ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳ ‘ಲೈಟ್‌ ಅಬ್ಬರ’…! ಬೆಂಕಿಗಾಹುತಿಯಾದ ಬಸ್‌ ಘಟನೆ ಮತ್ತೆ ಎಚ್ಚರಿಸಿದ ಅಪಾಯದ ಗಂಟೆ..!

May 17, 2026
7:43 AM
ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳ ಅತಿವೇಗ ಹಾಗೂ ಅತಿಯಾದ LED ಲೈಟುಗಳ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದೆ. ಶಾಂತಿಗ್ರಾಮ ಸಮೀಪ ಬಸ್‌ ಬೆಂಕಿಗಾಹುತಿಯಾದ ಘಟನೆ ಬಳಿಕ ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಗಂಭೀರ ಚರ್ಚೆ ಆರಂಭವಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್‌ ಬಸ್‌ ಹಾಸನ ಜಿಲ್ಲೆಯ ಶಾಂತಿಗ್ರಾಮ ಸಮೀಪ ಟೈಯರ್‌ ಸ್ಫೋಟಗೊಂಡು ಬೆಂಕಿಗಾಹುತಿಯಾದ ಘಟನೆ ರಾಜ್ಯದ ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಮಹಿಳೆಯರು, ಮಕ್ಕಳು ಸೇರಿ 36 ಮಂದಿ ಪ್ರಯಾಣಿಸುತ್ತಿದ್ದ ಬಸ್‌ ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿದರೂ, ಚಾಲಕನ ಸಮಯಪ್ರಜ್ಞೆಯಿಂದ ಎಲ್ಲರನ್ನು ಕೆಳಗಿಳಿಸಿದ್ದರಿಂದ ದೊಡ್ಡ ದುರಂತ ತಪ್ಪಿದೆ. ಆದರೆ ಪ್ರಯಾಣಿಕರ ಲಗೇಜ್‌, ಮೊಬೈಲ್‌, ಹಣ ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ ಅತಿವೇಗ ಹಾಗೂ ತಾಪಮಾನದಿಂದ ಟೈಯರ್‌ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಘಟನೆ ಕೇವಲ ಒಂದು ಬಸ್‌ ಅವಘಡವಷ್ಟೇ ಅಲ್ಲ. ಮಂಗಳೂರು-ಬೆಂಗಳೂರು ನಡುವೆ, ವಿಶೇಷವಾಗಿ ಶಿರಾಡಿ ಘಾಟ್‌ ಮಾರ್ಗದಲ್ಲಿ ರಾತ್ರಿ ವೇಳೆ ಸಂಚರಿಸುವ ಖಾಸಗಿ ಬಸ್‌ಗಳ ಅಬ್ಬರದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

Advertisement

ರಾತ್ರಿ ಹೆದ್ದಾರಿಯಲ್ಲಿ ‘ಲೈಟೇ ಲೈಟು’..! : ರಾತ್ರಿ 10 ಗಂಟೆಯ ನಂತರ ಹೆದ್ದಾರಿಗಳಲ್ಲಿ ಸಂಚರಿಸುವ ಖಾಸಗಿ ಬಸ್‌ಗಳನ್ನು ಗಮನಿಸಿದರೆ ಅತಿಯಾದ LED ಲೈಟುಗಳು, ಭಾರೀ ಫೋಕಸ್‌, ನಿಯಮ ಮೀರಿ ಅಳವಡಿಸಿದ ಹೆಡ್‌ಲೈಟುಗಳು, ಬಸ್ಸಿನ ಸುತ್ತಲೂ ಝಗಮಗಿಸುವ ಲೈಟುಗಳು ಸಾಮಾನ್ಯವಾಗಿವೆ. ಹಲವು ಬಸ್‌ಗಳಲ್ಲಿ ಡಿಮ್ಮರ್‌ ವ್ಯವಸ್ಥೆ ಬಳಸದೇ ಎದುರಿನಿಂದ ಬರುವ ವಾಹನ ಚಾಲಕರಿಗೆ ರಸ್ತೆ ಕಾಣದ ಪರಿಸ್ಥಿತಿ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಘಾಟ್‌ ಪ್ರದೇಶದಲ್ಲಿ ನಿರಂತರ ಬ್ರೇಕ್‌, ಏರು-ಇಳಿಜಾರು, ಬಸ್‌ಗಳ ವೇಗ ಹಾಗೂ ಅತಿಯಾದ ವಿದ್ಯುತ್‌ ಲೋಡ್‌ ಕಾರಣದಿಂದ ವಾಹನಗಳ ತಾಪಮಾನ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ವಾಹನ ತಜ್ಞರು ಅಭಿಪ್ರಾಯಪಡುತ್ತಾರೆ. ಸಾಕಷ್ಟು ವಿದ್ಯುತ್‌ ಬಲ್ಬ್‌ ಗಳಿಗೆ ವಯರ್‌ಗಳು ಇಡೀ ಬಸ್ಸಿನಲ್ಲಿ ಅಳವಡಿಸಲಾಗಿರುತ್ತದೆ, ಇಂತಹ ಸಂದರ್ಭ ಒಂದು ಸಣ್ಣ ಶಾರ್ಟ್‌ ಸರ್ಕ್ಯೂಟ್‌ ಅಥವಾ ಕಿಡಿಯೇ ಸಾಕು, ಕ್ಷಣಾರ್ಧದಲ್ಲಿ ಇಡೀ ಬಸ್‌ ಬೆಂಕಿಗಾಹುತಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

Advertisement

ಇಲಾಖೆಗಳಿಗೆ ಕಾಣದ ಅಪಾಯವೇ..? : ಇದಕ್ಕೂ ಮೊದಲು ರಾಜ್ಯದಲ್ಲಿ ಅನೇಕ ಖಾಸಗಿ ಬಸ್‌ ಅವಘಡಗಳು ನಡೆದಿವೆ. ಆದರೂ ನಿಯಮ ಮೀರಿ ಅಳವಡಿಸಿರುವ ಭಾರೀ ಲೈಟುಗಳು, ಅತಿವೇಗ, ರಾತ್ರಿ ಅಬ್ಬರದ ಚಾಲನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕಾಣಿಸುತ್ತಿಲ್ಲ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಾಮಾನ್ಯ ವಾಹನ ಸವಾರರ ಮೇಲೆ ಸಣ್ಣ ಉಲ್ಲಂಘನೆಗೂ ದಂಡ ವಿಧಿಸುವ ಸಾರಿಗೆ ಇಲಾಖೆ ಹಾಗೂ ಪೊಲೀಸರು, ನಿಯಮ ಮೀರಿ ಸಂಚರಿಸುವ ಕೆಲ ಖಾಸಗಿ ಬಸ್‌ಗಳ ವಿರುದ್ಧ ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ಏನು ಮಾಡಬೇಕು ಇಲಾಖೆ..? :  ತಜ್ಞರ ಪ್ರಕಾರ , ಖಾಸಗಿ ಬಸ್‌ಗಳ ಹೆಚ್ಚುವರಿ LED ಹಾಗೂ ಫೋಕಸ್‌ ಲೈಟುಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ ಇದೆ. ರಾತ್ರಿ ಘಾಟ್‌ ಮಾರ್ಗ ಸಂಚಾರ, ಹೆದ್ದಾರಿ ಸಂಚಾರದಲ್ಲಿ ವಿಶೇಷ ಸುರಕ್ಷತಾ ನಿಯಮ ಜಾರಿಯಾಗಬೇಕು. ಟೈಯರ್‌, ಬ್ರೇಕ್‌, ವೈಯರಿಂಗ್‌ ಸೇರಿದಂತೆ ತಾಂತ್ರಿಕ ತಪಾಸಣೆ ಕಡ್ಡಾಯವಾಗಬೇಕು. ವೇಗ ಮಿತಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಮಾಸಿಕ ಪರಿಶೀಲನೆ ಅಗತ್ಯ. ಮಿತಿ ಮೀರಿ ಇಡೀ ಬಸ್ಸಿನಲ್ಲಿ ಲೈಟ್‌ ಅಳವಡಿಕೆ ನಿಲ್ಲಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

A private sleeper bus travelling from Mangaluru to Bengaluru caught fire near Shanthigrama in Hassan district after a tyre burst late at night. All 36 passengers, including women and children, escaped safely due to the driver’s timely action. The incident has once again raised serious concerns over overspeeding, excessive LED lights, and safety violations by private buses operating through Shiradi Ghat during night hours.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಮರ್ಥ ಸಮನ್ಯು

ಸಮರ್ಥ ಸಮನ್ಯು , - ಬರಹಗಾರರು, ವಿಮರ್ಶಕರು.

ಇದನ್ನೂ ಓದಿ

ಹಲಸು ಈಗ ಕೇವಲ ಹಣ್ಣು ಅಲ್ಲ… ಸೂಪರ್ ಫುಡ್..!‌ ಹಲಸಿನ ಹಣ್ಣಿನ ಔಷಧೀಯ ಗುಣಗಳಿಗೆ ಕೇರಳದಲ್ಲಿ ಪ್ರಚಾರ ಅಭಿಯಾನ
June 26, 2026
1:15 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”
June 26, 2026
12:52 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ
June 25, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ
June 25, 2026
8:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror