Advertisement
ಪ್ರಮುಖ

#HeavyRain | ಹಿಮಾಚಲದಲ್ಲಿ ಭಾರೀ ಮಳೆ, ಹಿಮಪಾತ | 20 ಮಂದಿ ಬಲಿ : ಲಡಾಕ್‌ನಲ್ಲಿ ಬೆಂಗಳೂರಿಗರು ಲಾಕ್ |

Share

ಉತ್ತರಭಾರತದಲ್ಲಿ ಸುರಿಯುತ್ತಿರುವ  ಭಾರೀ ಮಳೆ ಹಾಗೂ ಹಿಮಪಾತ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  ಹಿಮಾಚಲ ಪ್ರದೇಶದಲ್ಲಿ #HimachalPradesh ಪ್ರವಾಹದ# Flood ಸ್ಥಿತಿ ಉಂಟಾಗಿದೆ. ಇದೇ ವೇಳೆ ಲಡಾಕ್‌ #Ladakh ನಲ್ಲಿ ಬೆಂಗಳೂರಿಗರು #Bengaluru ಸಿಲುಕಿಕೊಂಡಿದ್ದಾರೆ. ಲಡಾಕ್‌ನ ರಾಷ್ಟ್ರೀಯ ಹೆದ್ದಾರಿಗಳು ಭೂ ಕುಸಿತವಾಗಿದ್ದು, ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಧುಮ್ಮಿಕ್ಕುತ್ತಿರುವ ನದಿಗಳಲ್ಲಿ ಸೇತುವೆ, ಮನೆಗಳು ಕೊಚ್ಚಿಕೊಂಡು ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಲನ್, ಶಿಮ್ಲಾ, ಸಿರ್ಮೌರ್, ಕುಲು, ಮಂಡಿ, ಕಿನ್ನೌರ್ ಮತ್ತು ಲಾಹೌಲ್‌ನಲ್ಲಿ ಮುಂದಿನ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಈ 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.ಇನ್ನುಳಿದಂತೆ ಉನಾ, ಹಮೀರ್‌ಪುರ, ಕಾಂಗ್ರಾ ಹಾಗೂ ಚಂಬಾದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಾತ್ರವಲ್ಲದೇ ಮಂಡಿ, ಕಿನ್ನೌರ್ ಹಾಗೂ ಲಾಹೌಲ್ ಭಾಗದಲ್ಲಿ ಹಠಾತ್ ಪ್ರವಾಹ ಎಚ್ಚರಿಕೆಯನ್ನು ನೀಡಲಾಗಿದೆ. 

ಹಿಮಾಚಲದಲ್ಲಿ ಭಾರೀ ಮಳೆಗೆ ಈಗಾಗಲೇ 12ಕ್ಕೂ ಹೆಚ್ಚು ಪ್ರಮುಖ ಸೇತುವೆಗಳೇ ಹಾನಿಗೊಳಗಾಗಿವೆ. ಭೂಕುಸಿತ, ವಿದ್ಯುತ್ ವ್ಯತ್ಯಯ, ರಸ್ತೆಗಳಿಗೂ ಹಾನಿಯಾಗಿದೆ. ರಾಜ್ಯದಲ್ಲಿ ಕಳೆದ 48 ಗಂಟೆಗಳಲ್ಲಿ ವರುಣನ ಅಬ್ಬರಕ್ಕೆ 20 ಮಂದಿ ಬಲಿಯಾಗಿದ್ದಾರೆ.  ಲಡಾಕ್‌ನಲ್ಲಿ ವಿಮಾನಗಳ ಹಾರಾಟವೂ ರದ್ದಾಗಿದೆ. ವಿಮಾನ ಸಿಗದೆ ಕಳೆದ ಎರಡು ದಿನಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ವೈದ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಭಾರೀ ಮಳೆ, ದಟ್ಟ ಮಂಜು, ವಿಪರೀತ ಚಳಿಯಲ್ಲಿ ನಡುಗುತ್ತಲೇ ಬೆಂಗಳೂರಿಗರು ವೀಡಿಯೋ ಹಂಚಿಕೊಂಡಿದ್ದಾರೆ. ಹೇಗಾದ್ರೂ ಮಾಡಿ ಬೆಂಗಳೂರಿಗೆ ಕರೆಸಿಕೊಳ್ಳಿ. ತುಂಬಾ ಕಷ್ಟ ಆಗ್ತಿದೆ. ದಯವಿಟ್ಟು ಬೆಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ವಿಮಾನಗಳ ಹಾರಾಟ ಸ್ಥಗಿತಗೊಂಡ ಹಿನ್ನೆಲೆ ಏರ್‌ಪೋರ್ಟ್‌ನಲ್ಲಿ ಜನರ ದಂಡೇ ನೆರೆದಿದೆ. ನಿರಂತರ ಮಳೆಗೆ ಆರೋಗ್ಯ ಕೈಕೊಡ್ತಿದೆ. ಇಲ್ಲಿ ಇನ್ನೂ ಸುಮಾರು ಕನ್ನಡಿಗರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಲ್ಲಿನ ಪರಿಸ್ಥಿತಿಯನ್ನ ಬೆಂಗಳೂರು ಮೂಲದ ವೈದ್ಯರು ಬಿಚ್ಚಿಟ್ಟಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

9 hours ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

21 hours ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

21 hours ago

ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿರುವುದರಿಂದ ಈರುಳ್ಳಿ,…

22 hours ago

ಗದಗ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಆರಂಭ – ರಿಯಾಯಿತಿ ದರದಲ್ಲಿ ಕಡಲೆ, ಜೋಳ, ಶೇಂಗಾ ಬೀಜ ಲಭ್ಯ

ಗದಗ ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಹಂಗಾಮು ಆರಂಭವಾಗಿದ್ದು, ಕಡಲೆ, ಜೋಳ, ಶೇಂಗಾ…

22 hours ago

ಬೆಳಗಾವಿ ರೈತರಿಗೆ ಸಾಲ ಮರುಪಾವತಿಯಲ್ಲಿ ಪರಿಹಾರ ಸಿಗುತ್ತಾ?

ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮರುರಚನೆ ಮಾಡಿ, 12…

22 hours ago