ಸರ್ಕಾರದ ಕೆಲವೊಂದು ಯೋಜನೆಗಳು ಫಲಾನುಭವಿಗಳಿಗೆ ಮಾತ್ರ ಪ್ರಯೋಜನವಾಗದೆ ಇನ್ನಿತರ ಮೂಲಗಳಿಗೂ ಸಹಾಯವಾಗುತ್ತದೆ. ಮಹಿಳೆಯರಿಗೆ ಉಚಿತ ಬಸ್ ಯೋಜನೆ ಬಗ್ಗೆ ಬೇರೆ ಯಾವುದೇ ಅಸಮಾಧಾನ ಇದ್ದರೂ ಪುಣ್ಯ ಕ್ಷೇತ್ರಗಳಿಗೆ ಇದರಿಂದ ಲಾಭವೇ ಆಗಿದೆ. ಅಷ್ಟೇ ಅಲ್ಲದೆ ದೇವಾಲಯಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೂ ತಕ್ಕ ಮಟ್ಟಿನ ಲಾಭ ತಂದಿದೆ ಎಂದೇ ಹೇಳಬಹುದು.
ಶಕ್ತಿ ಯೋಜನೆಯಿಂದ #Shakti Scheme ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ ನಂತರ ರಾಜ್ಯದ ತೀರ್ಥ ಕ್ಷೇತ್ರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ರಾಜ್ಯಾದ್ಯಂತ ದೇಗುಲಗಳಿಗೆ ನಾರಿಮಣಿಯರು ದಾಂಗುಡಿ ಇಡುತ್ತಿದ್ದಾರೆ. ವಾರಾಂತ್ಯಗಳಲ್ಲಂತು ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಜೊತೆಗೆ ಕಾಣಿಕೆಗಳನ್ನೂ ಅರ್ಪಿಸುತ್ತಿದ್ದಾರೆ. ಇದರಿಂದ ಒಂದೇ ತಿಂಗಳಲ್ಲಿ ರಾಜ್ಯದ ದೇವಾಲಯಗಳು ಇನ್ನಷ್ಟು ಶ್ರೀಮಂತವಾಗಿವೆ.
ಯಾವ ದೇವಾಲಯಗಳಿಗೆ ಎಷ್ಟು ಆದಾಯ? : 2022ರ ಜೂನ್ 11 ರಿಂದ ಜುಲೈ 15ರ ವರೆಗೆ ಹೋಲಿಕೆ ಮಾಡಿದ್ರೆ 2023 ಜೂನ್ 11 ರಿಂದ ಜುಲೈ 15ರ ವರೆಗೆ ದೇವಸ್ಥಾನಗಳ ಆದಾಯದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.
ಕುಕ್ಕೆ ಸುಬ್ರಮಣ್ಯ ದೇವಾಲಯ
ಕಳೆದ ವರ್ಷ – 11.13 ಕೋಟಿ ರೂ.
ಈ ವರ್ಷ – 11.16 ಕೋಟಿ ರೂ.
ಮೈಸೂರಿನ ಚಾಮುಂಡೇಶ್ವರಿ
ಕಳೆದ ವರ್ಷ – 48.01 ಲಕ್ಷ ರೂ.
ಈ ವರ್ಷ – 3.63 ಕೋಟಿ ರೂ.
ಯಡಿಯೂರು ಸಿದ್ದಲಿಂಗೇಶ್ವರ
ಕಳೆದ ವರ್ಷ – 1.20 ಕೋಟಿ ರೂ.
ಈ ವರ್ಷ – 1.48 ಕೋಟಿ ರೂ.
ನಂಜನಗೂಡು ಶ್ರೀಕಂಠೇಶ್ವರ
ಕಳೆದ ವರ್ಷ – 1.05 ಕೋಟಿ ರೂ.
ಈ ವರ್ಷ – 1.27 ಕೋಟಿ ರೂ.
ಕೊಪ್ಪಳ ಜಿಲ್ಲೆ ಹುಲಿಗೆಮ್ಮದೇವಿ
ಕಳೆದ ವರ್ಷ – 1.02 ಕೋಟಿ ರೂ.
ಈ ವರ್ಷ – 1.41 ಕೋಟಿ ರೂ.
ಬೆಂಗಳೂರು ಬನಶಂಕರಿ
ಕಳೆದ ವರ್ಷ – 65.82 ಲಕ್ಷ ರೂ.
ಈ ವರ್ಷ – 83.64 ಲಕ್ಷ ರೂ.
ದ.ಕನ್ನಡ ಮಹಾಲಿಂಗೇಶ್ವರ
ಕಳೆದ ವರ್ಷ – 43.33 ಲಕ್ಷ ರೂ.
ಈ ವರ್ಷ – 48.09 ಲಕ್ಷ ರೂ.
ಕಳೆದ ವರ್ಷ – 20.76 ಲಕ್ಷ ರೂ.
ಈ ವರ್ಷ – 27.98 ಲಕ್ಷ ರೂ.
ಕನಕಪುರದ ಕಬ್ಬಾಳಮ್ಮ
ಕಳೆದ ವರ್ಷ – 13.96 ಲಕ್ಷ ರೂ.
ಈ ವರ್ಷ – 19.64 ಲಕ್ಷ ರೂ.
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…