Advertisement
MIRROR FOCUS

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

Share

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು–ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ವಾಹನ ದಟ್ಟಣೆ ಹೆಚ್ಚಾಗಿ, ಸಂಚಾರ ನಿಧಾನಗೊಳ್ಳುವ ಅಥವಾ ದೀರ್ಘ ಟ್ರಾಫಿಕ್‌ ಜಾಮ್‌ ಉಂಟಾಗುವ ಸಾಧ್ಯತೆ ಇದೆ. ಗುಂಡ್ಯದಿಂದ ಸಕಲೇಶಪುರ–ಮಾರನಹಳ್ಳಿ ಭಾಗದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಒಂದೇ ಸಮಯದಲ್ಲಿ ಸಂಚರಿಸುವ ನಿರೀಕ್ಷೆಯಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯವಿದೆ.

Advertisement

ಗಣೇಶ ಹಬ್ಬ ಹಾಗೂ ಮೂರು ದಿನಗಳ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕರಾವಳಿ ಹಾಗೂ ಮಲೆನಾಡಿನ ವಿವಿಧ ಭಾಗಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಶುಕ್ರವಾರ ರಾತ್ರಿ ಊರಿಗೆ ತೆರಳುವ ಸಂದರ್ಭದಲ್ಲಿಯೇ ಶಿರಾಡಿ ಘಾಟ್‌ನ ಹಲವು ಕಡೆಗಳಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಗಿತ್ತು.

ಶುಕ್ರವಾರ ರಾತ್ರಿ ಸಕಲೇಶಪುರ ದಾಟಿ ಮಾರನಹಳ್ಳಿ ತಲುಪಲು ಮಧ್ಯರಾತ್ರಿ 12 ಗಂಟೆಯಾಗಿದ್ದರೆ, ಮಾರನಹಳ್ಳಿಯಿಂದ ಗುಂಡ್ಯ ತಲುಪುವಷ್ಟರಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆಯಾಗಿತ್ತು. ಅಂದರೆ, ಘಾಟ್‌ ಪ್ರದೇಶದ ಸಂಚಾರದಲ್ಲಿ ಉಂಟಾದ ಅಡಚಣೆ ಪ್ರಯಾಣಿಕರ ಸಮಯವನ್ನು ಹಲವು ಗಂಟೆಗಳಷ್ಟು ವಿಸ್ತರಿಸಿತ್ತು. ನಿನ್ನೆಯೂ ಅದೇ ಮಾದರಿಯಲ್ಲಿ ಕೆಲವು ಕಡೆ ಟ್ರಾಫಿಕ್‌ ಜಾಮ್‌ ಕಂಡುಬಂದಿದೆ. ಭಾನುವಾರ ಕೂಡಾ ಟ್ರಾಫಿಕ್‌ ಜಾಮ್‌ ಕಂಡುಬಂದಿದೆ.

ಈಗ ರಜೆ ಮುಗಿಸಿ ಬೆಂಗಳೂರಿನತ್ತ ಮರಳುವ ಪ್ರಯಾಣ ಆರಂಭವಾಗಲಿದೆ. ಸೋಮವಾರ ಮಧ್ಯಾಹ್ನದ ಬಳಿಕ ಒಂದೇ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳು ಶಿರಾಡಿ ಮಾರ್ಗ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಇದೇ ರೀತಿಯ ಪರಿಸ್ಥಿತಿ ಮತ್ತೆ ಎದುರಾಗುವ ಆತಂಕವಿದೆ.

ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಪ್ರಮುಖ ಸವಾಲು ಎಂದರೆ ಘನ ವಾಹನಗಳು. ಘಾಟ್‌ನ ಏರು-ಇಳಿಜಾರು ಅಥವಾ ತಿರುವು ಪ್ರದೇಶಗಳಲ್ಲಿ ಲಾರಿ, ಕಂಟೈನರ್‌ ಸೇರಿದಂತೆ ಘನ ವಾಹನಗಳು ಕೆಟ್ಟು ನಿಲ್ಲುವುದು ಅಥವಾ ನಿಧಾನಗತಿಯಲ್ಲಿ ಸಾಗುವುದು ಆರಂಭವಾದರೆ ಅದರ ಪರಿಣಾಮ ಹಿಂದಿನಿಂದ ಬರುವ ನೂರಾರು ವಾಹನಗಳ ಸಾಲು ಸಾಲಾಗಿ ಉಳಿಯುತ್ತವೆ.  ವಾಹನಗಳು ಶಿರಾಡಿ ಘಾಟಿಯಲ್ಲಿ ಬಾಕಿಯಾದರೆ ತಕ್ಷಣವೇ ತೆರವು ಕಾರ್ಯಾಚರಣೆ ನಡೆದರೆ ವಾಹನ ದಟ್ಟಣೆ ಗಂಟೆಗಟ್ಟಲೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಘಾಟ್‌ನಲ್ಲಿ ಘನ ವಾಹನಗಳು ಬಾಕಿಯಾದರೆ ತಕ್ಷಣ ತೆರವುಗೊಳಿಸುವ ವ್ಯವಸ್ಥೆಯಾದರೆ ಟ್ರಾಪಿಕ್‌ ಜಾಮ್‌ ಕೂಡಾ ನಿಯಂತ್ರಣವಾಗಲು ಸಾಧ್ಯ.

ಪೊಲೀಸರ ನಿಗಾ ಅಗತ್ಯ :  ಗುಂಡ್ಯದಿಂದ ಸಕಲೇಶಪುರದವರೆಗೆ ಪ್ರಮುಖ ತಿರುವುಗಳು, ಏರು-ಇಳಿಜಾರು ಪ್ರದೇಶಗಳು ಹಾಗೂ ವಾಹನಗಳು ನಿಧಾನಗೊಳ್ಳುವ ಸ್ಥಳಗಳಲ್ಲಿ ಪೊಲೀಸ್‌ ಸಿಬ್ಬಂದಿಯ ನಿಗಾ ವ್ಯವಸ್ಥೆ ಮಾಡುವುದು ಅಗತ್ಯ. ಸಂಚಾರದ ಒತ್ತಡ ಹೆಚ್ಚಾದ ಸಂದರ್ಭದಲ್ಲಿ ಸ್ಥಳೀಯವಾಗಿ ವಾಹನಗಳನ್ನು ನಿಯಂತ್ರಿಸುವುದು, ಅಪಘಾತ ಅಥವಾ ವಾಹನ ಕೆಟ್ಟು ನಿಲ್ಲುವ ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವುದು ಹಾಗೂ ಅಗತ್ಯವಿದ್ದರೆ ಸಂಚಾರವನ್ನು ಹಂತ ಹಂತವಾಗಿ ನಿಯಂತ್ರಿಸುವ ಕ್ರಮಗಳು ಜಾರಿಯಾಗಬೇಕು.

ವಿಶೇಷವಾಗಿ ಸೋಮವಾರ ಮಧ್ಯಾಹ್ನದಿಂದ ರಾತ್ರಿ ಅವಧಿಯವರೆಗೆ ಶಿರಾಡಿ ಘಾಟ್‌ನ ಸಂಚಾರದ ಮೇಲೆ ನಿರಂತರ ನಿಗಾ ಇರಿಸಿದರೆ ದೀರ್ಘಕಾಲದ ಜಾಮ್‌ ಉಂಟಾಗುವುದನ್ನು ತಪ್ಪಿಸಲು ಸಾಧ್ಯವಾಗಬಹುದು.

ಪ್ರಯಾಣಿಕರೂ ಮುಂಜಾಗ್ರತೆ ವಹಿಸಬೇಕು :  ರಜೆ ಮುಗಿಸಿ ಬೆಂಗಳೂರಿನತ್ತ ತೆರಳುವವರು ಸಾಧ್ಯವಾದರೆ ಪ್ರಯಾಣದ ಸಮಯವನ್ನು ಯೋಜಿಸಿಕೊಂಡು ಹೊರಡುವುದು ಉತ್ತಮ. ವಾಹನದಲ್ಲಿ ಸಾಕಷ್ಟು ಇಂಧನ, ಕುಡಿಯುವ ನೀರು ಹಾಗೂ ಅಗತ್ಯ ವಸ್ತುಗಳನ್ನು ಹೊಂದಿರುವುದು ಸೂಕ್ತ. ಮಕ್ಕಳೊಂದಿಗೆ ಹಾಗೂ ವಯೋವೃದ್ಧರೊಂದಿಗೆ ಪ್ರಯಾಣಿಸುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಅಗತ್ಯವಿಲ್ಲದಿದ್ದರೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವುದು, ತಿರುವು ಪ್ರದೇಶಗಳಲ್ಲಿ ಓವರ್‌ಟೇಕ್‌ ಮಾಡುವುದು ಅಥವಾ ಸಂಚಾರದ ನಡುವೆ ಅನಗತ್ಯವಾಗಿ ವಾಹನ ನಿಲ್ಲಿಸುವುದನ್ನು ತಪ್ಪಿಸಬೇಕು. ವಾಹನಗಳ ಸಾಲು ಇದ್ದರೆ, ಸಾಲು ತಪ್ಪಿಸಿ  ಮುಂದೆ ಹೋಗುವುದು ತಪ್ಪಿಸಬೇಕು.

ರಜೆ ಮುಗಿಯುತ್ತಿದೆ,  ಸಾವಿರಾರು ವಾಹನಗಳು ಒಂದೇ ಮಾರ್ಗದಲ್ಲಿ ಮರಳಲಿವೆ. ಹೀಗಾಗಿ ಶಿರಾಡಿ ಘಾಟ್‌ನಲ್ಲಿ ಸೋಮವಾರದ ಸಂಚಾರಕ್ಕೆ ಮುಂಚಿತ ಸಿದ್ಧತೆ ಅತ್ಯಗತ್ಯ. ಒಂದು ವಾಹನದ ತೊಂದರೆ ನೂರಾರು ವಾಹನಗಳ ಪ್ರಯಾಣವನ್ನು ನಿಲ್ಲಿಸದಂತೆ, ತಕ್ಷಣದ ತೆರವು ವ್ಯವಸ್ಥೆ, ಪೊಲೀಸ್‌ ನಿಗಾ ಹಾಗೂ ಸಂಚಾರ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Traffic congestion is likely on the Shiradi Ghat section of the Mangaluru–Bengaluru highway from Monday afternoon as holidaymakers return to Bengaluru after the three-day Ganesh festival break. Authorities need to ensure quick removal of stranded heavy vehicles, police monitoring at vulnerable stretches and effective traffic management to prevent travellers from being stuck for hours.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

9 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

13 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago