ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ, ಹಣ್ಣು ಸಂಸ್ಕರಣೆ ಹಾಗು ಮೌಲ್ಯವರ್ಧನೆಗೆ, ಸಾಂಪ್ರದಾಯಿಕ ಹಣ್ಣು, ಅಡುಗೆ, ಆಹಾರ, ಅದರ ಜತೆಗೆ ಸಮಗ್ರ ಕೃಷಿ ಉದ್ಯಮಶೀಲತೆಗೆ(Business) ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶದಿಂದ ನವತೇಜ, ಪುತ್ತೂರು(Puttur) ಸ್ಥಳೀಯ ಪ್ರಗತಿಪರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಾ ಇರುವ ಹಲಸು ಹಣ್ಣು ಮೇಳದ(Jack Fruit Mela) ಏಳನೇ ಆವೃತ್ತಿ ಇದೇ ಮೇ ತಿಂಗಳ 24-25-26 ರಂದು ಪುತ್ತೂರಿನ ಜೈನ ಭವನದಲ್ಲಿ ನಡೆಯಲಿದೆ.
ಈ ಮೂರು ದಿನಗಳ ಹಣ್ಣು ಮೇಳದಲ್ಲಿ ವಿವಿಧ ಹಣ್ಣುಗಳ ಗಿಡಗಳು, ಪ್ರಾದೇಶಿಕ ಹಾಗು ದೇಸಿ ವಿದೇಶಿ ಹಣ್ಣುಗಳ ಪ್ರದರ್ಶನ ಹಾಗು ಮಾರಾಟ, ಹಣ್ಣು ಹಾಗು ಕೃಷಿ ಉದ್ಯಮ, ಸ್ವಾದಿಷ್ಟ ಆಹಾರ ಮೇಳ ಹೀಗೆ ಸುಮಾರು 60 ವಿವಿಧ ಮಳಿಗೆಗಳು ಇರಲಿವೆ. ಸೀಮಿತ ಸ್ಥಳ, ಉತ್ತಮ ವ್ಯವಸ್ಥೆ ಎರಡನ್ನೂ ಗಮನ ಇಟ್ಟುಕೊಂಡು ನಿಯಮಿತ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಉದ್ದೇಶ ಆಧಾರದಲ್ಲಿ ಹಲಸು – ಹಣ್ಣು – ಕೃಷಿ – ಆಹಾರ ಸಂಬಂಧ ಉದ್ಯಮ ಪ್ರಸ್ತುತಿಗಳಿಗೆ ಪ್ರಾಶಸ್ತ್ಯ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ.
ಈಗಾಗಲೇ ಹಂತ ಹಂತವಾಗಿ ಸ್ಥಳೀಯ ಸಮುದಾಯದಲ್ಲಿ ಉತ್ತಮ ಪ್ರಚಾರ ಪಡೆಯುತ್ತಾ, ಸಾರ್ವಜನಿಕರ ಪ್ರೋತ್ಸಾಹ ಹೆಚ್ಚುತ್ತಾ ಬೆಳೆದಿರುವ ಹಲಸು ಹಣ್ಣು ಮೇಳಕ್ಕೆ ಈ ವರ್ಷ ಇನ್ನೂ ಉತ್ತಮ ರೀತಿಯ ಸಾರ್ವಜನಿಕ ಸ್ಪಂದನೆ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಅದಕ್ಕೆ ಪೂರಕ ಸಿದ್ಧತೆ, ಪ್ರಚಾರ ಮಾಡುತ್ತಾ ಇದ್ದೇವೆ. ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಮಳಿಗೆಗಳ ಮಾಹಿತಿ ಹಾಗು ಖಚಿತ ಮಾಡುವ ಬಗ್ಗೆ ಕೂಡಲೇ ಸುಹಾಸ್ ಮರಿಕೆ 948-053-5708 ಅವರನ್ನು ಸಂಪರ್ಕಿಸಬೇಕು ಎಂದು ವಿನಂತಿ.
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…
ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ…
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದಲ್ಲಿ 77.144…
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಿವಿಧ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಾಗಿತ್ತು. ವಿವಿಧ ಚಿತ್ರಕಲಾವಿದರ…
ಕೋವಿಡ್ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಐಸಿಎಂಆರ್ ಹಾಗೂ…