ಶಿರಾಡಿ ಘಾಟ್ ಸುರಂಗ ಮಾರ್ಗ..! . ಡಿ ವಿ ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಕೇಳುತ್ತಿದ್ದ ಸುದ್ದಿ. ಇದೀಗ ಮತ್ತೆ ಪ್ರಾಜೆಕ್ಟ್ ವರದಿ ಸಿದ್ಧವಾಗಿದೆ. 14,000 ಕೋಟಿ ರೂಪಾಯಿಯಲ್ಲಿ ಪ್ರಸ್ತಾವಿತ ಸುರಂಗ ಮಾರ್ಗ ಶಿರಾಡಿ ಘಾಟ್ ನಲ್ಲಿ ನಿರ್ಮಾಣ ಮಾಡಲು ವರದಿ ಸಿದ್ಧವಾಗಿದೆ.
ಶಿರಾಡಿ ಘಾಟ್ ಕರ್ನಾಟಕದ ಜೀವನಾಡಿ. ಕರಾವಳಿಯಿಂದ ರಾಜಧಾನಿಗೆ ಸಂಪರ್ಕಿಸುವ ಅಗತ್ಯ ರಸ್ತೆ. ವಾಣಿಜ್ಯ ವಹಿವಾಟು ಉತ್ತಮಗೊಳ್ಳಲು ಶಿರಾಡಿ ಘಾಟ್ ರಸ್ತೆ ವ್ಯವಸ್ಥಿತ ರೀತಿಯಲ್ಲಿರುವುದು ಹಾಗೂ ಮಂಗಳೂರು-ಬೆಂಗಳೂರು ಹೆದ್ದಾರಿಯೂ ಗುಣಮಟ್ಟದಿಂದಲೂ, ವ್ಯವಸ್ಥಿತವಾಗಿ ಇರಬೇಕಾದ್ದು ಅಗತ್ಯವಾಗಿದೆ. ಇಡೀ ರಾಜ್ಯ ಆರ್ಥಿಕ ವಹಿವಾಟಿನ ಮೇಲೂ ಈ ರಸ್ತೆ ಪರಿಣಾಮ ಬೀರುತ್ತದೆ. ಹೀಗಾಗಿ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಗರಿ ಅವರೂ ಈ ರಸ್ತೆಯ ಬಗ್ಗೆ ಆಸಕ್ತಿ ತೋರಿದ್ದಾರೆ. ಅಭಿವೃದ್ಧಿ ಪಡಿಸಲು, ಅದರಲ್ಲೂ ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಅವರು ಕೂಡಾ ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಇದೀಗ ಘಾಟಿ ಪ್ರದೇಶದ 26 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಯೋಜನೆಯ ಪ್ರಕಾರ ನಾಲ್ಕು ಪಥವನ್ನಾಗಿ ಮಾಡಲಾಗುವುದು ಮತ್ತು ಪ್ರಸ್ತಾವಿತ ಆರು ಪಥಗಳ ಸುರಂಗ ರಸ್ತೆಯನ್ನು ಅಭಿವೃದ್ಧಿಪಡಿಸಲು ಇಲಾಖೆ ಈಗಾಗಲೇ ಡಿಪಿಆರ್ ಅನ್ನು ಸಿದ್ಧಪಡಿಸಿದೆ. ಆದರೆ ಅರಣ್ಯ ಇಲಾಖೆಯ, ಪರಿಸರ ಇಲಾಖೆಯ ಅನುಮತಿ ಅಗತ್ಯವಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2025 ರ ವೇಳೆಗೆ ಶಿರಾಡಿ ಘಾಟ್ ಚತುಷ್ಪಥ ರಸ್ತೆಯಾಗಿಯೂ, ಸುರಂಗ ಮಾರ್ಗವಾಗಿಯೂ ಸಂಚಾರಕ್ಕೆ ಲಭ್ಯವಾಗಬಹುದು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…