Advertisement
ಪ್ರಮುಖ

ದೀಪಾವಳಿ ಹೀಗೆ ಆಚರಿಸೋಣ | ಈ ದೀಪಗಳಿಂದ ದೀಪ ಹಚ್ಚೋಣ |

Share

ದೀಪಗಳ ಹಬ್ಬ ದೀಪಾವಳಿಗೆ ಹತ್ತಿರ ಬಂದಿದೆ.ಕೆಲವೇ ದಿನಗಳಲ್ಲಿ ಮನೆ ಮನೆಗಳಲ್ಲಿ ದೀಪಾವಳಿಯ ಹಣತೆ ಬೆಳಗಲಿದೆ. ದೀಪದಿಂದ ದೀಪ ಹಚ್ಚುವ ವೇಳೆ ಒಂಚೂರು ಸಾಮಾಜಿಕ ಕಳಕಳಿ, ಕಾಳಜಿ ಇರಲಿ. ಅದಕ್ಕಾಗಿಯೇ ಈ ಪುಟ್ಟ “ದೀಪ”ಗಳು ತಯಾರಿಸಿದ ಹಣತೆಯನ್ನು ಬೆಳಗೋಣ.…..ಮುಂದೆ ಓದಿ….

ದೀಪಾವಳಿ ಹಬ್ಬದ ವೇಳೆ ಹಲವಾರು ಮಂದಿ ಹಣತೆಗಳ ಸಾಲನ್ನು ಇರಿಸಿ ಸಂಭ್ರಮಿಸುತ್ತಾರೆ. ಇಂತಹ ಸಂಭ್ರಮದಲ್ಲಿ ಒಂಚೂರು ಕಾಳಜಿ, ಸಾಮಾಜಿಕ ಕಳಕಳಿ ಇದ್ದರೆ..?. ನಿಜ, ಮಂಗಳೂರಿನ  ಚೇತನ ಬಾಲ ವಿಕಾಸ ಕೇಂದ್ರದ  ವಿಶೇಷಚೇತನ ಮಕ್ಕಳು ತಾವೇ ಸ್ವತ:  ಬಣ್ಣ ಬಳಿದು ಹಣತೆಗಳನ್ನು ಸಿದ್ಧಪಡಿಸುವ ಮೂಲಕ  ಮಾದರಿಯಾಗಿದ್ದಾರೆ. ಆ ದೀಪಗಳನ್ನು ಕೊಂಡುಕೊಳ್ಳುವ ಮೂಲಕ  ಆ ಮಕ್ಕಳ ಕುಶಲತೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ.…..ಮುಂದೆ ಓದಿ….

ಮಂಗಳೂರು ನಗರದ ಕೊಡಿಯಾಲ್ ಬೈಲ್ ಸೇವಾಭಾರತಿ ಸಂಸ್ಥೆ ನಿರ್ವಹಿಸುತ್ತಿರುವ ಚೇತನ ಬಾಲ ವಿಕಾಸ ಕೇಂದ್ರದ ವಿಶೇಷಚೇತನ ಮಕ್ಕಳು ಬಣ್ಣದ ಬಣ್ಣದ ಹಣತೆಗಳನ್ನು ಸಿದ್ಧಪಡಿಸುತ್ತಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಗುರುಗಳು ಹಾಗೂ ಮಾರ್ಗದರ್ಶಕರ ಸಹಾಯದಿಂದ ಈ ಮಕ್ಕಳು ಮಣ್ಣಿನ ದೀಪಗಳಿಗೆ ತಮ್ಮಿಷ್ಟದ ಬಣ್ಣಗಳನ್ನು ಬಳಿದು ಹಣತೆಗಳನ್ನು ತಯಾರಿಸುತ್ತಾರೆ. ಹೇಗೂ ದೀಪಾವಳಿಯ ವೇಳೆ ಹಣತೆ ಖರೀದಿ ಮಾಡುವ ವೇಳೆ ಒಂಚೂರು ಈ ಮುಗ್ದ ಮಕ್ಕಳ ಪ್ರೀತಿಯ ಬೆಲೆ ನೀಡಿದರೆ..? ಈ ಬಗ್ಗೆ ಯೋಚಿಸಿ. ಈ ಮುಗ್ದ ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ  ಹಣತೆಗಳನ್ನು ಖರೀದಿಸುವ ಮೂಲಕ ವಿಶೇಷಚೇತನ ಮಕ್ಕಳನ್ನು ಪ್ರೋತ್ಸಾಹಿಸಿದಂತಾಗುತ್ತದೆ.…..ಮುಂದೆ ಓದಿ….

Advertisement

ಈ ಕೇಂದ್ರದಲ್ಲಿ 25 ವರ್ಷ ಮೇಲ್ಪಟ್ಟ ಸುಮಾರು 30 ವಿಶೇಷಚೇತನ ಮಕ್ಕಳಿದ್ದು, ಅವರು ಹಣತೆಗಳಿಗೆ ನಾಜೂಕಾಗಿ ಬಣ್ಣ ಬಳಿಯುತ್ತಾರೆ. ಅವರು ತಯಾರಿಸುವ ಉತ್ಪನ್ನಗಳಿಗೆ ಎಲ್ಲೆಲ್ಲೂ ಬೇಡಿಕೆ ಇದೆ. ಮುಂಬೈನಿಂದ ಮಣ್ಣಿನ ಹಣತೆಗಳನ್ನು ತಂದು ಅವುಗಳಿಗೆ ಬಣ್ಣ ಬಳಿದು ವಿವಿಧ ಚಿತ್ತಾರ ಮೂಡಿಸಲಾಗುತ್ತದೆ. ತಾವರೆ, ತುಳಸಿಕಟ್ಟೆ, ಮಾವು ಇತ್ಯಾದಿ ಶೈಲಿಯಲ್ಲಿ ಹಣತೆಗಳು ಇಲ್ಲಿ ಲಭ್ಯ. ಓರ್ವ ವಿಶೇಷಚೇತನ ವಿದ್ಯಾರ್ಥಿ ದಿನವೊಂದಕ್ಕೆ 25 ಹಣತೆಗಳನ್ನು ಶೃಂಗರಿಸಬಲ್ಲರು.

ಈ ದೇಶದ ಪ್ರಧಾನಿಗಳ ಕನಸಿನಂತೆ, ಕೌಶಲ್ಯಾಭಿವೃದ್ಧಿ, ಸ್ಟಾರ್ಟ್ಅಪ್, ಆತ್ಮನಿರ್ಭರ ಭಾರತ ಎನ್ನುವ ಮಾತಿನಿಂದ ಪ್ರೇರಣೆ ಪಡೆದು ನಮ್ಮ ಶಾಲೆಯ ವಿಶೇಷ ಸಾಮರ್ಥ್ಯದ ಮಕ್ಕಳ ಪ್ರತಿಭೆ ಹೊರಹಾಕಲು ವಿವಿಧ ಕಾರ್ಯಕ್ರಮ ಆಯೋಜಿಸುತ್ತೇವೆ, ಈ ಬಾರಿ ನಮ್ಮ ಮಕ್ಕಳೇ ಹಣತೆಗಳಿಗೆ ಬಣ್ಣ ಹಚ್ಚಿ ದೀಪಾವಳಿ ಆಚರಿಸುತ್ತಿದ್ದಾರೆ‌ ಎಂದು ಚೇತನ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಭಟ್ ಹೇಳುತ್ತಾರೆ.…..ಮುಂದೆ ಓದಿ….

Advertisement

ಮೊದಲು ಮಕ್ಕಳಿಗೆ ತರಬೇತಿ ಇರುತ್ತದೆ, ಯಾವ ಮಗು ಏನು ಮಾಡುತ್ತದೆ ಎನ್ನುವುದನ್ನು ಅವರ ಜೊತೆ ಕೆಲಸ ಮಾಡುತ್ತಾ ನೋಡಿಕೊಂಡು ನಂತರ ಬಣ್ಣ ಹಚ್ಚುವುದು ಇತ್ಯಾದಿ ಕೆಲಸ ನೀಡಲಾಗುತ್ತದೆ. ಆಗಸ್ಟ್‌ ತಿಂಗಳಿನಿಂದ ಈ ಕೆಲಸ ಆರಂಭವಾಗುತ್ತದೆ. ಹಣತೆ ಹಾಗೂ ಕ್ಯಾಂಡಲ್‌ ಕೆಲವು ವರ್ಷದ ಹಿಂದೆಯೇ ಮಾಡುತ್ತಿದ್ದರು. ಆದರೆ ಈಚೆಗೆ ಹಣತೆಗೆ ಬೇಡಿಕೆ ಇರುವುದರಿಂದ ಈಗ ಹಣತೆಗೇ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ಶಾಲೆ ಮಕ್ಕಳು ಪೇಪರ್ ಬ್ಯಾಗ್ ತಯಾರಿಕೆ, ಮಣ್ಣಿನ ದೀಪಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಾರೆ. ಈ ಹಣತೆಗಳಿಗೆ ಬೇಡಿಕೆಯೂ ಇದ್ದು ಹೊರರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳುತ್ತಾರೆ ಸಂಸ್ಥೆಯ ಶಿಕ್ಷಕಿ ಮೀನಾಕ್ಷಿ.

ಚೇತನ ಸಂಸ್ಥೆಯ ಮಕ್ಕಳು ದೀಪಾವಳಿಗೆ ಬಣ್ಣ ಬಣ್ಣದ ಹಣತೆಗಳನ್ನು ರಚಿಸಿದ್ದು, ಇದು ಅವರ ಬಾಳಿನಲ್ಲೂ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತಾಗಬೇಕು ಎಂಬುದು ನಮ್ಮ ಅಭಿಲಾಷೆ ಎನ್ನುತ್ತಾರೆ ಪೋಷಕರಾದ ಲಕ್ಷ್ಮೀ ಪ್ರಭು.

ವಿಶೇಷ ಚೇತನ ಮಕ್ಕಳು  ತಯಾರಿಸಿದ ಈ ಹಣತೆಯನ್ನು ಖರೀದಿ ಮಾಡುವ ಮೂಲಕ ಮಕ್ಕಳಿಗೂ , ಮಕ್ಕಳ ಶ್ರಮಕ್ಕೂ ಬೆಲೆ ನೀಡಿದಂತಾಗುತ್ತದೆ. ಅದಲ್ಲದೆ, ದೀಪಾವಳಿಯೂ ಒಂದಷ್ಟು ಮಂದಿಗೆ ಬೆಳಕು ನೀಡಲು ಸಾಧ್ಯವಾಗುತ್ತದೆ.

ಸಂಪರ್ಕ : 8867875294

ನಿಮ್ಮ ಅಭಿಪ್ರಾಯ-ಶುಭಾಶಯ ಇಲ್ಲಿ ಹೇಳಿ…

Advertisement

The special children at Chetana BalaVikas Kendra, managed by Sevabharati organization, Kodiyalbail  in Mangalore city, are creating and selling colored clay lamps at affordable prices. With the assistance of their teachers and mentors, these children paint clay lamps in their preferred colors and produce the clay lamps. Consider the impact on these innocent children when purchasing  clay lamps during Dipavali. Imagine the positive influence on these young minds when they receive lovingly crafted clay lamps as gifts. diwali 2024

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

15 hours ago

ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ

ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ…

21 hours ago

ಚಳಿಗಾಲದಲ್ಲಿ ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ಬೇಡ- ಎಚ್ಚರಿಕೆ ಇರಲಿ

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ…

21 hours ago

ಮಹಿಳೆಯರಿಗಾಗಿ ಉಚಿತ ಆರಿ ವರ್ಕ್ಸ್ ತರಬೇತಿ

ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್…

21 hours ago

ಮೊಟ್ಟೆಯಲ್ಲಿ ಅಪಾಯಕಾರಿ ಕ್ಯಾನ್ಸರ್ ಅಂಶ ಪತ್ತೆ ಎಂಬ ಊಹಪೋಹಗಳಿಗೆ ಬ್ರೇಕ್

ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ವಾಗಿದ್ದು, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡುತ್ತಿದ್ದರು.…

21 hours ago

ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ಕಡಿಮೆ ಬಡ್ಡಿಯಲಿ ಸಾಲ ಪಡೆಯಿರಿ

ಹಣದ ಅವಶ್ಯಕತೆಯಿರುವ ಎಲ್ಲರೂ ಬ್ಯಾಂಕ್ ಗಳಲ್ಲಿ ಸಾಲಕ್ಕೆ ಮೊರೆ ಹೋಗಿ ಅಧಿಕ ಬಡ್ಡಿಯನ್ನು…

21 hours ago