ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ (ಜೋಳ ಮತ್ತು ಕಾಳು ಮೆಣಸು ಮಂಚೂರಿ)
ಬೇಕಾಗುವ ಸಾಮಗ್ರಿಗಳು :
- ಜೋಳ ಪ್ಯಾಕ್ 1.
- ಕಾಳು ಮೆಣಸು ಹುಡಿ 2ಚಮಚ.
- ಕಡಲೆ ಹಿಟ್ಟು 1/2 ಕಪ್.
- ಜೋಳದ ಹುಡಿ 4ಚಮಚ.
- ಮೈದಾ 3 ಚಮಚ.
- ಹಸಿಮೆಣಸು 2 ( ಚಿಕ್ಕ ದಾಗಿ ತುಂಡು ಮಾಡಿ.)
- ಬೆಳ್ಳುಳ್ಳಿ 8. (ಚಿಕ್ಕ ದಾಗಿ ತುಂಡು ಮಾಡಿ).
- ಈರುಳ್ಳಿ 1 ಚಿಕ್ಕ ದಾಗಿ ತುಂಡು ಮಾಡಿ.
- ಕ್ಯಾಪ್ಸಿಕಂ 1 (ಚಿಕ್ಕ ದಾಗಿ ತುಂಡು ಮಾಡಿ.)
- ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಚಮಚ.
- ಉಪ್ಪು ರುಚಿಗೆ ತಕ್ಕಷ್ಟು.
- ಟೊಮೆಟೊ ಸಾಸ್ 6ಚಮಚ.
- ವಿನೇಗರ್ 2ಚಮಚ.
- ಸೋಯಾ ಸಾಸ್ 2ಚಮಚ.
- ಬೂಂದಿ ಕಾಳು 4ಚಮಚ.
- ಎಣ್ಣೆ ಕರಿಯಲು.
ಮಾಡುವ ವಿಧಾನ : ಜೋಳ ಜೋಳವನ್ನು 2 ತುಂಡು ಮಾಡಿ ಬಿಸಿನೀರಿಗೆ ಹಾಕಿ 5 ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. ಬಸಿದು ಬಿಡಿ.ಹಿಟ್ಟು ಕಲೆಸಿಕೊಳ್ಳಲು. ಕಡಲೆ ಹುಡಿ, ಮೈದಾ, ಜೋಳದ ಹುಡಿ, ಕಾಳುಮೆಣಸು ಹುಡಿ, ಉಪ್ಪು, ನೀರು ಹಾಕಿ ಹಿಟ್ಟು ಕಲೆಸಿ.( ಬಜ್ಜಿ ಯ ಹದಕ್ಕೆ ಕಲಸಿ.)ಜೋಳವನ್ನು ಹಿಟ್ಟಿಗೆ ಅದ್ದಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ.
ನಂತರ ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ಸೊಯಾ ಸಾಸ್, ವಿನೆಗರ್ ,ಟೊಮೆಟೊ ಸಾಸ್ ಹಾಕಿ ಮಿಕ್ಸ್ ಮಾಡಿ. ನಂತರ ಎಣ್ಣೆ ಯಲ್ಲಿ ಕರಿದ ಜೋಳ ಜೋಳ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಬೂಂದಿ ಕಾಳು ಹಾಕಿ ಸವಿಯಿರಿ
# ದಿವ್ಯ ಮಹೇಶ್
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel