ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ದೈವ-ದೇವರನ್ನು ನೆನಪಾಗುತ್ತದೆ. ಇಲ್ಲೂ ಹಾಗೆ, ಏನಾದರೂ ಸಂಕಟವಾದರೆ ತಕ್ಷಣ ನೆನಪಾಗುವುದು ಈ ದೈವ. ಹೀಗಾಗಿ ಇಲ್ಲಿ ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ. ಈ ವಿಶೇಷವಾದ ದೈವದ ಕೋಲ ನಡೆಯುವುದು ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ ಕಿಲಮರಿತ್ತಾಯ ಜೋಡು ನೇಮವು ವೈಶಿಷ್ಟ್ಯವನ್ನು ಪಡೆದಿದೆ. ಜಾತ್ರಾ ಆರಂಭದ ದಿನ ಹಾಗೂ ಮರುದಿನ ಈ ನೇಮೋತ್ಸವ ನಡೆದುಕೊಂಡು ಬರುತ್ತಿದೆ. ದೈವರಾದನೆಯಲ್ಲಿ ದೈವದ ಅಣಿಗಳಿಗೆ ಮಹತ್ವದ ಪ್ರಾಧಾನ್ಯತೆ ಇದ್ದು, ಶಿಶಿಲದಲ್ಲಿರುವ ಕಿಲಮರಿತ್ತಾಯನ ಅಣಿ ಉಳಿದ ದೈವಗಳಂತಲ್ಲ. ಈ ದೈವದ ಅಣಿಯು ದೈವದ ಮುಂಭಾಗದಲ್ಲಿ ಇರುವುದೇ ಇಲ್ಲಿನ ವಿಶೇಷ. ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುವ ಪದ್ದತಿ ಇದೆ.ಹಾರಿಸಿದ ಕೋಳಿಗಳನ್ನು ನತ೯ಕ ಕುಟುಂಬಸ್ಥರು ಸಾಕಾಣಿಕೆ ಮಾಡುತ್ತಾರೆ.ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ.
ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುತ್ತಾರೆ.
ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದರೆ ಪರಿಹಾರವನ್ನು…
ಪ್ರತಿ ವರ್ಷದಂತೆ ಈ ಬಾರಿಯೂ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು…
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…