ಅನುಕ್ರಮ

ಸವಿರುಚಿ | ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ |

Share
ಬೇಬಿ ಕಾರ್ನ್ ಮತ್ತು ಪೆಪ್ಪರ್ ಮಂಚೂರಿ (ಜೋಳ ಮತ್ತು ಕಾಳು ಮೆಣಸು ಮಂಚೂರಿ)
ಬೇಕಾಗುವ ಸಾಮಗ್ರಿಗಳು :
  • ಜೋಳ ಪ್ಯಾಕ್ 1.
  • ಕಾಳು ಮೆಣಸು ಹುಡಿ 2ಚಮಚ.
  • ಕಡಲೆ ಹಿಟ್ಟು 1/2 ಕಪ್.
  • ಜೋಳದ ಹುಡಿ 4ಚಮಚ.
  • ಮೈದಾ 3 ಚಮಚ.
  • ಹಸಿಮೆಣಸು 2 ( ಚಿಕ್ಕ ದಾಗಿ ತುಂಡು ಮಾಡಿ.)
  • ಬೆಳ್ಳುಳ್ಳಿ 8. (ಚಿಕ್ಕ ದಾಗಿ ತುಂಡು ಮಾಡಿ).
  • ಈರುಳ್ಳಿ 1 ಚಿಕ್ಕ ದಾಗಿ ತುಂಡು ಮಾಡಿ.
  • ಕ್ಯಾಪ್ಸಿಕಂ 1 (ಚಿಕ್ಕ ದಾಗಿ ತುಂಡು ಮಾಡಿ.)
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಚಮಚ.
  • ಉಪ್ಪು ರುಚಿಗೆ ತಕ್ಕಷ್ಟು.
  • ಟೊಮೆಟೊ ಸಾಸ್ 6ಚಮಚ.
  • ವಿನೇಗರ್ 2ಚಮಚ.
  • ಸೋಯಾ ಸಾಸ್ 2ಚಮಚ.
  • ಬೂಂದಿ ಕಾಳು 4ಚಮಚ.
  • ಎಣ್ಣೆ ಕರಿಯಲು.
ಮಾಡುವ ವಿಧಾನ : ಜೋಳ ಜೋಳವನ್ನು 2 ತುಂಡು ಮಾಡಿ ಬಿಸಿನೀರಿಗೆ ಹಾಕಿ 5 ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. ಬಸಿದು ಬಿಡಿ.
ಹಿಟ್ಟು ಕಲೆಸಿಕೊಳ್ಳಲು. ಕಡಲೆ ಹುಡಿ, ಮೈದಾ, ಜೋಳದ ಹುಡಿ, ಕಾಳುಮೆಣಸು ಹುಡಿ, ಉಪ್ಪು, ನೀರು ಹಾಕಿ ಹಿಟ್ಟು ಕಲೆಸಿ.( ಬಜ್ಜಿ ಯ ಹದಕ್ಕೆ ಕಲಸಿ.)
ಜೋಳವನ್ನು ಹಿಟ್ಟಿಗೆ ಅದ್ದಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ.
ನಂತರ ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ  ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ. ಸೊಯಾ ಸಾಸ್, ವಿನೆಗರ್ ,ಟೊಮೆಟೊ ಸಾಸ್ ಹಾಕಿ ಮಿಕ್ಸ್ ಮಾಡಿ. ನಂತರ ಎಣ್ಣೆ ಯಲ್ಲಿ ಕರಿದ ಜೋಳ ಜೋಳ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಬೂಂದಿ ಕಾಳು ಹಾಕಿ ಸವಿಯಿರಿ
# ದಿವ್ಯ ಮಹೇಶ್
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 08-04-2025 | ಕೆಲವು ಕಡೆ ಅನಿರೀಕ್ಷಿತ ಮಳೆ ಸಾಧ್ಯತೆ |

ಈಗಿನಂತೆ ವಾತಾವರಣದಲ್ಲಿ ಅಧಿಕ ತೇವಾಂಶ ಹಾಗೂ ವಿಪರೀತ ಸೆಕೆಯ ಕಾರಣ ಕರಾವಳಿಯ ಕೆಲವು…

59 minutes ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ.ಉಡುಪಿ ಜಿಲ್ಲೆ 93.90% ರಷ್ಟು ಅತಿ ಹೆಚ್ಚು ಉತ್ತೀರ್ಣರಾಗಿದ್ದರೆ,…

1 hour ago

ಷೇರು ಮಾರುಕಟ್ಟೆಯ ಅಸ್ಥಿರತೆ | ಅಡಿಕೆಯ ಮೇಲೆ ಪರಿಣಾಮವಾಗದಂತೆ ಇರಲಿ ಎಚ್ಚರ |

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಷೇರು ಮಾರುಕಟ್ಟೆ ಹಾಗೂ ಅಡಿಕೆ ಧಾರಣೆಯ ಮೇಲೆ…

1 hour ago

ಪೆಟ್ರೋಲ್,ಡೀಸೆಲ್ ಅಬಕಾರಿ ಸುಂಕ 2 ರೂ. ಹೆಚ್ಚಳ | ಗ್ರಾಹಕರ ಮೇಲೆ ಹೆಚ್ಚಳ ವರ್ಗಾವಣೆ ಇಲ್ಲ

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂಪಾಯಿ ಅಬಕಾರಿ ಸುಂಕ ಏರಿಕೆಯನ್ನು ಗ್ರಾಹಕರ…

5 hours ago

ಧಾರವಾಡ | ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ  ಕ್ರಮವಹಿಸಬೇಕು – ಸಚಿವ ಸಂತೋಷ ಲಾಡ್

ಧಾರವಾಡ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಶುದ್ಧ ಕುಡಿಯುವ ನೀರನ್ನು…

6 hours ago

ರಾಜ್ಯದ ವಿವಿದೆಡೆ ಮಳೆ

ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಿದ್ದು, ಕರಾವಳಿಯಲ್ಲಿ ಒಹಣವೆ ಇತ್ತು. ರಾಜ್ಯದ ಅತಿ ಹೆಚ್ಚು…

6 hours ago