ಶಾಲೆಯ ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ ವಿದ್ಯಾರ್ಥಿ – ಪೋಷಕ – ಶಿಕ್ಷಕ ಇವರೆಲ್ಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಂದು ಹೊಸ ಶೈಕ್ಷಣಿಕ ವರ್ಷವು ಹೊಸ ಅವಕಾಶಗಳ ದ್ವಾರವಾಗಿದ್ದು, ಸರಿಯಾದ ತಯಾರಿಯಿಂದ ನಾವು ಅದನ್ನು ಸಾರ್ಥಕಗೊಳಿಸಬಹುದು. ವಿದ್ಯಾರ್ಥಿಗಳು ,ಪೋಷಕರು ಹಾಗೂ ಶಿಕ್ಷಕರು ಈ ಮೂರುತರದ (Triangle) ಸಮನ್ವಯತೆಯ ಪಾಲನೆ ಮೇಲೆ ಯಶಸ್ಸು ಅವಲಂಬಿತವಾಗಿದೆ.
ವಿದ್ಯಾರ್ಥಿಗಳು ಮಾಡಬೇಕಾದ ತಯಾರಿ : ಹೊಸ ಶೈಕ್ಷಣಿಕ ವರ್ಷವು ಹೊಸ ಆರಂಭ. ಹಳೆ ಎಡವಟ್ಟುಗಳನ್ನು ಮರೆತು ಹೊಸ ಉತ್ಸಾಹದಿಂದ ಮುಂದುವರೆಯಬೇಕಾಗಿದೆ ಮತ್ತು ಸಮಯಪಾಲನೆ ಮತ್ತು ವಿಷಯದ ಮೇಲೆ ಗಮನ ಅಭಿವೃದ್ಧಿಪಡಿಸಲು ( focussed ) ದಿನಚರಿಯ ಅಭ್ಯಾಸ ಶುರುಮಾಡಬೇಕಿದೆ . ಸಾಧ್ಯವಾಧಷ್ಟು ಮೊಬೈಲ್ ಅಥವಾ ಟಿವಿ ಬಳಕೆಯನ್ನು ನಿಯಂತ್ರಿಸಿ, ಓದಿಗೆ ತಯಾರಿ ಮಾಡಿಕೊಳ್ಳಬೇಕು. ಹಿಂದಿನ ತರಗತಿಯ ಪಠ್ಯವನ್ನು ಪುನರಾವೃತ್ತಿ ಮಾಡಿ – ಮುಖ್ಯ ಅಂಶಗಳನ್ನು ನೆನಪಿನಲ್ಲಿಡಿ.ಮತ್ತು ಹೊಸ ತರಗತಿಯ ಪಠ್ಯಪುಸ್ತಕಗಳನ್ನು ಪಡೆದು, ಮೇಲಿಂದ ಮೇಲೆ ಅವಲೋಕನ ಮಾಡಿದರೆ ಪಾಠ ಶ್ರವಣಕ್ಕೆ ಆಸಕ್ತಿ ಹುಟ್ಟುತ್ತದೆ. ಸ್ವತಃ ಮಾಡಬೇಕಾದ ಕೆಲಸಗಳ ಪಟ್ಟಿ (TO DO LIST ) ಅಥವಾ ಸ್ಟಡಿ ಪ್ಲ್ಯಾನ್ ಸಿದ್ಧಮಾಡಿಕೊಳ್ಳಿ.
ಶಾಲೆ ಆರಂಭದ ಚೆಕ್‌ಲಿಸ್ಟ್ (Checklist for Parents & Students)
(A) ಶೈಕ್ಷಣಿಕ ಸಾಮಗ್ರಿಗಳು:
(B)ತಯಾರಿ ಹಾಗೂ ವ್ಯವಸ್ಥೆ:
ಪ್ರಾಮಾಣಿಕತೆ, ಶಿಷ್ಟಾಚಾರ ಮತ್ತು ಶಿಸ್ತು ಮಕ್ಕಳಿಗೆ ಶ್ರೇಷ್ಠ ಸಂಸ್ಕಾರ ನೀಡುತ್ತವೆ.
ಪೋಷಕರ ತಯಾರಿ ಮತ್ತು ಪಾತ್ರ
ಶಿಕ್ಷಕರ ಪೂರ್ವಸಿದ್ಧತೆ
ಶಾಲೆಯ ಹೊಸ ವರ್ಷದ ಆರಂಭವು ವಿದ್ಯಾರ್ಥಿಗಳಿಗೆ ಅವಕಾಶಗಳ ಮಹಾಪೂರ , ಪೋಷಕರಿಗೆ ಉಪಸ್ಥಿತಿಯ ಆಧಾರ, ಮತ್ತು ಶಿಕ್ಷಕರಿಗೆ ಪರಿವರ್ತನೆಯ ಶಕ್ತಿಕೇಂದ್ರವಾಗಿದೆ. ಈ ಮೂರು ಕಿಡಿಗೆ ಸಮಾನ ಪ್ರಮಾಣದಲ್ಲಿ ಎಣ್ಣೆ ಹಾಕಿದರೆ ಮಾತ್ರ ವಿದ್ಯೆಯ ದೀಪ ಪ್ರಕಾಶಿಸುತ್ತಿದೆ.
ಎಲ್ಲ ಮಕ್ಕಳ ಶೈಕ್ಷಣಿಕ ಯಾತ್ರೆಯ ಭಾಗವಾಗಲು ನಿಮ್ಮೆಲ್ಲರಿಗೂ ಶುಭವಾಗಲಿ!
ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…
ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು…
ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಜನರಲ್ಲಿ ಹೃದಯದ ವಿಷಯದಲ್ಲಿ ಭಯದ ವಾತಾವರಣ…
ಸುಳ್ಳು ಸುದ್ದಿ ಹರಡುವವರು ಮತ್ತು ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ದ ಸೂಕ್ತ ಕಾನೂನು…
ಬಾಹ್ಯಕಾಶದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹೆಸರುಕಾಳು ಹಾಗೂ ಮೆಂತ್ಯ ಕಾಳುಗಳ ಮೊಳಕೆಯೊಡೆಯುವ ಪ್ರಯೋಗಗಳನ್ನು…