ ಪುಡಿ, ಹಾಕಿ ಫ್ರೈ ಮಾಡಿ ನಂತರ ಬೇಯಿಸಿದ ಅನ್ನ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈವಾಗ ಬಿಸಿ ಬಿಸಿಯಾದ ರುಚಿ ರುಚಿಯಾದ ಈರುಳ್ಳಿ ಅನ್ನ ರೆಡಿ.
ಗುಜ್ಜೆ ಶೇಂಗಾ ಮಸಾಲಾ ಪಲ್ಯಕ್ಕೆ ಬೇಕಾಗುವ ವಸ್ತುಗಳು ಹಾಗೂ ಮಾಡುವ ವಿಧಾನ :…
ಅಡಿಕೆ ಮರದ ಜೊತೆಗೂ ಕಾಫಿ ಬೆಳೆ ಅನುಕೂಲಕರವಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರು ಉಪ…
ಟ್ರಂಪ್ ಅವರ ಸುಂಕಗಳು ರಬ್ಬರ್ ಉದ್ಯಮದ ಮೇಲೆ ಪರಿಣಾಮ ಬೀರಬಹುದು ಎಂದು ಅಖಿಲ…
ಈ ಬಾರಿ ನಿಗದಿತವಾಗಿ ಆರಂಭವಾಗುವ ಮುಂಗಾರು ಸಾಮಾನ್ಯವಾಗಿಯೇ ಮುಂದುವರಿಯಬಹುದು ಎಂದು ಸ್ಕೈಮೆಟ್ ಅಂದಾಜಿಸಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪ್ರಮುಖರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತೀಯ ಕರಾವಳಿ ರಕ್ಷಣಾ ಪಡೆಯು ಸಮುದ್ರದ ಮೂಲಕ ಅಡಿಕೆ ಕಳ್ಳಸಾಗಣೆ ಮಾಡುವ ಪ್ರಕರಣವನ್ನು…