ಪತ್ರಿಕಾ ಜಾಹೀರಾತು ಬಗ್ಗೆ ತನ್ನ ಹೇಳಿಕೆಯನ್ನು ಮಾಧ್ಯಮವೊಂದು ತಿರುಚಿದೆ. ಪತ್ರಿಕಾ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್ ಹಾಕುತ್ತೇವೆ ಎಂದು ಹೇಳುವುದು ಸರಿಯಲ್ಲ. ಹೀಗಾದರೆ ಸಾಮಾನ್ಯ ಜನರ ಸುದ್ದಿಗಳು ಆದ್ಯತೆ ನೆಲೆಯಲ್ಲಿ ಬರುವುದು ಹೇಗೆ. ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್ ಎನ್ನುವುದು ಕೂಡಾ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ ಎಂಬುದು ನನ್ನ ನಿಲುವಾಗಿದೆ ಎಂದು ದೇವಚಳ್ಳ ಗ್ರಾಪಂ ಸದಸ್ಯ ಶೈಲೇಶ್ ಅಂಬೆಕಲ್ಲು ಹೇಳಿದ್ದಾರೆ.
ಜಾಹೀರಾತು ಸಿಗದೆ ಪತ್ರಿಕೆಗಳು ನಡೆಯಲು ಸಾಧ್ಯವಿಲ್ಲ ಎಂಬ ಕನಿಷ್ಟ ಜ್ಞಾನವೂ ನನಗೆ ಇದೆ. ಒಂದು ಪತ್ರಿಕೆ ಹೊರತುಪಡಿಸಿ ಉಳಿದ ಯಾವ ಪತ್ರಿಕೆಗಳೂ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್ ಹಾಕುತ್ತೇವೆ ಎಂದು ಹೇಳುವುದಿಲ್ಲ. ಜಾಹೀರಾತು ಮೂಲಗಳು ಕೂಡಾ ಭ್ರಷ್ಟಾಚಾರ ರಹಿತವಾಗಿದ್ದರೆ ಮಾತ್ರವೇ ನಿಜವಾದ ಉದ್ದೇಶ ಸಾಕಾರವಾಗಬಹುದು. ಆದರೆ ನನ್ನ ಹೇಳಿಕೆಯನ್ನು ತಿರುಚಿ ಉದ್ದೇಶಪೂರ್ವಕವಾಗಿ ಹಿಂದಿನ ಒಂದು ಪತ್ರಿಕೆ ಹಾಗೂ ಹಿಂದಿನ ಘಟನೆಗಳನ್ನು ಉಲ್ಲೇಖಿಸಿರುವುದೇ ಅವರ ಮಾನಸಿಕತೆಯನ್ನು ತೋರಿಸುತ್ತದೆ. ಜಾಹೀರಾತು ನೀಡದೇ ನ್ಯೂಸ್ ಹಾಕುವುದಿಲ್ಲ ಎನ್ನುವ ಧೋರಣೆ ಬದಲಾಗಬೇಕು. ನಾನು ಅಲ್ಲಿ ಮಾತನಾಡಿರುವ ವಿಡಿಯೋ ಚಿತ್ರೀಕರಣವಾಗಿದೆ. ಅದನ್ನು ಎಡಿಟ್ ಮಾಡದೆ ಯಥಾವತ್ತಾಗಿ ತೋರಿಸಲಿ ಎಂದು ಸವಾಲು ಹಾಕುತ್ತಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…