ಚುನಾವಣೆ ಸಮಯದಲ್ಲಿ ಹಾಗೂ ಅದಕ್ಕೆ ಕೆಲವು ಸಮಯದ ಮೊದಲು ಸಾಮಾಜಿಕ ಚಟುವಟಿಕೆ ನಡೆಸಿ ಟಿಕೆಟ್ ಪಡೆಯುವುದೇ ಸಾಮಾಜಿಕ ಕೆಲಸ ಎಂಬ ವಾತಾವರಣ ಇದೆ. ಆದರೆ ವರ್ಷದ ಹಿಂದೆ ಆರಂಭವಾದ ಪುತ್ತಿಲ ಪರಿವಾರ, ಅದನ್ನು ದಾಟಿ ಸಾಮಾಜಿಕ ಸೇವೆ ನಿರಂತರ ಎಂದು ಸಾರಿದೆ. ಸುಳ್ಯದಲ್ಲಿ ಮನೆ ಹಸ್ತಾಂತರ ಕಾರ್ಯದ ಮೂಲಕ ಗ್ರಾಮೀಣ ಭಾಗದಲ್ಲೂ ಸೇವೆ ಇದೆ ಎನ್ನುವುದನ್ನು ಪುತ್ತಿಲ ಪರಿವಾರ ಮಾಡಿ ತೋರಿಸಿದೆ.
ಕಳೆದ ವರ್ಷ ಪುತ್ತೂರಿನಲ್ಲಿ ಆರಂಭಗೊಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಹಲವು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿದೆ, ಮಾಡುತ್ತಿದೆ. ಹೀಗಾಗಿ ಅನೇಕರು ಸಾಮಾಜಿಕ ಕೆಲಸ ಕಾರ್ಯಗಳ ಆಸಕ್ತರು ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರವನ್ನು ನೆಚ್ಚಿಕೊಂಡಿದ್ದರು. ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಸೇವೆ ನಡೆಸುವ, ಕೆಲಸ ಮಾಡುವ ಅರುಣ್ ಕುಮಾರ್ ಪುತ್ತಿಲ ಅವರು ಹಾಗೂ ಅವರ ನೇತೃತ್ವದ ಪುತ್ತಿಲ ಪರಿವಾರ ಬೆಳವಣಿಗೆ ಆದ ಕಾರಣವೂ ಅದೇ. ಚುನಾವಣೆಗೆ ಸೀಮತಿವಾಗಿ ಕೆಲಸ ಮಾಡದೆ ನಿರಂತರವಾಗಿ ಜನರಿಗೆ ನೆರವಾಗುವುದು ಈ ಪರಿವಾರದ ವಿಶೇಷತೆ. ಇದೀಗ ಸುಳ್ಯದಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಕಡೆಗೂ ತಮ್ಮ ಸೇವೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯತ್ ಸಹಕಾರದಲ್ಲಿ ಸುಳ್ಯದ ಪೈಚಾರಿನಲ್ಲಿ ಸುಮತಿ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆ ‘ಸೇವಾಶ್ರಯ’ದ ಹಸ್ತಾಂತರ ಕಾರ್ಯಕ್ರಮ ಈಚೆಗೆ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಪನೆಯಂತೆ ಸೇವೆ ಎಂಬ ಯಜ್ಞದಲ್ಲಿ ಸವಿದೆಯಂತೆ ಉರಿದು ಸಮಾಜದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವುದೇ ನಮ್ಮ ಜೀವನದ ಭಾಗವಾಗಿರಬೇಕು. ಈ ಮೂಲಕ ನಮ್ಮ ಜೀವನ ಸಾರ್ಥಕವಾಗಿಸಬೇಕು ಎಂದರು.
ಸೇವೆಯ ಕಲ್ಪನೆಯ ಮೂಲಕ ಕಷ್ಟದಲ್ಲಿ ಇರುವವರಿಗೆ ಸಹಾಯ ನೀಡಬೇಕೆಂಬ ಕಾರಣದಿಂದ ಎಲ್ಲರ ಸಹಕಾರದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದೆ. ಅಶಕ್ತರ, ಶೋಷಿತರ ಪರವಾಗಿ ನಿಂತು ಅವರ ಸಂತೋಷ ನಮ್ಮಸಂತೋಷ ಎಂದು ತಿಳಿದು ಸೇವೆ ಮಾಡಿದಾಗ ಬದುಕಿನಲ್ಲಿ ನೆಮ್ಮದಿಯನ್ನು ದೊರೆಯಲು ಸಾಧ್ಯ ಈ ರೀತಿಯ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಮತ್ತು ಸಾರ್ಥಕತೆ ಪಡೆಯಲು ಸಾಧ್ಯ ಎಂದ ಅವರು ಮನುಷ್ಯತ್ವ, ಹೃದಯ ಶ್ರೀಮಂತಿಕೆ ಎಲ್ಲರಲ್ಲಿ ಇರಲಿ, ಆ ಮೂಲಕ ಹಿರಿಯರ ಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು.ಸೂರಿಲ್ಲದವರಿಗೆ ಸೂರು ಒದಗಿಸಿ ಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಪ್ರಯತ್ನ ಇನ್ನಷ್ಟು ಆಗಬೇಕಾಗಿದೆ. ಆ ಮೂಲಕ ಎಲ್ಲರ ಬಾಳಿನಲ್ಲಿಯೂ ಪ್ರೀತಿ, ವಿಶ್ವಾಸ, ಸಂತಸ ನೆಲೆಯಾಗಲಿ ಎಂದು ಅವರು ಆಶಿಸಿದರು.
ಮನೆಯ ಕೀಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥ ಹಸ್ತಾಂತರ ಮಾಡಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ , ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು , ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಡಾ.ಸಾಯಿರಾಂ, ಪುತ್ತಿಲ ಪರಿವಾರ ನಗರ ಸೇವಾ ಟ್ರಸ್ಟ್ ನ ಅಧ್ಯಕ್ಷ ಅನಿಲ್ ತೆಂಕಿಲ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕಾರ್ಯದರ್ಶಿ ರವಿಕುಮಾರ್ ರೈ ತಿಂಗಳಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸುಳ್ಯ ತಾಲೂಕು ಅಧ್ಯಕ್ಷ ದಿನೇಶ್ ಅಡ್ಯಾರ್ , ಕಾರ್ಯದರ್ಶಿ ಸುಧಾಕರ ಬಾಟೋಳಿ, ಸದಸ್ಯರಾದ ಸಾತ್ವಿಕ್, ಪುಷ್ಪಾದರ, ಪದ್ಮನಾಭ ಬೀಡು, ಸುಕೇಶ್ ಅಡ್ಕಾರ್ , ಸುನಿಲ್ ಕೇರ್ಪಳ, ಸತೀಶ್ ಕೆಮನಬಳ್ಳಿ ವಸಂತ ನಾಯಕ್ ಅಜೇರು, ವಿನಯಚಂದ್ರ ಮೊದಲಾದವರಿದ್ದರು.
ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…