ಇದೊಂದು ಹೊಸದಾದ ಸವಿರುಚಿ. ಹಲಸಿನ ಬೇಳೆ ಬುಡ್ಡಣ್ಣ. ಇದು ಒಂದು ಸಿಹಿ ತಿನಿಸು.
ಬೇಕಾಗುವ ಸಾಮಗ್ರಿಗಳು: ಬೇಳೆ 20 , ಬೆಲ್ಲ 1 ಸಣ್ಣ ಕಪ್, ಕಾಯಿ ತುರಿ 1 ಕಪ್, ಏಲಕ್ಕಿ ಸ್ಪಲ್ಪ, ತುಪ್ಪ.
ಮಾಡುವ ವಿಧಾನ: ಬೇಳೆಯನ್ನು ಸಿಪ್ಪೆ ತೆಗೆದು ಬೇಯಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಬಾಣಲೆ ಬಿಸಿ ಆದಾಗ ರುಬ್ಬಿದ ಬೇಳೆಯನ್ನು ಹಾಕಿ ಬೆಲ್ಲ , ಕಾಯಿತುರಿ ಏಲಕ್ಕಿ ಪುಡಿ ಹಾಕಿ ಕಾಯಿಸುತ್ತಾ ಬನ್ನಿ ಪಾಕ ಗಟ್ಟಿ ಆಗುತ್ತಾ ಬಂದಾಗ ಸ್ಟವ್ ಆಫ್ ಮಾಡಿ. ಆರಲು ಬಿಡಿ. ನಂತರ ಉಂಡೆಗಳನ್ನು ಮಾಡಿ.ಕೈಯಲ್ಲಿ ತಟ್ಟಿ ಕಾದ ತವಾದಲ್ಲಿ ಎರಡೂ ಬದಿ ತುಪ್ಪ ಹಾಕಿ ಫ್ರೈ ಮಾಡಿಕೊಳ್ಳಿ. ರುಚಿಕರವಾದ ಬೇಳೆ ಬುಡ್ಡಣ್ಣ ಸವಿಯಲು ರೆಡಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel