#Seaerosion | ಪ್ರತಿ ಮಳೆಗಾಲದಲ್ಲೂ ಕಾಡುವ ಕಡಲ್ಕೊರೆತ ಸಮಸ್ಯೆ | ತಡೆಗಟ್ಟಲು ಪ್ರಾಕೃತಿಕ ರಕ್ಷಾ ಕವಚ ಯೋಜನೆ ಜಾರಿ

July 12, 2023
11:35 AM
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ, ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಪ್ರಾಕೃತಿಕ ರಕ್ಷಾ ಕವಚ ಯೋಜನೆ ಜಾರಿ

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಅಬ್ಬರಿಸಿ ಬೊಬ್ಬರಿಯಬೇಕಾದ ಕಾಲ ಇದು. ಆದರೆ ಒಂದು ತಿಂಗಳ ನಂತರ ತನ್ನ ವೇಗ ಪಡೆದುಕೊಂಡ ಮುಂಗಾರು ಮಳೆ ಕರಾವಳಿ, ಮಲೆನಾಡಿನಲ್ಲಿ ಕೇವಲ ಒಂದು ವಾರ ಅಬ್ಬರಿಸಿದೆ. ಈಗ ಮಳೆಯ ಅಬ್ಬರವೇನೋ ನಿಂತಿದೆ. ಆದರೆ ಅದರ ಪರಿಣಾಮ ಇನ್ನೂ ನಿಂತಂತೆ ಕಾಣುತ್ತಿಲ್ಲ. ಜಿಲ್ಲೆಯ ಬೈಕಂಪಾಡಿ, ಮೀನಕಳಿ ಹಾಗೂ ಇನ್ನಿತರ ಭಾಗದಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದೆ. ಕರಾವಳಿಯಲ್ಲಿ ಕಡಲ್ಕೊರೆತ ತಡೆಗಟ್ಟಲು ಜಿಲ್ಲಾಡಳಿತ ಪ್ರಾಕೃತಿಕ ರಕ್ಷಾ ಕವಚ ಯೋಜನೆ ಜಾರಿಗೆ ಮುಂದಾಗಿದೆ.

Advertisement

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದೆ. ಇದರಿಂದ ಆಟದ ಮೈದಾನ, ತಾತ್ಕಾಲಿಕವಾಗಿ ಅಳವಡಿಸಿದ್ದ ವೈಟ್ ಸ್ಯಾಂಡ್ ಬ್ಯಾಗ್ ಸಮುದ್ರಪಾಲಾಗಿದೆ. ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಪ್ರಾಕೃತಿಕ ರಕ್ಷಾ ಕವಚ ಯೋಜನೆ ಜಾರಿಗೆ ಮುಂದಾಗಿದೆ. ಈ ಬಗ್ಗೆ ದಕ್ಷಿಣಕನ್ನಡ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ದಿನೇಶ್ ಕುಮಾರ್ ಮಾತನಾಡಿ ರಾಜ್ಯ 320 ಕಿಮೀ ಉದ್ದದ ಕಡಲ ತೀರವನ್ನು ಹೊಂದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಮಂಗಳೂರಿನಲ್ಲಿ‌ ಅನುಷ್ಠಾನ ಮಾಡಿದ್ದೇವೆ. ವರ್ಷದಿಂದ ವರ್ಷಕ್ಕೆ ಕಡಲ್ಕೊರೆತ ಸಮಸ್ಯೆ ಹೆಚ್ಚಾಗಿ ಭೂಮಿ ಸಮುದ್ರದ ಪಾಲಾಗುತ್ತಿದೆ. ಪ್ರಕೃತಿಯ ರೌದ್ರಾವತಾರವನ್ನು ತಣಿಸೋದು ಪ್ರಕೃತಿಗೆ ಮಾತ್ರ ಸಾಧ್ಯ ಎಂದು ಹೇಳಿದರು.

ಎಲ್ಲೆಲ್ಲಿ ಪ್ರಾಕೃತಿಕವಾಗಿ ಗಿಡ, ಮರಗಳು ಬೆಳೆದುಕೊಂಡಿದೆಯೋ ಅಂತಹ ಪ್ರದೇಶಗಳಲ್ಲಿ ಕಡಲ್ಕೊರೆತ ಸಂಭವಿಸುತ್ತಿಲ್ಲ. ಎಲ್ಲೆಲ್ಲಿ ಮರ, ಗಿಡಗಳನ್ನು ನಾಶಮಾಡಿ ಮನೆ, ರಸ್ತೆ ನಿರ್ಮಾಣವಾಗಿದೆ ಅಲ್ಲಿ ಮಾತ್ರ ಕಡಲ್ಕೊರೆತ ಉಂಟಾಗಿದೆ. ಹೀಗಾಗಿ ಈ ಪ್ರಾಕೃತಿಕ ರಕ್ಷಾ ಕವಚ ಕಡಲ್ಕೊರೆತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನೈಸರ್ಗಿಕವಾಗಿ ಬೆಳೆದಿರುವ ರಕ್ಷಾ ಕವಚ ಇರುವಲ್ಲಿಯೂ ಕೊರೆತ ಉಂಟಾಗಲ್ಲ. ಸಮುದ್ರದ ಪಕ್ಕವೇ ಭೂ ಪ್ರದೇಶ ಇದ್ದರೂ ಕಡಲ್ಕೊರೆತ ಉಂಟಾಗಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ಅಧ್ಯಯನ ನಡೆಸಿ ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಕರಾವಳಿಯ ಬೇರೆ ಭಾಗಕ್ಕೂ ಇದನ್ನು ವಿಸ್ತರಣೆ ಮಾಡಬಹುದು. ಕಡಲ್ಕೊರೆತ ತಡೆಯುವ ಜೊತೆ ಹಸಿರು ಪರಿಸರವು ನಿರ್ಮಾಣ ಆಗುತ್ತೆ ಎಂದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”
April 17, 2025
10:44 AM
by: ದ ರೂರಲ್ ಮಿರರ್.ಕಾಂ
ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ
April 17, 2025
5:27 AM
by: ದ ರೂರಲ್ ಮಿರರ್.ಕಾಂ
ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group