Advertisement
ಸುದ್ದಿಗಳು

ಕುಕ್ಕೆಯಲ್ಲಿ ವಿಶೇಷ ಸೇವೆ | ಮೂರು ದಿನಗಳಲ್ಲಿ 489 ಮಂದಿ ಎಡೆಸ್ನಾನ | 141 ಭಕ್ತರಿಂದ ಬ್ರಹ್ಮರಥ ಸೇವೆ |

Share

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಡಿನೆಲ್ಲೆಡೆ ನಾಗದೋಷ ನಿವಾರಣೆಯ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ. ಈ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಉತ್ಸವದ ಸಂದರ್ಭ ಮಾತ್ರಾ ನಡೆಯುವ ವಿಶೇಷ ಸೇವೆಗಳಾದ ಎಡೆಸ್ನಾನ ಹಾಗೂ ಬ್ರಹ್ಮರಥೋತ್ಸವ  ಸೇವೆ ಹಾಗೂ ಬೀದಿ ಮಡೆಸ್ನಾನ ಗಮನ ಸೆಳೆಯುತ್ತದೆ. ಈ ಬಾರಿ ಮೂರು ದಿನಗಳಲ್ಲಿ 489 ಮಂದಿ ಭಕ್ತರಿಂದ ಎಡೆಸ್ನಾನ ಹಾಗೂ 141 ಮಂದಿ ಭಕ್ತರಿಂದ ಬ್ರಹ್ಮರಥ ಸೇವೆ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಹಲವಾರು ವರ್ಷಗಳಿಂದ ವಾರ್ಷಿಕ ಜಾತ್ರಾ ಉತ್ಸವದ ಸಂದರ್ಭ ಮಡೆಸ್ನಾನ ನಡೆಯುತ್ತಿತ್ತು. ಸಂಪ್ರದಾಯಗಳ , ಆಚರಣೆಗಳಲ್ಲಿ ಸಹಜ ಬದಲಾವಣೆಯ ಬಳಿಕ ಎಡೆಸ್ನಾನವು ಜಾರಿಗೆ ಬಂದಿತ್ತು. ದೇವರ ಅನ್ನ ಪ್ರಸಾದವನ್ನು ದೇವಸ್ಥಾನದ ಹೊರಾಂಗಣದಲ್ಲಿ ಇರಿಸಿ ಗೋವುಗಳಿಂದ ಈ ಪ್ರಸಾದವನ್ನು ತಿನ್ನಿಸಿದ ಬಳಿಕ ಭಕ್ತಾದಿಗಳು ಉರುಳುಸೇವೆ ನಡೆಸುತ್ತಾರೆ. ಚಂಪಾಷಷ್ಠಿ ಮಹೋತ್ಸವದ ಮೂರು ದಿನಗಳ ಕಾಲ ಈ ಸೇವೆ ನಡೆಯುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಈ ಸೇವೆ ಸ್ಥಗಿತವಾಗಿತ್ತು. ಈ ಬಾರಿ ಮತ್ತೆ ಆರಂಭಗೊಂಡ ಸೇವೆಯಲ್ಲಿ  ಒಟ್ಟು ಮೂರು ದಿನಗಳ ಕಾಲ 489 ಮಂದಿ ಭಕ್ತರು ಸೇವೆ ನಡಸಿದರು.  ಷಷ್ಠಿ ದಿನವಾದ ಮಂಗಳವಾರ 210 ಮಂದಿ ಎಡೆಸ್ನಾನ ಸೇವೆ ನೆರವೇರಿಸಿದರು.

ಮಂಗಳವಾರ ಬೆಳಗ್ಗೆ 7.05ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನೆರವೇರಿ, ಬ್ರಹ್ಮರಥೋತ್ಸವ ಜರುಗಿತು.141 ಮಂದಿ ಭಕ್ತರು ಬ್ರಹ್ಮರಥ ಸೇವೆ ನೆರವೇರಿಸಿದರು. ಬ್ರಹ್ಮರಥ ಹರಕೆ ಸೇವೆ ಸಲ್ಲಿಸಿದವರಿಗೆ  ಮಹಾಪ್ರಸಾದ ವಿತರಣೆಯಾಗುತ್ತದೆ.

ಲಕ್ಷದೀಪೋತ್ಸವ ಬಳಿಕ ಬೀದಿ ಮಡೆಸ್ನಾನ ನಡೆಯುತ್ತದೆ. ಕುಮಾರಧಾರ ತೀರ್ಥ ಸ್ನಾನದಿಂದ ದೇವಳದ ತನಕ ಸುಮಾರು 2ಕಿ.ಮೀ ದೂರದವರೆಗೆ ಉರುಳುತ್ತಾ ಸಾಗುವ ಅತ್ಯಂತ ಕಠಿಣವಾದ ಹರಕೆ ಸೇವೆ ಬೀದಿಯ ಉರುಳು ಸೇವೆ. ಈ ಸೇವೆ ಕೂಡಾ ಬ್ರಹ್ಮರಥೋತ್ಸವದ ಬಳಿಕ ಕೊನೆಗೊಳ್ಳುತ್ತದೆ. ನೂರಾರು ಮಂದಿ ಈ ಸೇವೆಯಲ್ಲಿ  ತೊಡಗಿಸಿಕೊಳ್ಳುತ್ತಾರೆ.

ಪ್ರತಿಕ್ರಿಯೆ :

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

19 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

2 days ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

3 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago