ಬೇಕಾಗುವ ಸಾಮಗ್ರಿಗಳು :
ಬಾದಾಮಿ ಪುಡಿ 2 ಚಮಚ.
ಮೈದಾ 1 ಕಪ್.
ಸಕ್ಕರೆ ಪುಡಿ 3/4 ಕಪ್.
(ಸಿಹಿ ಜಾಸ್ತಿ ಬೇಕಾದ್ರೆ ಸಕ್ಕರೆ ಪುಡಿ ಜಾಸ್ತಿ ಹಾಕಬಹುದು.)
ಬೆಣ್ಣೆ 2 ಚಮಚ.
ಹಾಲು 1/4 ಕಪ್.
ಬಾದಾಮ್ 8 ತುಪ್ಪದಲ್ಲಿ ಹುರಿದು ಕಟ್ ಮಾಡಿ. ಕುಕ್ಕರ್ ಗೆ ಮರಳು ಹಾಕಿ ರಿಂಗ್ ಇಟ್ಟು ಮುಚ್ಚಳ ಮುಚ್ಚಿ. ಸಿಮ್ ಅಲ್ಲಿ ಇಟ್ಟು ಬಿಸಿ ಆಗಲು ಬಿಡಿ.
ಮಾಡುವ ವಿಧಾನ: ಒಂದು ಪಾತ್ರೆಗೆ ಮೈದಾ ಹಿಟ್ಟು, ಬೆಣ್ಣೆ ಹಾಕಿ ಮಿಕ್ಸ್ ಮಾಡಿ. ನಂತರ ಸಕ್ಕರೆ ಪುಡಿ,ಬಾದಾಮ್ ಪುಡಿ, ಹಾಲು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಕೈಯಲ್ಲಿ ಸ್ಪಲ್ಪ ತಟ್ಟಿ ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಇಟ್ಟು ಬೇಯಲು ಬಿಡಿ.
(10 ನಿಮಿಷ ಆದ ನಂತರ ಫೋರ್ಕ್ ನಿಂದ ಎಲ್ಲ ಕುಕ್ಕೀಸ್ ಮೇಲೆ ಚುಚ್ಚಿ ಕೊಳ್ಳಿ). ಮತ್ತೆ ಮುಚ್ಚಳ ಮುಚ್ಚಿ 30 ನಿಮಿಷ ಬೇಯಿಸಿ.
ಈವಾಗ ರುಚಿಕರವಾದ ಕುಕ್ಕೀಸ್ ರೆಡಿ.
# ದಿವ್ಯ ಮಹೇಶ್.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?