ಉತ್ತರ ಭಾರತ, ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಜನ ಪರದಾಡುತ್ತಿದ್ರೆ, ನಮ್ಮ ಕರ್ನಾಕಟದ ಉತ್ತರ ಭಾಗದಲ್ಲಿ ಮಳೆ ಇಲ್ಲದೆ ಜನ ಪರಿತಪಿಸುವಂತಾಗಿದೆ. ತಾವು ಬಿತ್ತಿದ ಬೆಳೆ ಕಾಪಾಡಿಕೊಳ್ಳಲು ಕೃತಕ ನೀರಿನ ಪರ್ಯಾಯ ಕಂಡುಕೊಳ್ಳಬೇಕಾಗಿದೆ. ಬಿಸಿಲುನಾಡು ರಾಯಚೂರಿನಲ್ಲಿ ಬರದ ಛಾಯೆ ಆವರಿಸಿದೆ. ಮುಂಗಾರು #Mansoon ನಂಬಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಕೈ ಕೊಟ್ಟ ಹಿನ್ನೆಲೆ ಬೆಳೆ ಒಣಗಿ ಹೋಗ್ತಿವೆ. ಬೆಳೆ ಹಾಳಾಗುವ ಭಯ ರೈತರಲ್ಲಿ#Farmers ಶುರುವಾಗಿದೆ. ಇದೇ ಕಾರಣಕ್ಕೆ ಕಷ್ಟ ಪಟ್ಟು ಬೆಳೆದ ಬೆಳೆ ಕಾಪಾಡಲು ರೈತಾಪಿ ಜನ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಸಿದ್ದಾರೆಡ್ಡಿ ಅನ್ನೋ ರೈತ ತಮ್ಮ 15 ಎಕರೆ ಪ್ರದೇಶದಲ್ಲಿ ಹತ್ತಿ ಗಿಡಗಳ ಬೆಳೆದಿದ್ದಾರೆ. ಮಳೆ ಬಾರದ ಹಿನ್ನೆಲೆ ಹತ್ತಿ ಗಿಡಗಳಿಗೆ ಕೃತಕವಾಗಿ ನೀರು ಉಣಿಸೊ ಕೆಲಸ ಮಾಡಬೇಕಾಗಿದೆ. ಈ ಭಾಗದಲ್ಲಿ ನೀರಿಲ್ಲದ ಹಿನ್ನೆಲೆ ಸಾವಿರಾರು ರೂ ಖರ್ಚು ಮಾಡಿ ಒಂದು ಟ್ಯಾಂಕರ್ ನೀರನ್ನ ತಂದು ಹತ್ತಿ ಗಿಡಗಳಿಗೆ ನೀರು ಉಣಿಸಲಾಗ್ತಿದೆ. ಒಂದು ಎಕರೆಗೆ 10-15 ಆಳುಗಳ ಬೇಕೇಬೇಕು. ಪ್ರತಿ ಆಳಿಗೆ ತಲಾ 400 ನಂತೆ 15 ಆಳುಗಳ ಮೂಲಕ ಟ್ಯಾಂಕರ್ ನಿಂದ ನೀರು ತಂದು ತಂಬಿಗೆಗಳ ಮೂಲಕ 15 ಎಕರೆ ಹೊಲದಲ್ಲಿ ಒಂದೊಂದು ಗಿಡಕ್ಕೂ ನೀರು ಉಣಿಸಲಾಗ್ತಿದೆ. ಒಂದು ಹತ್ತಿ ಗಿಡಕ್ಕೆ ಅರ್ಧ ತಂಬಿಗೆಯಷ್ಟು ನೀರನ್ನ ಹಾಕೋ ಮೂಲಕ ಬೆಳೆ ರಕ್ಷಣೆಗೆ ರೈತ ಸಿದ್ದಾರೆಡ್ಡಿ ಮುಂದಾಗಿದ್ದಾರೆ. ಹೀಗೆ ಅನಿವಾರ್ಯವಾಗಿ ನೀರನ್ನ ಉಣಿಸಬೇಕಿದೆ. ಇದಕ್ಕೆ ಎಕರೆಗೆ ಸರಿಸುಮಾರು ನಾಲ್ಕೈದು ಸಾವಿರ ಖರ್ಚಾಗತ್ತೆ. ಈ ಬಗ್ಗೆ ಹೊಸ ಸರ್ಕಾರ ರೈತರ ಕಾಳಜಿ ಮಾಡಬೇಕಿದೆ ಎಂದು ರೈತರು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.
ಬರೀ ಇದಷ್ಟೇ ಅಲ್ಲ ಅನೇಕ ಕಡೆ ಮಳೆಯಿಲ್ಲದ ಹಿನ್ನೆಲೆ ಬಿತ್ತನೆ ಮಾಡಲಾಗಿದ್ದ ಹತ್ತಿ ಬೀಜ ಮೊಳಕೆಯೊಡೆದಿಲ್ಲ. ಮಣ್ಣಲ್ಲೇ ನಾಶವಾಗಿವೆ. ಹೀಗಾಗಿ ಇದೇ ಕೂಲಿ ಆಳುಗಳ ಮೂಲಕ ಎಲ್ಲೆಲ್ಲಿ ಹತ್ತಿ ಬೀಜ ಮೊಳಕೆಯೊಡೆದಿಲ್ವೋ ಅಲ್ಲಲ್ಲಿ ಹೊಸ ಬೀಜಗಳನ್ನ ಹಾಕೋ ಮೂಲಕ ನಾಟಿ ಮಾಡಲಾಗ್ತಿದೆ. ಹೀಗೆ ಮಳೆರಾಯ ಕೈಕೊಟ್ಟ ಹಿನ್ನೆಲೆ ರೈತರು ಕಂಗಾಲಾಗಿದ್ದು ಹೆಚ್ಚುವರಿ ಖರ್ಚು ಮಾಡಿ ಹತ್ತಿ ಗಿಡಗಳಿಗೆ ಕೃತಕವಾಗಿ ನೀರನ್ನ ಉಣಿಸುತ್ತಿದ್ದಾರೆ. ಆದ್ರೆ ಇದಿರಂದ ಒಳ್ಳೆ ಬೆಳೆ ಬರಬಹುದು ಇಲ್ಲಾ ಬಾರದೆಯೂ ಇರಬಹುದು ಅಂತ ದೇವರ ಮೇಲೆ ಭಾರ ಹಾಕಿ ಕೂತಿದ್ದಾರೆ ರೈತರು.
(ಕೃಪೆ : ಅಂತರ್ಜಾಲ)
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…